ಜುಲೈ 15ರವರೆಗೆ ಹೆಬ್ಬಾಳ ಫ್ಲೈ ಓವರ್ ಸರ್ವಿಸ್ ರಸ್ತೆ ಬಂದ್ – ಸವಾರರಿಗೆ ಟ್ರಾಫಿಕ್ ಜಾಮ್ ತಲೆಬಿಸಿ  

ಜುಲೈ 15ರವರೆಗೆ ಹೆಬ್ಬಾಳ ಫ್ಲೈ ಓವರ್ ಸರ್ವಿಸ್ ರಸ್ತೆ ಬಂದ್ – ಸವಾರರಿಗೆ ಟ್ರಾಫಿಕ್ ಜಾಮ್ ತಲೆಬಿಸಿ  

ಬೆಂಗಳೂರು ಅಂದರೆ ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನನಗರಿ ಅಂತೆಲ್ಲಾ ಕರೆಯುತ್ತಾರೆ. ಆದರೆ ಇದೇ ಸಿಟಿ ಟ್ರಾಫಿಕ್ ಜಾಮ್ ವಿಚಾರವಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದೇಪದೆ ಸುದ್ದಿಯಾಗುತ್ತಿದೆ. ಅದರಲ್ಲೂ ನಗರದ ಹಲವು ಏರಿಯಾಗಳಲ್ಲಿ ಅತೀ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದರಲ್ಲಿ ಹೆಬ್ಬಾಳ ಫ್ಲೈ ಓಬರ್ ಕೂಡ ಒಂದು. ಇದೀಗ ಜುಲೈ 15ರವರೆಗೆ ಸರ್ವೀಸ್ ರಸ್ತೆ ಬಂದ್ ಇರಲಿದ್ದು, ಇದರಿಂದ ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ – ಪಾಸ್‌ ಆದವರಿಗಿಂತ ಫೇಲ್‌ ಆದವರೇ ಹೆಚ್ಚು!

ರಾಜ್ಯ ರಾಜಧಾನಿಯ ಹೆಬ್ಬಾಳ ಫ್ಲೈಓವರ್​​ಗೆ ಹೆಚ್ಚುವರಿ ರಾಂಪ್​ ಕಾಮಗಾರಿ ನಡೆಯುತ್ತಿದೆ. ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಹೆಬ್ಬಾಳ ಪೊಲೀಸ್ ಠಾಣೆಯಿಂದ ಬೆಂಗಳೂರು ಸರ್ವಿಸ್ ರಸ್ತೆ ಬಂದ್ ಮಾಡಲಾಗಿದೆ. ಜುಲೈ 15ರವರೆಗೆ ಸರ್ವೀಸ್ ರಸ್ತೆ ಬಂದ್ ಇರಲಿದ್ದು, ಇದರಿಂದ ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಜುಲೈ 15ರವರೆಗೆ ಟ್ರಾಫಿಕ್‌ ಜಾಮ್‌ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ಸುಗಮಗೊಳಿಸಲು ಹೆಚ್ಚುವರಿ ರ‍್ಯಾಂಪ್ ನಿರ್ಮಿಸುವ ಯೋಜನೆ ಆರಂಭವಾಗಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಒಟ್ಟು 700 ಮೀಟರ್ ಉದ್ದದ ಪ್ರಸ್ತಾವಿತ ಮೇಲ್ಸೇತುವೆಯನ್ನು 87 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಇರುವ ಮೇಲ್ಸೇತುವೆಗೆ ಹೆಚ್ಚುವರಿ ಎರಡು ಲೇನ್‌ಗಳು ಸೇರ್ಪಡೆಗೊಳ್ಳಲಿವೆ. ಹೆಚ್ಚುವರಿ ರಾಂಪ್ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಜೊತೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬರುವ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ.

suddiyaana