ಬೆಂಗಳೂರಿನ ಸಿನಿಮಾ ಥಿಯೇಟರ್‌ನ ಲೇಡಿಸ್ ವಾಶ್‌ರೂಂನಲ್ಲಿತ್ತು ಸೀಕ್ರೆಟ್ ಕ್ಯಾಮೆರಾ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಬೆಂಗಳೂರಿನ ಫೇಮಸ್ ಥಿಯೇಟರ್‌ವೊಂದರ ಮಹಿಳಾ ಟಾಯ್ಲೆಟ್‌ನಲ್ಲಿ ಸಿಕ್ರೇಟ್ ಕ್ಯಾಮೆರಾ ಪತ್ತೆಯಾಗಿದೆ. ವಾಶ್ ರೂಮ್‌ಗೆ ಹೋದ ಮಹಿಳೆಯರು ಅಲ್ಲಿ ಅಡಗಿಸಿಟ್ಟಿದ್ದ ಕ್ಯಾಮರಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಮದುವೆ ಬಗ್ಗೆ ಭವಿಷ್ಯ ಕೇಳಿದ ಯುವತಿ! – ಅಬ್ಬಬ್ಬಾ.. ಆನ್‌ಲೈನ್ ಗುರೂಜಿ ಮಾಡಿದ್ದೇನು ಗೊತ್ತಾ?
ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದೆ. ವಿಕೃತಕಾಮಿಯೊಬ್ಬ ಲೇಡಿಸ್ ಟಾಯ್ಲೆಟ್ ಒಳಗೆ ಗುಪ್ತವಾಗಿ ಕ್ಯಾಮರಾ ಅಳವಡಿಸಿದ್ದನು. ವಾಶ್ ರೂಮ್‌ಗೆ ಹೋದ ಮಹಿಳೆಯರು ಮತ್ತು ಯುವತಿಯರು ಇದನ್ನು ಗಮನಿಸಿದ್ದಾರೆ. ಕೂಡಲೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಯುವತಿಯರನ್ನ ವಿಚಾರಿಸಿದಾಗ ವಾಶ್‌ರೂಂ ನಲ್ಲಿ ಕ್ಯಾಮೆರಾ ಇಟ್ಟಿರುವುದು ಬೆಳಕಿಗೆ ಬಂದಿದೆ.
ತೆಲುಗಿನ ಜನಪ್ರಿಯ ಸಿನಿಮಾ ‘ನುವ್ವು ನಾಕು ನಚ್ಚಾವ್’ ಇತ್ತೀಚೆಗೆ ರೀ-ರಿಲೀಸ್ ಆಗಿತ್ತು. ಈ ಸಿನಿಮಾ ನೋಡಲು ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಿನಿಮಾ ವೀಕ್ಷಣೆಯ ವಿರಾಮದ ಸಮಯದಲ್ಲಿ ಮಹಿಳೆಯರು ಶೌಚಾಲಯಕ್ಕೆ ಹೋದಾಗ ಈ ನೀಚ ಕೃತ್ಯ ಬೆಳಕಿಗೆ ಬಂದಿದೆ.
ಇನ್ನು. ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಸ್ಥಳೀಯರು ತಕ್ಷಣವೇ ಪತ್ತೆ ಹಚ್ಚಿ ಹಿಡಿದಿದ್ದಾರೆ. ಸಾರ್ವಜನಿಕರು ಸ್ಥಳದಲ್ಲೇ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಬಳಿಕ ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಡಿವಾಳ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಎಷ್ಟು ಸಮಯದಿಂದ ಈ ರೀತಿ ಮಾಡುತ್ತಿದ್ದ? ಅವನ ಬಳಿ ಬೇರೆ ಯಾವುದೇ ದೃಶ್ಯಗಳಿವೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಪ್ರಶ್ನೆ ಎದ್ದಿದೆ.

ನೋಡಿರಿ

