ಗೂಗಲ್‌ ಮ್ಯಾಪ್‌ ನೋಡ್ಕೊಂಡು ಶಾರ್ಟ್‌ ಕಟ್‌ ರೂಟ್‌ ನಲ್ಲಿ ಹೋಗೇ ಬಿಟ್ಟ! – ಕಾರು ಹೋಗಿ ನಿಂತಿದ್ದೆಲ್ಲಿ ಗೊತ್ತಾ?  

ಗೂಗಲ್‌ ಮ್ಯಾಪ್‌ ನೋಡ್ಕೊಂಡು ಶಾರ್ಟ್‌ ಕಟ್‌ ರೂಟ್‌ ನಲ್ಲಿ ಹೋಗೇ ಬಿಟ್ಟ! – ಕಾರು ಹೋಗಿ ನಿಂತಿದ್ದೆಲ್ಲಿ ಗೊತ್ತಾ?  

ಮನೆಯಿಂದ ಹೊರಗೆ ಕಾಲಿಡುತ್ತಲೇ ಹೋಗಬೇಕಾದ ಜಾಗವನ್ನು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಮಾಡಿಟ್ಟುಕೊಳ್ಳುವ ಕಾಲದಲ್ಲಿ ನಾವಿದ್ದೀವಿ.. ಎಲ್ಲೋ ಹೋಗೋದಿದ್ರೂ ಒಂದ್ಸಾರಿ ರೂಟ್‌ ಮ್ಯಾಪ್‌ ನೋಡಿ ಹೊರಡೋದು ಇತ್ತೀಚಿನ ಯುವಕ ಯುವತಿಯರಿಗಂತೂ ವಾಡಿಕೆ ಆಗ್ಬಿಟ್ಟಿದೆ.. ಗೊತ್ತಿಲ್ಲದ ಊರಿಗೋ.. ಗೊತ್ತಿಲ್ಲದ ನಗರದಲ್ಲೋ ಓಡೋಡುವಾಗಲೂ ಅಕ್ಕಪಕ್ಕದವರತ್ರ ಸಾರ್‌.. ಇದೇ ರೂಟಾ ಅಂತ ಕೇಳೋ ಬದಲು ಸಿಂಪಲ್ಲಾಗಿ ಗೂಗಲ್ ಮ್ಯಾಪ್‌ನಲ್ಲಿ ಲೊಕೇಷನ್‌ ಹಾಕಿ ತಮ್ಮ ಪಾಡಿಗೆ ತಾವು ಮ್ಯಾಪ್‌ ನೋಡಿಕೊಂಡು ತಲುಪಬೇಕಾದ ಸ್ಥಳಕ್ಕೆ ಹೋಗಿ ತಲುಪುತ್ತಾರೆ. . ಆದರೆ ಇಲ್ಲೊಬ್ಬ ಕಾರು ಚಾಲಕ ಗೂಗಲ್ ಮ್ಯಾಪ್ ಬಳಸಿ  ಪೇಚಿಗೆ ಸಿಲುಕಿದ್ದಾನೆ. ಸುಲಭ ಮಾರ್ಗ ಬಳಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಯಾರು ಗೆಲ್ಲಬೇಕು ಅನ್ನೋದು ಮೊದಲೇ ಫಿಕ್ಸಿಂಗ್‌ ಆಗಿತ್ತಾ? – ರಿಯಾಲಿಟಿ ಶೋ ಮೇಲೆ ಇದೆಂತಾ ಆರೋಪ?

ಅಷ್ಕಕ್ಕೂ ಆಗಿದ್ದೇನು?

ಕರ್ನಾಟಕದ ತಂಡವೊಂದು ವೀಕೆಂಡ್ ಗೆ ತಿರುಗಾಡಲು ತಮ್ಮ ಕಾರಿನಲ್ಲಿ ತಮಿಳುನಾಡಿನ ಊಟಿಗೆ ತೆರಳಿದೆ. ಬಳಿಕ ಅಲ್ಲಿ ಸುತ್ತಾಡಿ ವಾಪಸು ಊರಿಗೆ ಹೊರಟಿದೆ. ಈ ವೇಳೆ ಕಾರು ಚಾಲಕ ಗೂಗಲ್ ಮ್ಯಾಪ್ ಬಳಸಿ ವೇಗದ ಮಾರ್ಗವನ್ನು ಬಳಸಿಕೊಂಡು ಕರ್ನಾಟಕಕ್ಕೆ ಹೊರಟಿದ್ದಾನೆ. ಅದರಂತೆ ಗೂಗಲ್ ಮ್ಯಾಪ್ ತೋರಿಸಿದ ಶಾರ್ಟ್ ಕಟ್ ಮಾರ್ಗದಲ್ಲೇ ಬಂದು ಸೀದಾ ತಮಿಳುನಾಡಿನ ಗುಡಲೂರು ಗುಡ್ಡದ ಮೇಲೆ ಹೋಗಿ ನಿಂತಿದೆ. ಎದುರು ನೋಡಿದರೆ ರಸ್ತೆ ಇಲ್ಲ ಬದಲಾಗಿ ಇರುವುದು ಮೆಟ್ಟಿಲು. ಕಾರು ಚಾಲಕನ ವೇಗಕ್ಕೆ ಮೆಟ್ಟಿಲ ಮಾರ್ಗದಲ್ಲೇ ಕಾರು ಚಾಲನೆ ಮಾಡಿದ್ದು, ಅರ್ಧ ದಾರಿಯಲ್ಲಿ ಕಾರು ಸಿಲುಕಿಕೊಂಡಿದೆ.

ಹಿಂದೆಯೂ ಹೋಗದೆ ಮುಂದೆಯೂ ಹೋಗದೆ ಮೆಟ್ಟಿಲುಗಳಲ್ಲಿ ಕಾರು ಸಿಲುಕಿದ್ದು, ಬಳಿಕ ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಕಾರನ್ನು ಮುಖ್ಯ ರಸ್ತೆಗೆ ತರಲು ಸಹಕರಿಸಿದ್ದಾರೆ. ಗೂಗಲ್ ಮ್ಯಾಪ್ ಬಳಸಿ ಅದೆಷ್ಟೋ ಮಂದಿ ದಾರಿ ತಪ್ಪಿ ಪೇಚಿಗೆ ಸಿಲುಕುತ್ತಿರುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

Shwetha M