ಪುರುಷರು ಗರ್ಭಧಾರಣೆ  ಮಾಡಬಹುದೇ? – ಮಹಾಭಾರತದಲ್ಲಿ ರಾಜನೊಬ್ಬ ಮಗುವಿಗೆ ಜನ್ಮ ನೀಡಿದ್ದು ಹೇೆಗೆ ಗೊತ್ತಾ

ಪುರುಷರು ಗರ್ಭಧಾರಣೆ  ಮಾಡಬಹುದೇ? –  ಮಹಾಭಾರತದಲ್ಲಿ ರಾಜನೊಬ್ಬ ಮಗುವಿಗೆ ಜನ್ಮ ನೀಡಿದ್ದು ಹೇೆಗೆ  ಗೊತ್ತಾ

ಒಂದು ಜೀವಕ್ಕೆ ಜನ್ಮ ನೀಡುವ ತಾಕತ್ತು ಇರೋದು ಹೆಣ್ಣಿಗೆ ಮಾತ್ರ.  ವಿಜ್ಞಾನದ ಹಲವು ಪ್ರಯೋಗಗಳ ನಡುವೆಯೂ, ‘ಪುರುಷರು ಗರ್ಭಧಾರಣೆ  ಮಾಡಬಹುದೇ?’ ಎಂಬ ಪ್ರಶ್ನೆಯು ಕಲ್ಪನೆಯಾಗಿಯೇ ಉಳಿದಿದೆ. ಆದರೆ ಮಹಾಭಾರತ ಕಾಲದಲ್ಲಿ ಇಂತಹ ಒಂದು ಅದ್ಭುತ ಘಟನೆಯು ನಡೆದಿತ್ತು ಎಂದು ಪುರಾಣಗಳು ಹೇಳುತ್ತವೆ.  ಇಕ್ಷ್ವಾಕು ವಂಶದ ರಾಜನೊಬ್ಬನು ಗರ್ಭಧಾರಣೆ  ಮಾಡಿ ಪುತ್ರನಿಗೆ ಜನ್ಮ ನೀಡಿದ ಕಥೆಯು ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅದರಂತೆ, ಈ ಕಥೆಯು ವಿಜ್ಞಾನ ಮತ್ತು ಪುರಾಣಗಳ ನಡುವಿನ ಸಂಬಂಧವನ್ನು ಚಿಂತಿಸುವಂತೆ ಮಾಡುತ್ತದೆ. ಈ ಬಗ್ಗೆ ನೋಡೋಣ ಬನ್ನಿ.

ಈ ಕಥೆಯ ಕೇಂದ್ರ ಬಿಂದು ಇಕ್ಷ್ವಾಕು ವಂಶದ ಪರಾಕ್ರಮಿ ಯುವನಾಶ್ವ! ಹೌದು, ಇಕ್ಷ್ವಾಕು ವಂಶದಲ್ಲೇ ಜನಿಸಿದ ಶ್ರೀರಾಮನ ಪೂರ್ವಜರಲ್ಲಿ ಯುವನಾಶ್ವನ ಹೆಸರು ಗೌರವದಿಂದ ಸ್ಮರಿಸಲಾಗುತ್ತದೆ. ಇಂತಹ ಪರಾಕ್ರಮಿ ರಾಜ ಯುವನಾಶ್ವನು ಗರ್ಭಧರಿಸಿ ಒಂದು ಮಗುವಿಗೂ ಜನ್ಮ ನೀಡಿದ್ದ! ಆದರೆ, ಆತನ ಪತ್ನಿ ಮಾಡಬೇಕಾದ ಕೆಲಸವನ್ನ ಆತ ಯಾಕೆ ಮಾಡಿದ ಅಂತಾ ನಿಮಗೂ ತಲೆಗೆ ಪ್ರಶ್ನೆ ಬಂತಾ? ಅದಕ್ಕೆ ಇಲ್ಲಿದೆ ಉತ್ತರ
ಮಹಾಭಾರತದಲ್ಲಿ ಬರುತ್ತದೆ ಮತ್ತು ನಾರದ ಪುರಾಣದ ಪ್ರಕಾರ, ಯುವನಾಶ್ವನ ಪತ್ನಿಯ ಹೆಸರು ಗೌರಿ. ಆ ದಂಪತಿಗೆ ಮದುವೆಯಾದ ಹಲವು ವರ್ಷಗಳ ನಂತರವೂ ಮಕ್ಕಳು ಆಗಲಿಲ್ಲ. ಇದರಿಂದ ಚಿಂತೆಗೀಡಾದ ರಾಜನು ಸಂತಾನ ಪ್ರಾಪ್ತಿಗಾಗಿ ಒಂದು ಯಾಗವನ್ನು ನಡೆಸಿದನು. ರಾಜಾ ದಶರಥನಂತೆಯೇ, ಯುವನಾಶ್ವನು ಸಂತಾನಕ್ಕಾಗಿ ಪ್ರಯತ್ನಿಸಿದನು. ಹಾಗಾಗಿ, ಮಹರ್ಷಿ ಚ್ಯವನರು ಈ ರಾಜನಿಗಾಗಿ ‘ಇಷ್ಟಿ ಯಾಗ’ವನ್ನು ಆಯೋಜಿಸಿದರು. ಈ ಯಾಗವು ಸಂತಾನ ಪ್ರಾಪ್ತಿಯನ್ನು ನೀಡುವಂತಹದು ಎಂದು ನಂಬಲಾಗಿದೆ. ಅದರಂತೆ, ಈ ಯಾಗವು ಸುಮಾರು ಒಂದು ವರ್ಷಗಳ ಕಾಲ ನಡೆದಿದೆ ಎನ್ನಲಾಗಿದೆ. ಇನ್ನು, ಈ ಯಾಗ ಸಮಾಪ್ತಿಯ ನಂತರ ಮಹರ್ಷಿ ಚ್ಯವನರು ಒಂದು ಮಡಕೆಯಲ್ಲಿ ಅಭಿಮಂತ್ರಿತ ಜಲವನ್ನು ಇಟ್ಟು, ಅದನ್ನು ರಾಣಿ ಗೌರಿ ಸೇವಿಸಿದರೆ ಗರ್ಭಧಾರಣೆ ಆಗುತ್ತದೆ ಎಂದು ಸೂಚಿಸಿದರು.
ಇನ್ನು, ಯಾಗ ಮುಗಿದ ನಂತರ, ಆಯಾಸದಿಂದಾಗಿ ಎಲ್ಲರೂ ಗಾಢ ನಿದ್ರೆಗೆ ಜಾರಿದರು. ಈ ಸಂದರ್ಭ ರಾತ್ರಿಯಲ್ಲಿ, ಮಹಾರಾಜ ಯುವನಾಶ್ವನಿಗೆ ತುಂಬಾ ಬಾಯಾರಿಕೆಯಾಗಿ, ಯಾಗ ಮೈದಾನದ ಬಳಿಯ ಪಾತ್ರೆಯಲ್ಲಿ ಇರಿಸಲಾಗಿದ್ದ ನೀರನ್ನು ಕುಡಿದನು. ಆದರೆ, ಅದು, ತನ್ನ ಹೆಂಡತಿ ಕುಡಿಯಬೇಕಾದ ಮಂತ್ರಿಸಿದ ನೀರು ಎಂದು ಅವನಿಗೆ ತಿಳಿದಿರಲಿಲ್ಲ. ಹಾಗಾಗಿ, ಈ ಅಜ್ಞಾನದಿಂದ ಆತ ಮುಂದೆ ಗರ್ಭಧರಿಸಬೇಕಾಗಿ ಬಂತು ಎನ್ನಲಾಗಿದೆ.

Kishor KV