ಪತ್ತೆಯಾಯ್ತು ಅಪರೂಪದ ಬಿಳಿ ಜಿಂಕೆ – ಕುತೂಹಲ ಮೂಡಿಸುತ್ತಿದೆ  ಅಲ್ಬಿನೋ ಜಿಂಕೆ ಫೋಟೋ

ಪತ್ತೆಯಾಯ್ತು ಅಪರೂಪದ ಬಿಳಿ ಜಿಂಕೆ – ಕುತೂಹಲ ಮೂಡಿಸುತ್ತಿದೆ  ಅಲ್ಬಿನೋ ಜಿಂಕೆ ಫೋಟೋ

ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಬಿಳಿ ಜಿಂಕೆ ಮರಿಯೊಂದು ಪತ್ತೆಯಾಗಿದೆ. ಬಿಳಿ ಜಿಂಕೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಬಿಳಿ ಜಿಂಕೆ ಪತ್ತೆಯಾಗಿದೆ. ಇದನ್ನು ಅಲ್ಬಿನೋ ಜಿಂಕೆ ಅಂತಾ ಕರೆಯಲಾಗುತ್ತದೆ. ಐಎಫ್ ಎಸ್ ಅಧಿಕಾರಿ ಆಕಾಶ್ ದೀಪ್ ಬಧವಾನ್ ಅವರು ಅಪರೂಪದ ಅಲ್ಬಿನೋ ಜಿಂಕೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಅಲ್ಬಿನೋ ಜಿಂಕೆ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದೆ’ ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ನಾಯಿ ಅನ್ಕೊಂಡು ಕತ್ತೆಕಿರುಬ ಖರೀದಿಸಿದ – ಆಟವಾಡಿಸಲು ಹೋದ್ರೆ ಕಾಲನ್ನೇ ಕಚ್ಚುತ್ತಿತ್ತು ಹೈನಾ..! 

ವೈರಲ್ ಆದ ಫೋಟೋದಲ್ಲಿ ಅಲ್ಬಿನೋ ಜಿಂಕೆ, ಇನ್ನೆರಡು ಜಿಂಕೆಯೊಂದಿಗೆ ವನ್ಯಜೀವಿ ಅಭಯಾರಣ್ಯದಲ್ಲಿ ಹೋಗುವುದನ್ನು ಕಾಣಬಹುದು. ಈ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಬಳಕೆದಾರರು ಅಪರೂಪದ ಜೀವಿಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ಅದರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಾಮೆಂಟ್​​ನಲ್ಲಿ ತಿಳಿಸಿದ್ದಾರೆ.

ಈ ಪೋಸ್ಟ್​​ಗೆ ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಪ್ರತಿಕ್ರಿಯಿಸಿದ್ದು, 15 ವರ್ಷಗಳ ಹಿಂದೆ ಒಡಿಶಾದ ಅಂಗುಲ್ ಜಿಲ್ಲೆಯ ಲಬಂಗಿ ಅತಿಥಿಗೃಹದಲ್ಲಿ ಇಂತದ್ದೇ ಬಿಳಿ ಜಿಂಕೆಯನ್ನುನೋಡಿ ಕಣ್ತುಂಬಿಕೊಂಡಿದ್ದೆ ಅಂತಾ ಹೇಳಿದ್ದಾರೆ.

suddiyaana