ಮತ್ತೆ ಮುನ್ನೆಲೆಗೆ ಬಂದ ಹಿಜಾಬ್ ವಿವಾದ – ಆಪರೇಷನ್ ಥಿಯೇಟರ್ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳ ಮನವಿ

ಮತ್ತೆ ಮುನ್ನೆಲೆಗೆ ಬಂದ ಹಿಜಾಬ್ ವಿವಾದ – ಆಪರೇಷನ್ ಥಿಯೇಟರ್ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳ ಮನವಿ

ಕರ್ನಾಟಕದ ಮಾದರಿಯಲ್ಲೇ ಕೇರಳದಲ್ಲೂ ಹಿಜಾಬ್ ವಿವಾದ ಭುಗಿಲೇಳುವ ಎಲ್ಲಾ ಸಾಧ್ಯತೆಗಳೂ ಇವೆ. ಯಾಕೆದಂರೆ ಕೇರಳದಲ್ಲಿ ಮೆಡಿಕಲ್​ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ವಿಚಾರವಾಗಿ ವಿಚಿತ್ರ ಮನವಿಯೊಂದನ್ನ ಮಾಡಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಂಪರ್‌! – 5 ಕೆಜಿ ಅಕ್ಕಿ ಜೊತೆಗೆ ಮತ್ತೆ 5 ಕೆಜಿಗೆ ಹಣ ನೀಡಲು ನಿರ್ಧಾರ

ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಏಳು ಮಂದಿ ವಿದ್ಯಾರ್ಥೀನಿಯರು ಸರ್ಜರಿ ವೇಳೆ ಹಿಜಾಬ್ ಮಾದರಿಯಲ್ಲಿ ಬಟ್ಟೆ ಧರಿಸಲು ಅವಕಾಶ ನೀಡುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಸರ್ಜರಿ ವೇಳೆ ಆಪರೇಷನ್​ ಥಿಯೇಟರ್​ನಲ್ಲಿ ನಮ್ಮ ತಲೆಯನ್ನ ಕವರ್​ ಮಾಡೋದಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ಧರ್ಮದ ಪ್ರಕಾರ ತಲೆಯನ್ನ ಮುಚ್ಚಲೇಬೇಕು. ವೈದ್ಯಕೀಯ ನಿಯಮಗಳ ಜೊತೆ ನಮ್ಮ ಧಾರ್ಮಿಕ ನಂಬಿಕೆಯನ್ನ ಪಾಲಿಸಬೇಕು ಅವಕಾಶ ನೀಡಬೇಕು. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡುವಂತೆ 7 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಉದ್ದನೆಯ ಸರ್ಜಿಕಲ್ ಜ್ಯಾಕೇಟ್ ಮತ್ತು ತಲೆಯನ್ನ ಕವರ್ ಮಾಡುವ ಸರ್ಜಿಕಲ್ ಬಟ್ಟೆ ಲಭ್ಯವಿದ್ದು, ಅದನ್ನ ಧರಿಸೋಕಾದ್ರೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಮನವಿಗೆ ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲರು, ವಿದ್ಯಾರ್ಥಿನಿಯರ ಮನವಿಯನ್ನ ಸದ್ಯಕ್ಕಂತೂ ಪುರಸ್ಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಮತಿಯೊಂದನ್ನ ರಚಿಸಿ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಅಂತಾ ತಿರುವನಂತಪುರ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾಕ್ಟರ್ ಮೋರಿಸ್ ಸ್ಪಷ್ಟಪಡಿಸಿದ್ದಾರೆ. ಆದ್ರೆ, ವಿದ್ಯಾರ್ಥಿನಿಯರ ಈ ಮನವಿ ಕೇರಳದಲ್ಲಿ ಭಾರಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

suddiyaana