ಈ ಮೀನುಗಳನ್ನು ತಿನ್ನೋ ಮುನ್ನ ಎಚ್ಚರ! – ಆರೋಗ್ಯ ಕೆಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ಅನೇಕ ಮಂದಿಗೆ ಊಟಕ್ಕೆ ಮೀನು ಇಲ್ಲದಿದ್ದರೆ ಆಹಾರ ಗಂಟಲಲ್ಲಿ ಇಳಿಯೋದೇ ಇಲ್ಲ. ಆದರೆ ಎಷ್ಟು ಮೀನುಗಳನ್ನು ತಿನ್ನಬೇಕು? ಯಾವ ಮೀನು ತಿಂದರೆ ರೋಗ ಬರುತ್ತದೆ ಎಂದು ಅನೇಕರಿಗೆ ಗೊತ್ತಿಲ್ಲ. ಅದರಲ್ಲಿಯೂ ಕೆಲ ಮೀನುಗಳನ್ನು ನೀವು ತಿನ್ನಬಾರದು.
ಇದನ್ನೂ ಓದಿ: ಮಳೆಗಾಲದಲ್ಲಿ ಟ್ರಿಪ್ ಹೋಗಲು ಈ ಜಾಗ ಬೆಸ್ಟ್! – ಕರ್ನಾಟಕದ ಈ ಸುಂದರ ತಾಣಕ್ಕೆ ಭೇಟಿ ನೀಡಿ!
ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಮತ್ತು ತಾಯಂದಿರಾಗಲು ಬಯಸುವ ಮಹಿಳೆಯರು ಮೀಥೈಲ್ ಮರ್ಕ್ಯುರಿ ಹೊಂದಿರುವ ಮೀನುಗಳನ್ನು ತಿನ್ನಲೇಬಾರದು. ಇಂತಹ ವಿಷಕಾರಿ ಪದಾರ್ಥಗಳು ಭ್ರೂಣಗಳು, ಶಿಶುಗಳು ಮತ್ತು ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಸೇವನೆ ನಿಮಗೆ ಅಪಾಯವನ್ನುಂಟು ಮಾಡಬಹುದು.
ಮಾರುಕಟ್ಟೆಗೆ ಹೋದಾಗ ಹೆಚ್ಚಾಗಿ ಮಗೂರ್ ಮೀನುಗಳನ್ನು ಖರೀದಿಸಬೇಡಿ. ಬದಲಿಗೆ ಸಣ್ಣ ಮೀನುಗಳನ್ನು ಖರೀದಿಸಿ. ಏಕೆಂದರೆ ಈ ಮೀನಿನ ಗಾತ್ರವನ್ನು ತ್ವರಿತವಾಗಿ ಹೆಚ್ಚಿಸಲು, ಕೆಲವೊಮ್ಮೆ ಮೀನು ಕೃಷಿಕರು ಮೀನಿನ ದೇಹಕ್ಕೆ ವಿವಿಧ ಹಾರ್ಮೋನುಗಳನ್ನು ಚುಚ್ಚುತ್ತಾರೆ. ಇದು ತುಂಬಾ ಹಾನಿಕಾರಕವಾಗಿದೆ. ಇನ್ನು ಬಹುತೇಕ ರೆಸ್ಟೋರೆಂಟ್ಗಳಲ್ಲಿ ಬಂಗುಡೆ ಮೀನು ಹೆಚ್ಚಾಗಿ ಸಿಗುತ್ತದೆ. ಆದರೆ ಈ ಬಂಗುಡೆ ಮೀನು ಮರ್ಕ್ಯೂರಿ ಪ್ರಮಾಣವನ್ನು ಹೊಂದಿದೆ. ಇದನ್ನ ತಿಂದ್ರೆ ಮರ್ಕ್ಯೂರಿ ಪ್ರಮಾಣವು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾಗುತ್ತೆ. ಇದ್ರಿಂಗ ಅಪಾಯಕಾರಿ ರೋಗಗಳಿಗೆ ತುತ್ತಾಗೋ ಸಾಧ್ಯತೆ ಇರುತ್ತೆ.
ಇನ್ನು ಟ್ಯೂನ ಎಂಬ ಮೀನುಗಳಲ್ಲೂ ಮರ್ಕ್ಯೂರಿ ಪ್ರಮಾಣ ಅಧಿಕವಾಗಿದೆ. ಇದಲ್ಲದೇ, ಈ ಮೀನುಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾರ್ಮೋನುಗಳು ಮತ್ತು ಪ್ರತಿಜೀವಕಗಳನ್ನು ಚುಚ್ಚಲಾಗುತ್ತದೆ. ಹಾಗಾಗಿ ಇದರ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಇನ್ನು ಪಂಕಲ್ಮಾಚ್ ಎಂಬ ಎಣ್ಣೆಯುಕ್ತ ಮೀನು ನೀರಿನಲ್ಲಿ ಕಂಡುಬರುವ ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯದಿಂದ ಬೆಳೆಯುತ್ತದೆ. ಆದ್ದರಿಂದ ಮೀನನ್ನು ಸಂಪೂರ್ಣವಾಗಿ ಕಲುಷಿತ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿರುವ ಪಾದರಸದ ಪ್ರಮಾಣವು ಮಾನವ ದೇಹವು ಸಹಿಸಿಕೊಳ್ಳುವಷ್ಟರ ಮಟ್ಟಿಗಿಲ್ಲ. ಹಾಗಾಗಿ ಈ ಮೀನನ್ನು ಎಂದಿಗೂ ತಿನ್ನಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇನ್ನು ಟಿಲಾಪಿಯಾ ಎಂಬ ಮೀನು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಹಾನಿಕಾರಕ ಕೊಬ್ಬನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುತ್ತದೆ. ಹೃದ್ರೋಗವು ಇತರ ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಅಲ್ಲದೇ, ನಿಮಗೆ ಅಸ್ತಮಾ ಅಥವಾ ಸಂಧಿವಾತ ಇದ್ದರೆ, ಟಿಲಾಪಿಯಾ ಮೀನುಗಳನ್ನು ಮುಟ್ಟಲೇ ಬೇಡಿ. ಇದಿಂದಾಗಿ ನಿಮ್ಮ ಆರೋಗ್ಯ ಮತ್ತಷ್ಟು ಹಾಳಾಗ್ಬೋದು.. ಹೀಗಾಗಿ ನೀವು ಆದಷ್ಟು ಸೀ ಫಿಶ್ ಗಳನ್ನ ಮಾತ್ರ ಸೇವಿಸಿ.

ನೋಡಿರಿ

