ಗಂಡನಿಗೆ ಬೇರೊಂದು ಸಂಬಂಧ, ಕೊನೆಯಾಯ್ತು ನಟಿಯ ದಾಂಪತ್ಯ ಜೀವನ – ಹೇಮಮಾಲಿನಿ ಮಗಳು ಇಶಾ ಬದುಕಲ್ಲಿ ಬಿರುಗಾಳಿ
ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಮಾಲಿನಿ ಹಾಗೂ ಧರ್ಮೇಂದ್ರ ಅವರ ಮಗಳು ಇಶಾ ಡಿಯೋಲ್ ಅವರ ದಾಂಪತ್ಯ ಜೀವನ ಕೊನೆಯಾಗಿದೆ. 11 ವರ್ಷಗಳ ಕಾಲ ಸಂಸಾರ ನಡೆಸಿದ್ದ ಇಶಾ ಹಾಗೂ ಭರತ್ ತಖ್ತಾನಿ ಅವರು ಅಧಿಕೃತವಾಗಿ ಬೇರೆ ಆಗಿರುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಒಟ್ಟಾಗಿ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಹಳ್ಳಿಕಾರ್ ಒಡೆಯನ ಮನೆಗೆ ಬಂದ ತುಕಾಲಿ ಸಂತುಗೆ ಭರ್ಜರಿ ಗಿಫ್ಟ್! – ಸ್ನೇಹಿತನ ಉಡುಗೊರೆಗೆ ಭಾವುಕರಾದ ತುಕಾಲಿ
ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಮಗಳು ಇಶಾ ಡಿಯೋಲ್ ಅವರ ದಾಂಪತ್ಯ ಜೀವನ ಕೊನೆಗಳ್ಳಲು ಕಾರಣ ಭರತ್ ಎಂದು ಹೇಳಲಾಗ್ತಿದೆ. ಭರತ್ ಅವರು ಬೇರೆ ಯುವತಿಯ ಜೊತೆ ರಿಲೇಶನ್ ಶಿಪ್ನಲ್ಲಿದ್ದಾರೆ. ಬೆಂಗಳೂರಿನಲ್ಲಿ ಅದೇ ಯುವತಿಯ ಜೊತೆ ಹೊಸ ವರ್ಷಾಚರಣೆ ಕೂಡಾ ಮಾಡಿದ್ದಾರೆ.
2012ರ ಜೂನ್ 29ರಂದು ಮುಂಬೈನ ಇಸ್ಕಾನ್ ದೇವಾಲಯದಲ್ಲಿ ಇಶಾ ಹಾಗೂ ಭರತ್ ಮದುವೆ ಆಗಿದ್ದರು. 11 ವರ್ಷಗಳ ಕಾಲ ಸಂಸಾರ ನಡೆಸಿದ್ದ ಇಶಾ ಹಾಗೂ ಭರತ್ ತಖ್ತಾನಿ ದಂಪತಿ ತಮ್ಮ ಡೈವೋರ್ಸ್ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಮಕ್ಕಳ ಯೋಗಕ್ಷೇಮಕ್ಕೆ ಇಬ್ಬರೂ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ‘ನಾವು ಸೌಹಾರ್ದಯುತವಾಗಿ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿ ಮತ್ತು ಏಳ್ಗೆ ನಮಗೆ ಅತ್ಯಂತ ಮಹತ್ವದ್ದಾಗಿದೆ’ ಎಂದು ಅವರು ತಿಳಿಸಿದ್ದಾರೆ. ಈ ದಂಪತಿಗೆ 6 ವರ್ಷದ ರಾಧ್ಯಾ ಹಾಗೂ 4 ವರ್ಷದ ಮಿರಾಯಾ ಹೆಸರಿನ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಇಶಾ ಹಾಗೂ ಭರತ್ ಬೇರೆ ಆಗುತ್ತಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯಗಳಿಂದ ಹರಿದಾಡುತ್ತಲೇ ಇತ್ತು. ಈಗ ಈ ಸುದ್ದಿ ನಿಜವಾಗಿದೆ. ಇಶಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿ ಆದಾಗ ಭರತ್ ಎಲ್ಲಿಯೂ ಕಾಣುತ್ತಿರಲಿಲ್ಲ. ಹೇಮಾ ಮಾಲಿನಿ ಅವರ 75ನೇ ವರ್ಷದ ಬರ್ತ್ಡೇ ಆಚರಣೆ ವೇಳೆ, ಇಶಾ ಹುಟ್ಟುಹಬ್ಬ ಆಚರಣೆ ವೇಳೆ ಭರತ್ ಹಾಜರಿ ಇರಲಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಇಶಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2002ರಲ್ಲಿ. ‘ಕೊಯಿ ಮೆರೆ ದಿಲ್ ಸೆ ಪೂಚೆ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. 2015ರಿಂದ ಈಚೆ ಇಶಾ ಸಿನಿಮಾಗಳಲ್ಲಿ ನಟಿಸಿಲ್ಲ. ವೆಬ್ ಸೀರಿಸ್ಗಳಲ್ಲಿ ಇಶಾ ಕಾಣಿಸಿಕೊಂಡಿದ್ದಾರೆ.