ದೊಡ್ಮನೆಯಿಂದ ನಮ್ರತಾ ಔಟ್ – ಎಲಿಮಿನೇಷನ್ಗೆ ಕಾರಣವಾದ ವಿಚಾರಗಳೇನು?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಸೀಸನ್ 10ರ ಫೈನಲ್ಗೆ ಬಂದು ವಾರ ಅಷ್ಟೇ ಬಾಕಿ ಉಳಿದಿದೆ. ಇನ್ನೇನು ಫಿನಾಲೆ ವಾರಕ್ಕೆ ಕಾಲಿಡಬೇಕು ಎನ್ನುವಾಗಲೇ ನಮ್ರತಾ ಔಟ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಂತು-ಪಂತು ಜೋಡಿಯೇ ಬಿಗ್‌ಬಾಸ್ – ಸ್ಪರ್ಧಿಗಳನ್ನು ಚೆನ್ನಾಗಿಯೇ ಆಡಿಸುತ್ತಿದ್ದಾರೆ ಕಿಲಾಡಿ ಸ್ನೇಹಿತರು
ಬಿಗ್‌ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ಹಂತ ಹೋಗುತ್ತಿದೆ. ದೊಡ್ಮನೆ ಆಟ ಫಿನಾಲೆ ವಾರಕ್ಕೆ ತಲುಪಿದೆ. ಫಿನಾಲೆಗೆ ಮೊದಲು ಟಿಕೆಟ್ ಗಿಟ್ಟಿಸಿಕೊಂಡವರು ಸಂಗೀತಾ. ಬಳಿಕ ತುಕಾಲಿ 2ನೇ ಫೈನಲಿಸ್ಟ್ ಆಗಿ ಫಿನಾಲೆಗೆ ಹೋದರು. ವರ್ತೂರು ಸಂತೋಷ್, ವಿನಯ್, ಡ್ರೋನ್ ಪ್ರತಾಪ್ ಅವರು ಟಾಪ್ ಸ್ಥಾನಗಳನ್ನ ಅಲಂಕರಿಸಿದ್ದರು. ಟಾಪ್ 6ರಲ್ಲಿ ಕಾರ್ತಿಕ್ ಮತ್ತು ನಮ್ರತಾ ನಡುವೆ ಟಫ್ ಫೈಟ್ ಇತ್ತು. ಇದೀಗ ಕಾರ್ತಿಕ್ ಸೇವ್ ಆಗಿ ನಮ್ರತಾ ಎಲಿಮಿನೇಟ್ ಆಗಿದ್ದಾರೆ.
ವಿನಯ್ ಚಮಚ, ಶ್ಯಾಡೋ ಎಂದೇ ಬಿಂಬಿತರಾಗಿದ್ದ ನಮ್ರತಾ ಇತ್ತೀಚಿನ ಈ ಆರೋಪಗಳನ್ನು ತಮ್ಮ ಆಟದ ಮೂಲಕ ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಮ್ರತಾ ಸಖತ್ ಆಗಿ ಆಟ ಆಡುತ್ತಿದ್ದರು. ಎಲಿಮಿನೇಷನ್ ಆಗಿರೋದು ನಮ್ರತಾಗೇ ಸ್ವತಃ ಶಾಕ್ ಕೊಟ್ಟಿದೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಮ್ರತಾ, ಆಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ-2 ಸೀರಿಯಲ್ ನಮ್ರತಾ ನಟಿಸಿ ಗಮನ ಸೆಳೆದಿದ್ದಾರೆ.