ಟೆಸ್ಟ್‌ ನಲ್ಲಿ ಪ್ಲಾಫ್ ಆದ ಐಪಿಎಲ್‌ ಹೀರೋಗಳು – ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ – ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ

ಟೆಸ್ಟ್‌ ನಲ್ಲಿ ಪ್ಲಾಫ್ ಆದ ಐಪಿಎಲ್‌ ಹೀರೋಗಳು  –  ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ   –   ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ

ಐಪಿಎಲ್‌ನಲ್ಲಿ ಮಿಂಚಿದ ಆಟಗಾರರು ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಪ್ಲಾಪ್ ಆಗುತ್ತಿದ್ದಾರೆ.. ಟೆಸ್ಟ್‌ಗೆ ಆಯ್ಕೆ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಬೇಕಿದ್ದ ಆಟಗಾರರು ಪ್ಲಾಪ್ ಆಗಿದ್ದಾರೆ..

ಕಮ್​ಬ್ಯಾಕ್​ ಟೆಸ್ಟ್​ನಲ್ಲೇ ಎಡವಿದ ಕರುಣ್

8 ವರ್ಷಗಳ ಬಳಿಕ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ ಕರುಣ್​ ನಾಯರ್​​ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ದಾರೆ. ಲೀಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ಖಾತೆ ತೆರೆಯುವಲ್ಲಿ ಕರುಣ್​ ನಾಯರ್​ ವಿಫಲರಾದರು. 4 ಎಸೆತ ಎದುರಿಸಿದ ಕರುಣ್​ ನಾಯರ್​, ಬೆನ್​ ಸ್ಟೋಕ್ಸ್​ ಬೌಲಿಂಗ್​ನಲ್ಲಿ ಕ್ಯಾಚ್​ಗೆ ಬಲಿಯಾದರು. ಮೊದಲ ಇನ್ನಿಂಗ್ಸ್​ನಲ್ಲಿ ಪ್ಲಾಪ್ ಆದ ನಾಯರ್​ ಎರಡನೇ ಇನ್ನಿಂಗ್ಸ್​ನಲ್ಲಿ ಮಿಂಚುತ್ತಾರೆ ಅಂತ ಅಂದ್ಕೊಂಡಿದ್ರು. ಆದ್ರೆ  ಎರಡನೇ ಇನ್ನಿಂಗ್ಸ್​ನಲ್ಲಿ 54 ಬಾಲ್ ಎದುರಿಸಿದ ಕರುಣ್ ನಾಯರ್ 20 ರನ್‌ಗಳಿಸಿದ್ದಾರೆ. 8 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕರುಣ್ ನಾಯರ್​​ಗೆ, ಮತ್ತೆ ಗೋಲ್ಡನ್ ಅವಕಾಶ ಸಿಕ್ಕಿತ್ತು.  ಐಪಿಎಲ್‌ನಲ್ಲಿ ಡೆಲ್ಲಿ ಪರ ಆಡಿದ ನಾಯರ್‌ 8 ಪಂದ್ಯವಾಡಿ ಒಂದು ಅರ್ಧ ಶತಕ ಬಾರಿಸಿ 198 ರನ್‌ಗಳಿಸಿದ್ರು. ಇದ್ದನ್ನಲ್ಲಾ ನೋಡಿಯೇ ಕರುಣ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು. ಬಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಾದ್ರೂ ಕರುಣ್ ಸರಿಯಾಗಿ ಬಳಸಿಕೊಂಡರೆ ಅಷ್ಟೇ ತಂಡದಲ್ಲಿ ಸ್ಥಾನ ಸಿಗಲಿದೆ. ಇಲ್ಲದಿದ್ದರೆ ಅವಕಾಶಕ್ಕಾಗಿ ಯಂಗ್​ಸ್ಟರ್​ಗಳು ಕ್ಯೂನಲ್ಲಿದ್ದಾರೆ.

 IPLನಲ್ಲಿ ಮಿಂಚಿದ ಸಾಯಿ ಸುದರ್ಶನ್ ಟೆಸ್ಟ್‌ನಲ್ಲಿ ಡಲ್ 

ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರು ಭಾರತದ 317 ಆಟಗಾರನಾಗಿ ಪದಾರ್ಪಣೆ ಮಾಡಿದ್ರು. ಚೇತೇಶ್ವರ ಪೂಜಾರ ಅವರಿಂದ ಇವರು ಟೆಸ್ಟ್ ಕ್ಯಾಪ್ ಸ್ವೀಕರಿಸಿದರು.  2012 ರಿಂದ 2023 ರವರೆಗೆ ಭಾರತ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಇದೀಗ ಸುದರ್ಶನ್ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದು ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ರು.  ಐಪಿಎಲ್‌ನಲ್ಲಿ ಅಬ್ಬರಿಸಿದ ಸಾಯಿ, ಟೆಸ್ಟ್‌ನಲ್ಲೂ ಯಾರು ಮಾಡದ ಸಾಧನೆ ಮಾಡ್ತಾರೆ ರನ್ ಹೊಳೆಯನ್ನ ಹರಿಸ್ತಾರೆ ಅಂತ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ, ಚೆಸ್ಟ್‌ನಲ್ಲಿ ಸುದರ್ಶನ್ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಈ ಸಲ ಐಪಿಎಲ್‌ನಲ್ಲಿ ಗುಜರಾತ್ ಪರ ಆಡಿ  759 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. ಗುಜರಾತ್ ಟೈಟಾನ್ಸ್ ಪ್ಲೇ ಆಫ್‌ ತಲುಪಲು ಪ್ರಮುಖ ಪಾತ್ರ ವಹಿಸಿದರು. ಆದ್ರೆ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ನಿರಸ ಪ್ರದರ್ಶನ ತೋರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ರನ್‌ಗೆ ಡಕ್‌ಔಟ್ ಆದ ಸಾಯಿ , 2ನೇ ಇನ್ನಿಂಗ್ಸ್‌ನಲ್ಲಿ 48 ಬಾಲ್ ಎದುರಿಸಿ ಕೇವಲ 30 ರನ್‌ಗಳಿಸಿದ್ದಾರೆ. 3ನೇ ಕಮಾಂಕದಲ್ಲಿ ಸಾಯಿ  ಸುದರ್ಶನ್ ಸ್ವಲ್ಪ ಚೆನ್ನಾಗಿ ಆಡಿದ್ರೆ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲುವು ಸಾಧ್ಯತೆಯಿತ್ತು.

 ಐಪಿಎಲ್‌ನಲ್ಲಿ ಫೇಲ್‌.. ಟೆಸ್ಟ್‌ನಲ್ಲಿ ಪಂತ್ ಪಾಸ್

ಇನ್ನೂ ಐಪಿಎಲ್‌ನಲ್ಲಿ ಪಂತ್ ಅಟರ್‌ ಪ್ಲಾಫ್ ಆಗಿದ್ರು.  27 ಕೋಟಿಗೆ ಎಲ್‌ಎಸ್‌ಜಿ ತಂಡಕ್ಕೆ ಸೇರಿದ ಪಂತ್ 14 ಮ್ಯಾಚ್‌ನಿಂದ ಕೇವಲ 269 ರನ್‌ಗಳಿಸಿದ್ರು. 27 ಕೋಟಿ ಕೊಟ್ಟಿದ್ದು ವೇಸ್ಟ್ ಅಂತ ಸಾಕಷ್ಟು ಜನ ರಿಷಬ್ ಪಂತ್‌ರನ್ನ ಟ್ರೋಲ್ ಮಾಡಿದ್ರು..ಟೆಸ್ಟ್‌ನಲ್ಲೂ ಹೀಗೆ ಆಡಿದ್ರೆ ಹೇಗೆ ಅನ್ನೋ ಭಯ ಫ್ಯಾನ್ಸ್ ಗೆ ಕಾಡಿತ್ತು. ಆದ್ರೆ ಐಪಿಎಲ್‌ನಲ್ಲಿ ಪ್ಲೇಪ್ ಆದ್ರೂ ಟೆಸ್ಟ್‌ನಲ್ಲಿ ಪಂತ್ ಧಮಾಕ ಫರ್ಮಾಮೆನ್ಸ್ ನೀಡಿದ್ದಾರೆ. 2 ಸೆಂಚುರಿ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್‌ಗಳಿಸಿ ಸೆಂಚುರಿ ಬಾರಿಸಿದ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ 118 ರನ್‌ಗಳಿಸಿ ಮೊದಲ ಟೆಸ್ಟ್‌ ಮ್ಯಾಚ್‌ನಲ್ಲಿ 252 ರನ್‌ಗಳ ಕೊಡುಗೆಯನ್ನ ನೀಡಿದ್ದಾರೆ. ಒಟ್ನಲ್ಲಿ ಐಪಿಎಲ್‌ ಪ್ಲಾಫ್ ಆದವರು ಟೆಸ್ಟ್‌ನಲ್ಲಿ ಅಬ್ಬರಿಸಿದ್ರೆ, ಐಪಿಎಲ್‌ನಲ್ಲಿ ಅಬ್ಬರಿಸಿದವರು ಟೆಸ್ಟ್ ಪ್ಲಾಪ್ ಆಗಿದ್ದಾರೆ.

Kishor KV