ಉತ್ತರ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನಕ್ಕೆ ಇಬ್ಬರು ಬಲಿ – 138 ಜಾನುವಾರುಗಳು ಸಾವು!

ಉತ್ತರ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನಕ್ಕೆ ಇಬ್ಬರು ಬಲಿ – 138 ಜಾನುವಾರುಗಳು ಸಾವು!

ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ನಿರಂತರ ಮಳೆಯಿಂದಾಗಿ ಜನರು ತತ್ತರಿಸಿಹೋಗಿದ್ದಾರೆ.  ಲಕ್ನೋ,ಬದೌನ್‌ ಮತ್ತು ಶಹಜಗಾನ್‌ಪುರದಲ್ಲಿ ಭಾನುವಾರ ಇಲ್ಲಿವರೆಗೆ ಲಕ್ನೋದಲ್ಲಿ 93 ಮಿ.ಮೀ ಮಳೆ ದಾಖಲಾಗಿದ್ದು, ಇದು ಈ ವರ್ಷದ ಗರಿಷ್ಠ ಮಳೆಯಾಗಿದೆ ಎಂದು ವರದಿಯಾಗಿದೆ.

ಭಾನುವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರುಣಾರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಉನ್ನಾವೋ ಜಿಲ್ಲೆಯ ಹಸನ್‌ಗಂಜ್ ಪ್ರದೇಶದ ಗಜಫರ್‌ನಗರದಲ್ಲಿ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಪೂರ್ವಾ ಪ್ರದೇಶದ ಸುಖೇಡಾ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು 50 ವರ್ಷದ ರಾಮ್ ಸ್ವರೂಪ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತಂಗಿ ಜೊತೆ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಖ್ಯಾತ ನಟಿ – ಅಪರ್ಣಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

ಬಾರಿ ಮಳೆಯ ಜೊತೆ ಗುಡುಗು ಸಿಡಿಲಿನ ಅಬ್ಬರವೂ ಜೋರಾಗಿಯೇ ಇದೆ. ಬೆಹ್ತಾ ಗ್ರಾಮದ ಮರಕ್ಕೆ ಸಿಡಿಲು ಬಡಿದು ಐದು ಮಂಗಗಳು ಸಾವನ್ನಪ್ಪಿವೆ. ಸಿಡಿಲು ಬಡಿದು ಬರೋಬ್ಬರಿ 136 ಕುರಿಗಳು ಸಾವನ್ನಪ್ಪಿವೆ. ಕಳೆದ ಮೂರು ದಿನಗಳಿಂದ ಒರೈ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಧಾರಾಕಾರ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟವೂ ಹೆಚ್ಚಿದೆ. ಯಮುನೆಯ ನೀರಿನ ಮಟ್ಟ ಮೂರು ಸೆಂಟಿಮೀಟರ್‌ಗಳಷ್ಟು ಹೆಚ್ಚಿದ್ದು, 101.44 ಸೆಂಟಿಮೀಟರ್‌ಗೆ ತಲುಪಿದೆ. ಜೋರಾದ ಗಾಳಿ ಸಹಿತ ಮಳೆಯಿಂದಾಗಿ ಭತ್ತ, ಮುಸುಕಿನ ಜೋಳ, ರಾಗಿ ಬೆಳೆಗಳು ಬೀಳಲಾರಂಭಿಸಿವೆ. ಮೆಣಸಿನಕಾಯಿ, ಎಳ್ಳು, ತರಕಾರಿ ಬೆಳೆಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ವರದಿಯಾಗಿದೆ.

suddiyaana