ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ – ಓರ್ವ ವಿದೇಶಿ ಸಾವು, ಹಲವಾರು ಮಂದಿ ಸಿಲುಕಿರುವ ಶಂಕೆ

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ – ಓರ್ವ ವಿದೇಶಿ ಸಾವು, ಹಲವಾರು ಮಂದಿ ಸಿಲುಕಿರುವ ಶಂಕೆ

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಇದೀಗ ಹಿಮಪಾತಕ್ಕೆ ವಿದೇಶಿಗನೋರ್ವ ಸಾವನ್ನಪ್ಪಿದ್ದಾರೆ. ಹಲವು ವಿದೇಶಿಗರು ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಸಾವು – ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ನೋವಿಗೆ ಕೊನೆ ಎಲ್ಲಿದೆ?

ಕಳೆದ ಕೆಲವು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆ, ಹಿಮ ಬೀಳುವಿಕೆ ದಾಖಲಿಸಿದ್ದರಿಂದ ಹಿಮಪಾತದ ಎಚ್ಚರಿಕೆ ನೀಡಲಾಗಿತ್ತು. ಗುರುವಾರ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಭಾರಿ ಹಿಮಪಾತ ಸಂಭವಿಸಿದೆ. ಪರಿಣಾಮ  ಒಬ್ಬ ವಿದೇಶಿ ಸಾವಿಗೀಡಾಗಿದ್ದು ಹಲವಾರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ.

ಸ್ಥಳೀಯ ನಿವಾಸಿಗಳಿಲ್ಲದೆ ಅನೇಕ ವಿದೇಶಿಗರು ಕಾಂಗ್‌ದೂರಿ ಇಳಿಜಾರಿಗೆ ಹೋಗಿದ್ದರು. ಈ ವೇಳೆ ಹಿಮಪಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವರು ಸ್ಕೀಯರ್‌ಗಳನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೇನೆಯ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಗಸ್ತು ತಂಡವು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.

Shwetha M