ಇನ್ಮುಂದೆ 9 ತಿಂಗಳ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡ ಫಿಕ್ಸ್!‌

ಇನ್ಮುಂದೆ 9 ತಿಂಗಳ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡ ಫಿಕ್ಸ್!‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸರು ವಾಹನ ಸವಾರರ ಸುರಕ್ಷತೆಗಾಗಿ ಹೊಸ ಹೊಸ ರೂಲ್ಸ್‌ ತರುತ್ತಿದ್ದಾರೆ. ಇದೀಗ ಟ್ರಾಫಿಕ್‌ ಪೊಲೀಸರು ಮಹತ್ವದ ನಿಯಮವೊಂದನ್ನ ಜಾರಿಗೆ ತಂದಿದೆ. ಇನ್ಮುಂದೆ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾತ್ರಿ ಲೇಟ್‌ ಆಗಿ ಊಟ ಮಾಡ್ತೀರಾ? – ಆರೋಗ್ಯ ಕೈ ಕೊಡೋದಿಕ್ಕೂ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೆ ಹೆಲ್ಮೆಟ್‌ ಹಾಕಿಸದೇ ಕರೆದುಕೊಂಡು ಹೋಗಲಾಗ್ತಿದೆ. ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಒಂಚೂರು ಯೋಚಿಸುತ್ತಿಲ್ಲ. ಇದೀಗ ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವ ಪೋಷಕರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಮುಂದಿನ ಆರು ತಿಂಗಳ ಒಳಗಾಗಿ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯಗೊಳಿಸುವ ನಿಯಮಗಳನ್ನು ಪರಿಷ್ಕೃತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳೂ ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯವಾಗಲಿದೆ.

ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಟ್ರಾಫಿಕ್​ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಈ ಬಗ್ಗೆ  ಬೆಂಗಳೂರು ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಕಾರ್ತಿಕ್​ ರೆಡ್ಡಿ ಮಾಹಿತಿ ನೀಡಿದ್ದು, 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳೂ ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಎಲ್ಲರ ಜೀವವೂ ಅತ್ಯಮೂಲ್ಯ. ಅಪಘಾತ ಯಾವಾಗ ಬೇಕಿದ್ದರೂ ಸಂಭವಿಸಬಹುದು, ಹೀಗಾಗಿ ನಿರ್ಲಕ್ಷ್ಯ ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೆಲ್ಮೆಟ್​​ಗಳು ಲಭ್ಯವಿದ್ದು, ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಗ್ರಾಹಕರ ಕೈಗೆಟುಕುತ್ತಿವೆ. ಮಕ್ಕಳಿಗೆ ಹೆಲ್ಮಟ್​​ ಕೊಡಿಸುವುದರಲ್ಲಿ ಬೆಂಗಳೂರಿನ ಪೋಷಕರು ಹಿಂದೆ ಉಳಿದಿದ್ದು, ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Shwetha M