ಲಕ್ಷದ್ವೀಪಕ್ಕೆ ಹೋಗಬೇಕು ಎಂಬ ಪ್ಲಾನ್ ಮಾಡ್ತಿದ್ದೀರಾ ? – ಕನೆಕ್ಟಿವಿಟಿ ವಿಚಾರದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಲಕ್ಷದ್ವೀಪಕ್ಕೆ ಹೋಗಬೇಕು ಎಂಬ ಪ್ಲಾನ್ ಮಾಡ್ತಿದ್ದೀರಾ ? – ಕನೆಕ್ಟಿವಿಟಿ ವಿಚಾರದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಲಕ್ಷದ್ವೀಪಕ್ಕೆ ಹೋಗಬೇಕು ಎಂಬ ಪ್ಲಾನ್ ಮಾಡ್ತಿದ್ದೀರಾ. ಹೇಗೆ ಹೋಗಬೇಕು ಎಂಬ ಬಗ್ಗೆ ಸುದ್ದಿಯಾನದಲ್ಲಿ ವಿವರವಾಗಿ ಹೇಳಿದ್ದೇವೆ. ಇದೀಗ ಲಕ್ಷದ್ವೀಪಕ್ಕೆ ಹೋಗಲು ಕನೆಕ್ಟಿವಿಟಿ ಬಗ್ಗೆ ವಿವರವಾದ ಮಾಹಿತಿ ನಿಮಗಾಗಿ.

ಇದನ್ನೂ ಓದಿ: ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!

ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಕೂಡ ಸರ್ಕಾರ ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಲೇಬೇಕಿದೆ. ಯಾಕಂದ್ರೆ ಈಗ ಲಕ್ಷದ್ವೀಪಕ್ಕೆ ಹೋಗಬೇಕು ಅನ್ನೋದಾದ್ರೆ ಮೊದಲು ಕೇರಳದ ಕೊಚ್ಚಿನ್ ತಲುಪಲೇಬೇಕು. ಅಲ್ಲಿಂದ ಮಾತ್ರ ಫ್ಲೈಟ್ ಮತ್ತು ಶಿಪ್ ಸರ್ವಿಸ್ ಇರೋದು. ಹೀಗಾಗಿ ದೇಶದ ಬೇರೆ ರಾಜ್ಯಗಳಿಂದಲೂ ನೇರವಾಗಿ ಲಕ್ಷಾದ್ವೀಪಕ್ಕೆ ವಿಮಾನದ ವ್ಯವಸ್ಥೆ ಮಾಡಬೇಕಿದೆ. ಇಲ್ಲೂ ಒಂದು ಸಮಸ್ಯೆ ಇದೆ. ಲಕ್ಷಾದ್ವೀಪದ ಅಗಟ್ಟಿಯಲ್ಲಿರೋ ಏರ್​ಸ್ಟ್ರಿಪ್​​ನಲ್ಲಿ ಮಿನಿ ಜೆಟ್ ಅಷ್ಟೇ ಲ್ಯಾಂಡ್ ಆಗುತ್ತೆ. ದೊಡ್ಡ ವಿಮಾನಗಳು ಇಲ್ಲಿ ಲ್ಯಾಂಡ್​​ ಆಗುವಷ್ಟು ಗಾತ್ರದ ರನ್​ವೇ ಇಲ್ಲಿಲ್ಲ. ಹೀಗಾಗಿ ಫುಲ್​ಫ್ಲೆಡ್ಜ್ ವಿಮಾನ ನಿಲ್ದಾಣವನ್ನ ಕೂಡ ನಿರ್ಮಿಸಬೇಕಿದೆ. ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ಸಂಗತಿಯನ್ನ ಕೂಡ ಹೇಳಲೇಬೇಕು. ಭಾರತದಿಂದ ಮಾಲ್ಡೀವ್ಸ್​ಗೆ ಹೋಗೋಕೆ ವೀಸಾ ಬೇಕು ಅಂತೇನಿಲ್ಲ. ಸೋ ಯಾವುದೇ ಡಾಕ್ಯುಮೆಂಟ್ಸ್​​ಗಳ ಅವಶ್ಯಕತೆ ಇಲ್ಲ. ಆದ್ರೆ, ಲಕ್ಷಾದ್ವೀಪಕ್ಕೆ ಹೋಗಬೇಕು ಅನ್ನೋದಾದ್ರೆ ಅಲ್ಲಿನ ಸ್ಥಳೀಯ ಆಡಳಿತದ ಪರ್ಮಿಷನ್ ಬೇಕು. ಆಗಲೇ ವಿವರಿಸಿದ ಹಾಗೆ ಡಾಕ್ಯುಮೆಂಟ್ಸ್​​ಗಳನ್ನ ಸಬ್​ಮಿಟ್​ ಮಾಡಬೇಕಾಗುತ್ತೆ. ಆದ್ರೆ ಈ ನಿಯಮದಲ್ಲಿ ಬದಲಾವಣೆ ಮಾಡೋ ಸಾಧ್ಯತೆ ಕಡಿಮೆ ಇದೆ. ಯಾಕಂದ್ರೆ ಬೇಕಾಬಿಟ್ಟಿ, ಒಮ್ಮೆಗೇ ಎಲ್ಲರನ್ನೂ ಲಕ್ಷಾದ್ವೀಪಕ್ಕೆ ಬಿಡೋಕೆ ಸಾಧ್ಯವೂ ಇಲ್ಲ. ಭದ್ರತೆ ಮತ್ತು ಪ್ರಾಕೃತಿಕ ದೃಷ್ಟಿಯಿಂದ ಲಕ್ಷಾದ್ವೀಪ ಅತ್ಯಂತ ಸೂಕ್ಷ್ಮ ವಲಯ. ಹಾಗೆಯೇ 5-6 ವರ್ಷಗಳ ಹಿಂದೆ ಲಕ್ಷಾ ದ್ವೀಪದಲ್ಲಿ ಶುದ್ಧ ನೀರಿನ ಕೊರತೆ ಉಂಟಾಗಿತ್ತು. ಅಲ್ಲಿ ಪ್ರತೀ ವರ್ಷ ಕೇವಲ 100 ದಿನಗಳಷ್ಟೇ ಮಳೆಯಾಗೋದ್ರಿಂದ ಕುಡಿಯುವ ನೀರಿನ ಮೂಲ ಕೂಡ ಕಡಿಮೆ ಇದೆ. ಇದೇ ಕಾರಣಕ್ಕೆ ಇಸ್ರೇಲ್​ ಸರ್ಕಾರ ಲಕ್ಷಾದ್ವೀಪದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ನೆರವು ನೀಡೋದಾಗಿ ಘೋಷಿಸಿದೆ. ಇಸ್ರೇಲ್​ನಲ್ಲಿ ಉಪ್ಪು ನೀರನ್ನ ಸಿಹಿ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಇದೆ. ಮುಂದೆ ಲಕ್ಷಾದ್ವೀಪದಲ್ಲೂ ಇದನ್ನ ಸೆಟ್​​ಅಪ್​ ಮಾಡುವ ಸಾಧ್ಯತೆ ಇದೆ.

ಭಾರತ ವಿರೋಧಿ ಮಾಲ್ಡೀವ್ಸ್​ಗೆ ತಕ್ಕ ಪಾಠ ಕಲಿಸೋಕೆ ಈಗ ಭಾರತೀಯರು ಕೂಡ ಮುಂದಾಗಿದ್ದಾರೆ. ಮಾಲ್ಡೀವ್ಸ್ ಬಾಯ್ಕಾಟ್ ಮಾಡಿ ಲಕ್ಷಾದ್ವೀಪಕ್ಕೆ ಹೋಗೋಗೆ ರೆಡಿಯಾಗಿದ್ದಾರೆ. ಆದ್ರೆ ಎಲ್ಲರಲ್ಲೂ ಮಾಡಿಕೊಳ್ಳುವ ವಿನಂತಿ ಇಷ್ಟೇ. ಲಕ್ಷಾದ್ವೀಪ ಅನ್ನೋದು ನಮ್ಮ ದೇಶದ ಸಂಪತ್ತು. ಅಲ್ಲಿ ಹೋಗಿ ಪ್ರಕೃತಿಯ ಸೌಂದರ್ಯವನ್ನ ಅಸ್ವಾದಿಸಿ. ಇದೇ ವೇಳೆ ಸ್ವಚ್ಛತೆ ಬಗ್ಗೆಯೂ ಗಮನ ಇರಲಿ. ಪ್ರಕೃತಿಗೆ ಯಾವುದೇ ಹಾನಿಯಾಗದೆ ಇರಲಿ. ಆಗ ಮಾತ್ರ ಮಾಲ್ಡೀವ್ಸ್ ಬಾಯ್ಕಾಟ್​​ಗೊಳಗಾಗೋಕೆ ಸಾಧ್ಯ.. ಲಕ್ಷಾದ್ವೀಪ ಮತ್ತು ಭಾರತ ಸಕ್ಸಸ್ ಆಗೋಕೆ ಸಾಧ್ಯ.

Sulekha