ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಸಿಂಚನ – ಮಟ ಮಟ ಮಧ್ಯಾಹ್ನವೇ ವರುಣನ ಅಬ್ಬರ
ಬಿಸಿಲಿನ ಹೊಡೆತದಿಂದ ಕಂಗೆಟ್ಟಿದ್ದ ಜನತೆಗೆ ಕೊನೆಗೂ ವರುಣರಾಯ ಕೃಪೆ ತೋರಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಭಾರಿ ಮಳೆಯಾಗಿದ್ದು, ಸೂರ್ಯನ ಶಾಖದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: ಮೀನು ತಿಂದ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥ – ಇಬ್ಬರು ಸಾವು
ಬಿಸಿಲಿತ ತಾಪದಿಂದ ಬೆಂಡಾಗಿದ್ದ ಬೆಂಗಳೂರಿಗರು ಯಾವಾಗ ಮಳೆಯಾಗುತ್ತದೆ ಅಂತಾ ಆಕಾಶ ನೋಡುತ್ತಿದ್ದರು. ಗುರುವಾರ ನಗರದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಶುಕ್ರವಾರ ಮಧ್ಯಾಹ್ನ ನಗರದ ಹಲವೆಡೆ ಭಾರಿ ಮಳೆಯಾಗಿದೆ. ಮೆಜೆಸ್ಟಿಕ್, ಸುಧಾಮನಗರ, ಟೌನ್ ಹಾಲ್, ಮಾರ್ಕೆಟ್, ಹೆಬ್ಬಾಳ, ರಾಜಾಜಿನಗರ, ಕಾರ್ಪೋರೇಶನ್, ಗುಡ್ಡದಹಳ್ಳಿ, ಸುಬ್ಬಯ್ಯ ಸರ್ಕಲ್, ರಾಜಾಜಿನಗರ, ರೇಸ್ಕೋರ್ಸ್, ಶಾಂತಿನಗರ, ಎಸ್ಪಿ ರೋಡ್ ಸೇರಿದಂತೆ ವಿವಿಧೆಡೆ ಮಳೆ ಮಳೆಯಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಜನರು ಬಿಸಿಲಿನಿಂದ ಸಾಕಾಗಿ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಗುರುವಾರ ಸಂಜೆ ಹಲವೆಡೆ ತುಂತುರು ಮಳೆ ಸುರಿದಿತ್ತು. ಶುಕ್ರವಾರ ಕೂಡ ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣ ಜೊತೆಗೆ ಮಳೆ ಆಗಮನವಾಗಿದೆ. ರಾತ್ರಿ ವೇಳೆಗೆ ಇನ್ನು ಜೋರಾಗಿ ಮಳೆ ಬರುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.