ಹೈ ಹೀಲ್ಸ್ ಮಹಿಳೆಯರದ್ದಲ್ಲ.. ಪುರುಷರ ಪಾದರಕ್ಷೆ! – ಹೈ ಹೀಲ್ಸ್ ಪಾದರಕ್ಷೆಯ ಹಿಸ್ಟರಿ ಗೊತ್ತಾ?
ಫ್ಯಾಷನ್ ಜಗತ್ತು ಎಷ್ಟು ವೇಗವಾಗಿ ಓಡ್ತಾ ಇದೆ ಅಂದ್ರೆ ಇಂದು ಇದ್ದ ಟ್ರೆಂಡ್ ನಾಳೆ ಇರಲ್ಲ, ನಾಳೆ ಇದ್ದಿದ್ದು ಮುಂದಿನ ದಿನ ಇರಲ್ಲ. ಇವತ್ತು ಬಾಯ್ಸ್ ಹಾಕೋ ಹೊಸ ಸ್ಟೈಲ್‌ನ ಡ್ರೆಸ್, ಚಪ್ಪಲಿ ಕೆಲವೇ ದಿನಗಳ ನಂತರ ಅದು ಮಹಿಳೆಯರ ಟ್ರೆಂಡ್ ಆಗಿ ಬಿಟ್ಟಿರುತ್ತೆ. ಹೀಗೆ ಬದಲಾಗುತ್ತಿರುವ ಜನರ ರುಚಿಗೆ, ಫ್ಯಾಷನ್ ಸೆನ್ಸ್ಗೆ ಈ ಸ್ಟೈಲ್ ಸ್ಟೇಟ್ಮೆಂಟ್ ಅನ್ನೋದು ಬದಲಾಗುತ್ತಲೇ ಇರುತ್ತೆ. ಬಟ್ಟೆ, ಆಭರಣ, ಮೇಕಪ್ ಅಷ್ಟೇ ಯಾಕೆ ಕಾಲಿಗೆ ಹಾಕಿಕೊಳ್ಳುವ ಚಪ್ಪಲಿಗಳ ಟ್ರೆಂಡ್ ಕೂಡ ಬದಲಾಗುತ್ತಿದೆ. ನಿಮ್ಗೆ ಒಂದು ವಿಚಾರ ಗೊತ್ತಾ? ಹೈ ಹೀಲ್ಸ್ ತಯಾರಿಸಿದ್ದು ಮಹಿಳೆಯರಿಗಾಗಿ ಅಲ್ಲ.. ಪುರುಷರಿಗಾಗಿ.. ಅಷ್ಟಕ್ಕೂ ಹೈ ಹೀಲ್ಸ್ ತಯಾರಿಸಿದ್ದು ಯಾಕೆ? ಪುರುಷರು ಧರಿಸುತ್ತಿದ್ದ ಹೈ ಹೀಲ್ಸ್ ಅನ್ನ ಮಹಿಳೆಯರು ಯಾವಾಗ ಧರಿಸಲು ಪ್ರಾರಂಭಿಸಿದ್ರು? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ವಿವಾಹ ವಯಸ್ಸು 21ಕ್ಕೆ ಏರಿಕೆ! – ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ!
ಮಹಿಳೆಯರಿಗೆ ಹೈ ಹೀಲ್ಸ್ ಧರಿಸಿ ಓಡಾಡುವುದೆಂದರೆ ಇಷ್ಟ. ಅದರಲ್ಲಿಯೂ ದೊಡ್ಡ ದೊಡ್ಡ ನಗರಗಳಲ್ಲಿ ಇತ್ತೀಚೆಗೆ ಹೈ ಹೀಲ್ಸ್ ಧರಿಸುವುದೆ ಇದ್ರೆ ಇವ್ರು ಓಲ್ಡ್ ಟೈಪ್ ಅಂತ ಹೇಳುವಂತಾಗಿದೆ. ಮೊದಲೆಲ್ಲಾ ಮಾಡೆಲ್‌ಗಳು, ಸೆಲೆಬ್ರಿಟಿಗಳು ಮಾತ್ರ ಹೈ ಹೀಲ್ಸ್ ಧರಿಸುತ್ತಿದ್ದರು. ಆದರೆ ಈಗ ಜನಸಾಮಾನ್ಯರೂ ಸಹ ಇಷ್ಟಪಟ್ಟು ಹೈ ಹೀಲ್ಸ್ ಧರಿಸುತ್ತಾರೆ. ಪಾರ್ಟಿ, ಶಾಪಿಂಗ್ ಮತ್ತು ಆಫೀಸ್‌ಗಳಲ್ಲಿ ಹೈ ಹೀಲ್ಸ್ ಧರಿಸಲು ಯುವತಿಯರು ಹೆಚ್ಚು ಇಷ್ಟ ಪಡುತ್ತಾರೆ. ತಾನು ಇರುವ ಎತ್ತರಕ್ಕಿಂತ ಹೆಚ್ಚು ಎತ್ತರವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಬೇಕೆಂಬ ಬಯಕೆಯಿಂದ ತಮ್ಮ ಕೈಲಾಗದಿದ್ದರೂ, ನಡೆಯಲು ಕಷ್ಟವಾದರೂ ಹೈಹೀಲ್ಸ್ ಚಪ್ಪಲಿ ಆಯ್ಕೆ ಮಾಡುತ್ತಾರೆ. ಅದನ್ನೇ ಹಾಕಿಕೊಂಡು ಒದ್ದಾಡುತ್ತಾ ನಡೆಯುತ್ತಾರೆ. ಆದರೆ ವಾಸ್ತವವಾಗಿ ಹೈ ಹೀಲ್ಸ್ ಮಹಿಳೆಯರಿಗಾಗಿ ತಯಾರಿಸಿದ್ದಲ್ಲ. ಇದನ್ನ ಪುರುಷರಿಗಾಗಿ ತಯಾರಿಸಲಾಗಿತ್ತು.
ಹೈ ಹೀಲ್ಸ್ ಅನ್ನು ಮೊದಲು ಪುರುಷರು ಯುದ್ಧ ಮತ್ತು ಕುದುರೆ ಸವಾರಿಯ ಸಮಯದಲ್ಲಿ ಬಳಸುತ್ತಿದ್ದರು. ವರದಿಯ ಪ್ರಕಾರ, ಕುದುರೆ ಸವಾರಿಯ ಸಮಯದಲ್ಲಿ ಹೈ ಹೀಲ್ ಶೂಗಳನ್ನು ಧರಿಸುವುದು ಹಿಡಿತವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಪುರುಷರು ಬೂಟುಗಳಲ್ಲಿ ಹೀಲ್ಸ್ ಬಳಸುತ್ತಿದ್ದರು. ಇದರ ಬಳಕೆ ಮೊದಲ 10 ನೇ ಶತಮಾನದಲ್ಲಿ ಪ್ರಾರಂಭವಾಯಿತು. ಪರ್ಷಿಯನ್ ಸಾಮ್ರಾಜ್ಯದಲ್ಲಿ ಮೊದಲ ಬಾರಿಗೆ ಪುರುಷರು ಹೈ ಹೀಲ್ಸ್ ಧರಿಸಲು ಪ್ರಾರಂಭಿಸಿದ್ದರು. ಯುದ್ಧದ ಸಮಯದಲ್ಲಿ, ಈ ಸಾಮ್ರಾಜ್ಯದ ಜನರು ಹೈ ಹೀಲ್ಸ್ ಹೊಂದಿರುವ ಬೂಟುಗಳನ್ನು ಧರಿಸುತ್ತಿದ್ದರು. ಸುರಕ್ಷತೆಯ ದೃಷ್ಟಿಯಿಂದ, ಹೈ ಹೀಲ್ಸ್ ಬೂಟುಗಳನ್ನು ಹೆಚ್ಚು ಬಲವಾದ ಮತ್ತು ಉತ್ತಮವೆಂದು ಪರಿಗಣಿಸಲಾಗಿುತ್ತ.
1599 ರಲ್ಲಿ, ಪರ್ಷಿಯಾದ ರಾಜ ಷಾ ಅಬ್ಬಾಸ್ ತನ್ನ ರಾಯಭಾರಿಯನ್ನು ಯುರೋಪಿಗೆ ಕಳುಹಿಸಿದಾಗ, ಹೈ ಹೀಲ್ಸ್ ಬೂಟುಗಳು ಅವನೊಂದಿಗೆ ಯುರೋಪಿಗೆ ಹೋದವು. ಇದರ ನಂತರ, ಹೈ-ಹೀಲ್ಡ್ ಶೂಗಳ ಟ್ರೆಂಡ್ ವಿಶ್ವಾದ್ಯಂತ ಹೆಚ್ಚಾಗಿಯಿತು. ಕಾಲ ಕಳೆದಂತೆ ಹೀಲ್ಸ್ ಧರಿಸುವುದು ಗಣ್ಯರು ಮತ್ತು ರಾಜರ ಹವ್ಯಾಸವಾಯಿತು. ಫ್ರಾನ್ಸಿನ ಆಡಳಿತಗಾರನಾದ ಹದಿನಾಲ್ಕನೆಯ ಲೂಯಿ 10-ಇಂಚಿನ ಹೈ ಹೀಲ್ ಬೂಟುಗಳನ್ನು ಧರಿಸುತ್ತಿದ್ದರಂತೆ. ಏಕೆಂದರೆ ಅವರ ಉದ್ದ ಕೇವಲ ಐದು ಅಡಿ ನಾಲ್ಕು ಇಂಚುಗಳಷ್ಟಿತ್ತು. ಇದರ ನಂತರ, 1740 ರಲ್ಲಿ, ಮಹಿಳೆಯರು ಮೊದಲು ಹೈ ಹೀಲ್ಸ್ ಧರಿಸಲು ಪ್ರಾರಂಭಿಸಿದರು. ಇಲ್ಲಿಂದ, ಮಹಿಳೆಯರು ಹೈ ಹೀಲ್ಸ್ ಅನ್ನು ಆಕ್ರಮಿಸಿಕೊಂಡರು ಮತ್ತು ಮುಂದಿನ 50 ವರ್ಷಗಳಲ್ಲಿ ಅದು ಪುರುಷರ ಪಾದಗಳಿಂದ ಇಳಿದು ಮಹಿಳೆಯರ ಅಚ್ಚುಮೆಚ್ಚಿನ ಪಾದರಕ್ಷೆಯಾಗಿ ಬದಲಾಯ್ತು.
ಒಂದು ಅಧ್ಯಯನದ ಪ್ರಕಾರ, ಹೈ ಹೀಲ್ಸ್ ಧರಿಸುವುದು, ಸಮಾಜದಲ್ಲಿ ತಾವು ಉತ್ತಮ ಸ್ಟೇಟಸ್ನಲ್ಲಿದ್ದೇವೆ ಅನ್ನೋದನ್ನು ತೋರಿಸುತ್ತದೆ ಎನ್ನುವ ಭಾವನೆ ಮಹಿಳೆಯರಲ್ಲಿದೆ. ಅಲ್ಲದೆ ಮಹಿಳೆಯರು ಉನ್ನತ ಮಟ್ಟಕ್ಕೆ ಹೋದಾಗ, ಅವರು ಹೈ ಹೀಲ್ಸ್ ಧರಿಸಲು ಇಷ್ಟಪಡುತ್ತಾರೆ ಎಂದು ಈ ಅಧ್ಯಯನ ಹೇಳಿದೆ. ಹಾಗಿದ್ದರೂ ನಿರಂತರವಾಗಿ ಹೈ ಹೀಲ್ಸ್ ಬಳಕೆ ಮಾಡುವುದರಿಂದ ಮಹಿಳೆಯರಿಗೆ ಸೊಂಟ ನೋವು ಹಾಗೂ ಬೆನ್ನು ಹುರಿಯಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.