ಕೊಲ್ಕತ್ತಾದ ಈಡನ್ಗಾರ್ಡನ್ಸ್ನಲ್ಲಿ ಹೈವೋಲ್ಟೇಜ್ ಪಂದ್ಯ – ಭಾರತದ ಬೌಲರ್‌ಗಳಿಗೆ ನೆರವಾಗುತ್ತಾ ಈ ಪಿಚ್?

ಕೊಲ್ಕತ್ತಾದ ಈಡನ್ಗಾರ್ಡನ್ಸ್ನಲ್ಲಿ ಈ ಹೈವೋಲ್ಟೇಜ್ ಮ್ಯಾಚ್ ನಡೀತಿದ್ದು, ಇಲ್ಲಿನ ಪಿಚ್ ಕಂಡೀಷನ್ ಹೇಗಿದೆ? ಬ್ಯಾಟಿಂಗ್ ಪಿಚ್ಚಾ..? ಇಲ್ಲಾ ಬೌಲಿಂಗ್ ಪಿಚ್ಚಾ? ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ದಕ್ಷಿಣ ಆಫ್ರಿಕಾ ಯಾವ ರೀತಿ ಚಾಲೆಂಜ್ ಆಗಬಹುದು? ಇವೆಲ್ಲದರ ಕುರಿತ ಮಾಹಿತಿ ಇಲ್ಲಿದೆ.
ಕೊಲ್ಕತ್ತಾದ ಪಿಚ್ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಫೇವರ್. ಇದನ್ನ ಬ್ಯಾಟಿಂಗ್ ಪಿಚ್ ಅಂತಾನೆ ಹೇಳಬಹುದು. ಹೀಗಾಗಿ ಈಡನ್ ಗಾರ್ಡನ್ಸ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮಧ್ಯೆ ಹೈಸ್ಕೋರಿಂಗ್ ಗೇಮ್ ನಡೆಯೋದು ಗ್ಯಾರಂಟಿ. ಆದ್ರೆ ಮ್ಯಾಚ್ ಕಂಟಿನ್ಯೂ ಆದಂತೆಲ್ಲಾ ಲೇಟರ್ ಸ್ಟೇಜ್ನಲ್ಲಿ ಬಾಲ್ ಹೆಚ್ಚು ಸ್ಪಿನ್ ಆಗುತ್ತೆ. ಅದ್ರಲ್ಲೂ ಸೆಕೆಂಡ್ ಇನ್ನಿಂಗ್ಸ್ ವೇಳೆಯೂ ಸ್ಪಿನ್ನರ್ಸ್ಗಳಿಗೆ ಸಾಕಷ್ಟು ಅಂಡ್ವಾಂಟೇಜ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಮತ್ತೊಮ್ಮೆ ಸ್ಪಿನ್ನರ್ಸ್ಗಳ ರೋಲ್ ತುಂಬಾ ಇಂಪಾರ್ಟೆಂಟ್ ಆಗಿರುತ್ತೆ. ಹಾಗಂತಾ ಫಾಸ್ಟ್ ಬೌಲರ್ಸ್ಗಳಿಗೆ ಯಾವುದೇ ಬೆನಿಫಿಟ್ ಇರಲ್ಲ ಅಂತೇನಲ್ಲ. ಈಡನ್ಗಾರ್ಡನ್ಸ್ ಪಿಚ್ ಕಪ್ಪು ಕಾಟನ್ ಮಣ್ಣನ್ನ ಬಳಕೆ ಮಾಡಲಾಗಿದೆ. ಈ ಮಣ್ಣಿನ ಬಳಕೆಯಿಂದ ಬಾಲ್ ಹೆಚ್ಚು ಬೌನ್ಸ್ ಆಗುತ್ತೆ. ಹೀಗಾಗಿ ಆರಂಭದಲ್ಲಿ ಪೇಸ್ ಬೌಲರ್ಸ್ಗಳು ಒಂದಷ್ಟು ಆಟವಾಡಬಹುದು. ಅದ್ರಲ್ಲೂ ಸೆಕೆಂಡ್ ಇನ್ನಿಂಗ್ಸ್ ವೇಳೆಯಂತೂ ಪೇಸ್ ಬೌಲರ್ಸ್ಗೂ ಇನ್ನೂ ಹೆಚ್ಚು ಹೆಲ್ಪ್ ಆಗಬಹುದು. ಸ್ಪಿನ್ನರ್ಸ್ಗಳಿಗೂ ಅಷ್ಟೇ, ಬಾಲ್ ಎಕ್ಸ್ಟ್ರಾ ಬೌನ್ಸ್ ಆಗೋದ್ರಿಂದ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಇಲ್ಲಿ ಬ್ಯಾಟಿಂಗ್ ಮಾಡೋದು ದೊಡ್ಡ ಚಾಲೆಂಜ್ ಆಗುತ್ತೆ. ಹೀಗಾಗಿ ಟಾಸ್ ಗೆದ್ದ ಟೀಂ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೋದು ಆಲ್ಮೋಸ್ಟ್ ಗ್ಯಾರಂಟಿ. ಒಂದು ಟೀಂ ಇಂಡಿಯಾ ಫಸ್ಟ್ ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ, ಸೆಕೆಂಡ್ ಇನ್ನಿಂಗ್ಸ್ ವೇಳೆ ನಮ್ಮ ಬೌಲರ್ಸ್ಗಳು ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಗ್ರೌಂಡ್ನಲ್ಲಿ ಒಟ್ಟು ಎಷ್ಟು ವಂಡೇ ಮ್ಯಾಚ್ಗಳು ನಡೆದಿವೆ? ಟ್ರ್ಯಾಕ್ ರೆಕಾರ್ಡ್ ಏನು ಹೇಳುತ್ತೆ ಅನ್ನೋದನ್ನ ಈ ಕೆಳಗೆ ನೋಡೋಣ.
ಈಡನ್ ಗಾರ್ಡನ್ಸ್ ಟ್ರ್ಯಾಕ್ ರೆಕಾರ್ಡ್!
ಫಸ್ಟ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 234
2014ರಲ್ಲಿ ಶೀಲಂಕಾ ವಿರುದ್ಧ ಭಾರತ 404/5
1993ರಲ್ಲಿ ವೆಸ್ಟ್ಇಂಡೀಸ್ನ್ನ ಭಾರತ 123ಕ್ಕೆ ಆಲೌಟ್ ಮೊದಲು ಬ್ಯಾಟಿಂಗ್ ಮಾಡಿದ ತಂಡ 19 ಬಾರಿ ಗೆದ್ದಿದೆ ಚೇಸಿಂಗ್ ಮಾಡಿದ ಟೀಂ 13 ಬಾರಿ ಮ್ಯಾಚ್ ಗೆದ್ದಿದೆ