ಅಬ್ಬಬ್ಬಾ.. ಈ ದಾಖಲೆಯನ್ನ ಯಾರೂ ಮುರಿಯೋಕೆ ಆಗಲ್ಲ – ಈ ಮಹಾತಾಯಿಗೆ ಜನಿಸಿದ್ದು ಎಷ್ಟು ಮಕ್ಕಳು ಗೊತ್ತಾ?
ಈಗೆಲ್ಲಾ ಸಿಟಿಗಳಲ್ಲಿ ಒಂದು ಮಗು ಸಾಕಪ್ಪ ಅಂತಾರೆ.. ಹಳ್ಳಿಗಳ ಕಡೆ ಎರಡು ಅಥವಾ ಮೂರು ಮಕ್ಕಳನ್ನ ಮಾಡಿಕೊಳ್ತಾರೆ. ನಾಲ್ಕೈದು ಇದ್ದರಂತೂ ಅಯ್ಯೋ ಅಷ್ಟೊಂದು ಮಕ್ಕಳಾ ಅಂತಾ ಕೇಳ್ತಾರೆ. ಆದ್ರೆ ಈ ಮಹಿಳೆ ಬರೋಬ್ಬರಿ 69 ಮಕ್ಕಳನ್ನ ಹೆತ್ತು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ : ಸಿನಿಮಾ ಹೀರೋ ರೀತಿ ಮಿಂಚಿದ ಧೋನಿ – ಮಹಿ ಹೊಸ ಲುಕ್ಗೆ ಫ್ಯಾನ್ಸ್ ಫಿದಾ
ಒಂದಲ್ಲ ಎರಡಲ್ಲ 69 ಮಕ್ಕಳು. ಅದೂ ಕೂಡ ಒಬ್ಬಳೇ ತಾಯಿ. 18 ನೇ ಶತಮಾನದಲ್ಲಿ ರಷ್ಯಾದ ಫಿಯೋಡರ್ ವಾಸಿಲಿಯೆವ್ ಮತ್ತು ವ್ಯಾಲೆಂಟಿನಾ ದಂಪತಿ ವಿಶ್ವದಲ್ಲೇ ಅತೀ ಹೆಚ್ಚು ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. 16 ಬಾರಿ ಅವಳಿ ಮಕ್ಕಳು, 7 ಬಾರಿ ತ್ರಿವಳಿ ಮಕ್ಕಳು, 4 ಬಾರಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇನ್ನೊಂದು ಅಚ್ಚರಿ ವಿಷ್ಯ ಅಂದ್ರೆ ಹೆರಿಗೆ ವೇಳೆ ಒಮ್ಮೆ ಅವಳಿ ಮಕ್ಕಳು ಹಾಗೂ ತ್ರಿವಳಿ ಮಕ್ಕಳು ಮೃತಪಟ್ಟಿವೆ. ಈ ಮಕ್ಕಳೂ ಕೂಡ ಬದುಕಿದ್ರೆ ಜನ್ಮ ನೀಡಿದ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಅದೆಲ್ಲ ಏನೇ ಇದ್ರೂ ಈ ದಾಖಲೆಯನ್ನ ಈಗಿನ ಕಾಲದಲ್ಲಿ ಬ್ರೇಕ್ ಮಾಡೋದು ಕಷ್ಟನೇ ಬಿಡಿ.