ಕೈತುಂಬಾ ಕಾಸು.. ಆಟದಲ್ಲಿ ಲಾಸು – ತಂಡಗಳಿಗೇ ಹೊರೆಯಾದ ಸ್ಟಾರ್ಸ್!

2026ರ ಐಪಿಎಲ್ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ. ಪ್ಲೇ ಆಫ್ ಲೆಕ್ಕಾಚಾರಗಳು ಸ್ಟಾರ್ಟ್ ಆಗಿದೆ. ಒಂದಷ್ಟು ಟೀಮ್ಸ್ ಟಾಪ್ನಲ್ಲಿದ್ರೆ ಮತ್ತೊಂದಷ್ಟು ತಂಡಗಳು ಬಾಟಮ್ನಲ್ಲಿವೆ. ಸದ್ಯಕ್ಕಂತೂ ಮ್ಯಾಥಮೆಟಿಕಲಿ ಎಲ್ರಿಗೂ ಪ್ಲೇ ಆಫ್ ರೇಸ್ನಲ್ಲಿ ಚಾನ್ಸ್ ಇದೆ. ಬಟ್ ಫೈನಲ್ ಆಗೋಕೆ ಇನ್ನೆರಡು ವಾರ ಬೇಕು. ಸೋ ಇಂಥಾ ಟೈಮಲ್ಲಿ ಡು ಆರ್ ಡೈ ಥರನೇ ಪ್ರತೀ ಪಂದ್ಯ ಆಡ್ಬೇಕಾಗುತ್ತೆ. ಆದ್ರೆ ಮಸ್ಟ್ ವಿನ್ ಟಾರ್ಗೆಟ್ನಲ್ಲಿ ಫೀಲ್ಡಿಗಿಳಿತಿರೋ ತಂಡಗಳಿಗೆ ದುಬಾರಿ ಆಟಗಾರರೇ ಹೊರೆಯಾಗ್ತಿದ್ದಾರೆ. ಕೈತುಂಬಾ ಕಾಸು ಎಣಿಸೋರು ಆಟದಲ್ಲಿ ಮಾತ್ರ ಲಾಸ್ ಎನ್ನುವಂತಿದ್ದಾರೆ.
ಇದನ್ನೂ ಓದಿ : CSK ಪರ ತಲಾ ಆಡೋದೇ ಇಲ್ವಾ? – ದೆಹಲಿ ವಿರುದ್ಧದ ಪಂದ್ಯದಲ್ಲೂ ಧೋನಿ OUT
ಐಪಿಎಲ್ನಲ್ಲಿ ಆಡ್ತಿರೋ 10 ಫ್ರಾಂಚೈಸಿಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಕೋಟಿ ಕೋಟಿಗಳ ಲೆಕ್ಕದಲ್ಲಿ ಸಂಭಾವನೆಯನ್ನೂ ಜೇಬಿಸಿಗಿಳಿಸಿಕೊಳ್ತಾರೆ. ಇದ್ರಲ್ಲಿ ಒಂದಷ್ಟು ಆಟಗಾರರು ಕಾಸಿಗೆ ತಕ್ಕಂತೆ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಟ್ ಇನ್ನೂ ಕೆಲವ್ರು ಕೊಟ್ಟ ಕಾಸಿಗೆ ದಂಡ ಎನ್ನುವಂತಿದ್ದಾರೆ. ಸ್ಟಾರ್ ಪ್ಲೇಯರ್ಸ್ ಎನಿಸಿಕೊಂಡವ್ರೇ ಪಲ್ಟಿ ಹೊಡೀತಿದ್ದಾರೆ.
ದುಬಾರಿ ದುಡ್ಡು.. ತಂಡಕ್ಕೆ ಭಾರ!
ಆಟಗಾರ ತಂಡ ಸಂಭಾವನೆ ರನ್ಸ್
ರಿಷಭ್ ಪಂತ್ ಲಕ್ನೋ ₹27 ಕೋಟಿ 204
ಸೂರ್ಯಕುಮಾರ್ ಯಾದವ್ ಮುಂಬೈ ₹16.35 ಕೋಟಿ 195
ಕ್ಯಾಮರೋನ್ ಗ್ರೀನ್ ಕೊಲ್ಕತ್ತಾ ₹25.20 ಕೋಟಿ 199
ನಿಕೋಲಸ್ ಪೂರನ್ ಲಕ್ನೋ ₹21 ಕೋಟಿ 145
ಹಾರ್ದಿಕ್ ಪಾಂಡ್ಯ ಮುಂಬೈ ₹16.35 ಕೋಟಿ 146
ರುತುರಾಜ್ ಗಾಯಕ್ವಾಡ್ ಚೆನ್ನೈ ₹18 ಕೋಟಿ 245
ರಿಯಾನ್ ಪರಾಗ್ ರಾಜಸ್ಥಾನ ₹14 ಕೋಟಿ 207
ಹೀಗೆ ಸೀಸನ್ವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯೋರು ಆನ್ಫೀಲ್ಡ್ನಲ್ಲಿ ಮಾತ್ರ ಸದ್ದು ಮಾಡ್ತಿಲ್ಲ. ಪ್ಲೇಯಿಂಗ್ 11ನಿಂದಲೂ ಹೊರಗಿಡೋಕೆ ಆಗ್ತಿಲ್ಲ. ಸ್ಟಾರ್ ಆಟಗಾರರ ಫೇಲ್ಯೂರ್ ಫ್ರಾಂಚೈಸಿಗಳಿಗೂ ದೊಡ್ಡ ಹೊಡೆತ ನೀಡ್ತಿದೆ. ರಿಸಲ್ಟ್ನಲ್ಲೂ ಪರಿಣಾಮ ಬೀರ್ತಿದೆ.

ನೋಡಿರಿ

