ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತರ ನೂಕುನುಗ್ಗಲು – ವೆಂಕಟೇಶ್ವರನ ದರ್ಶನಕ್ಕೆ ಮತ್ತೆಷ್ಟು ದಿನ ಕಾಯಬೇಕು?

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತರ ನೂಕುನುಗ್ಗಲು – ವೆಂಕಟೇಶ್ವರನ ದರ್ಶನಕ್ಕೆ ಮತ್ತೆಷ್ಟು ದಿನ ಕಾಯಬೇಕು?

ವಿಶ್ವದ ಅತಿ ಸಿರಿವಂತ ದೇಗುಲ ಅಂದ್ರೆ ತಿರುಪತಿ ತಿಮ್ಮಪ್ಪನ ಸನ್ನಿಧಿ. ಸಾವಿರಾರು ಕೋಟಿಯ ಒಡೆಯ ತಿಮ್ಮಪ್ಪನ ನೋಡಲು ಭಕ್ತರ ದಂಡೇ ಹರಿದುಬರುತ್ತೆ. ದೇಶ, ವಿದೇಶಗಳಿಂದಲೂ ಜನ ಬರುತ್ತಾರೆ. ಸದಾ ಜನರಿಂದ ತುಂಬಿ ತುಳುಕುವ ತಿರುಪತಿ ದೇಗುಲಕ್ಕೆ ಹೋಗುವವರ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಇದೇ ಕಾರಣಕ್ಕೆ ತಿರುಮಲದಲ್ಲಿ ನೂಕು ನುಗ್ಗಲು ಉಂಟಾಗಿದೆ.

ವಿಶ್ವದ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಮಲದಲ್ಲಿ (Tirupathi Temple) ಭಕ್ತರ ನೂಕುನುಗ್ಗಲು ಹೆಚ್ಚಳವಾಗಿದೆ. ಬೇಸಿಗೆ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಇನ್ನೊಂದು ವಾರ ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಮುಂದುವರಿಯಲಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರ ಒಂದೇ ದಿನ 79,974 ಭಕ್ತರು ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದ ಭಕ್ತರು ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಶ್ರೀಗಳಿಗೆ 3.77 ಕೋಟಿ ರೂಪಾಯಿ ಹಾಕಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆ ವೇಳೆಗೆ 27ನೇ ಕಂಪಾರ್ಟ್‌ಮೆಂಟ್‌ನಲ್ಲಿ ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು.

ಇದನ್ನೂ ಓದಿ : ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ

ವೆಂಕಟೇಶ್ವರನ ದರ್ಶನಕ್ಕೆ ಇನ್ನೂ 18 ಗಂಟೆ ಕಾಯಬೇಕಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ. ಇನ್ನು ಸೋಮವಾರ ಒಂದೇ ದಿನ 37,052 ಮಂದಿ ಭಕ್ತರಿಗೆ ಮುಡಿ ಸಮರ್ಪಿಸಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವಿಶೇಷ ಕ್ರಮ ಕೈಗೊಂಡಿದ್ದು, ಟಿಟಿಡಿ ಕ್ಯುಲೈನ್, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಭಕ್ತರಿಗೆ ಹಾಲು, ಮಜ್ಜಿಗೆ, ಕಿಚಿಡಿ, ಉಪ್ಮಾ, ಸಾಂಬಾರ್ ಅನ್ನ, ಪೆರುಗನ್ನಂ, ಸುಂಡಲ್ ಮತ್ತು ಉತ್ತಮ ನೀರನ್ನು ಒದಗಿಸಲಾಗಿದೆ. ಮತ್ತೊಂದೆಡೆ, ತಿರುಮಲ ಶ್ರೀಗಳ ದರ್ಶನಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯೊಂದಿಗೆ ಬರುವಂತೆ ಟಿಟಿಡಿ ಮನವಿ ಮಾಡಿದೆ. ಅದರಲ್ಲೂ ವಾಸ್ತವ್ಯದ ವಿಚಾರದಲ್ಲಿ ಟ್ರಾಫಿಕ್ ಜಾಸ್ತಿ ಇರುವುದರಿಂದ ಭಕ್ತರಿಗೆ ಮಹತ್ವದ ಸೂಚನೆಗಳನ್ನು ನೀಡಲಾಗುತ್ತಿದೆ.

ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವರಾಗಿರುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ (ಟಿಟಿಡಿ) ದೇಶಾದ್ಯಂತ ಹೊಂದಿರುವ 960 ಸ್ವತ್ತುಗಳ ಮೌಲ್ಯ 85,705 ಕೋಟಿ ರೂ. ಆಗಿದೆ. ಆದರೆ ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯವು ಒಂದೂವರೆ ಪಟ್ಟು ಹೆಚ್ಚಿದ್ದು, ಸುಮಾರು 2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಸಂಪತ್ತು ಹೊಂದಿದ ದೇಗುಲ ಜಗತ್ತಿನಲ್ಲೇ ಬೇರೆಲ್ಲೂ ಇಲ್ಲ.

 

suddiyaana