ಭಾರಿ ಮಳೆಗೆ ತಮಿಳುನಾಡು ತತ್ತರ..! – ಮುಂದಿನ ಏಳು ದಿನ ಭಾರಿ ಮಳೆ ಸಾಧ್ಯತೆ!

ಭಾರಿ ಮಳೆಗೆ ತಮಿಳುನಾಡು ತತ್ತರ..! – ಮುಂದಿನ ಏಳು ದಿನ ಭಾರಿ ಮಳೆ ಸಾಧ್ಯತೆ!

ತಮಿಳುನಾಡಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಮೋದಿ ಸೋಲಿಸುವ ಮುನ್ನ ತಮ್ಮೊಳಗಿನ ಅಸಮಾಧಾನ ಗೆಲ್ಲಬೇಕು – ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಹಲವು ಸವಾಲು

ಭಾನುವಾರದಿಂದ ಚೆನ್ನೈನ ಹಲವು ಭಾಗಗಳಲ್ಲಿ ನಿರಂತವಾಗಿ ಮಳೆ ಸುರಿಯುತ್ತಿದೆ. ನಾಗಪಟ್ಟಣಂ, ಕಿಲ್ವೇಲೂರು ತಾಲೂಕು, ವಿಲುಪುರಂ ಮತ್ತು ಕಡಲೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲ್ಲಕುರಿಚಿ, ರಾಣಿಪೇಟ್, ವೆಲ್ಲೂರು ಮತ್ತು ತಿರುವಣ್ಣಾಮಲೈನಲ್ಲಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯ ಪರಿಣಾಮ ಕೆಲ ಪ್ರದೇಶಗಳಲ್ಲಿ ಮುಖ್ಯ ರಸ್ತೆ ತುಂಬಾ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮುಂದಿನ ಏಳು ದಿನಗಳ ಕಾಲ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Shwetha M