ಮುಂಬೈನಲ್ಲಿ ಮಳೆ ಅಬ್ಬರ – ಶಾಲಾ,ಕಾಲೇಜುಗಳಿಗೆ ರಜೆ, ರೈಲು ಸ್ಥಗಿತ, ವಿಮಾನ ಹಾರಾಟದಲ್ಲೂ ಅಡಚಣೆ
ಮುಂಬೈ ರಣಮಳೆಗೆ 6 ಬ*ಲಿ

ಮುಂಬೈನಲ್ಲಿ ಮಳೆ ಅಬ್ಬರ – ಶಾಲಾ,ಕಾಲೇಜುಗಳಿಗೆ ರಜೆ, ರೈಲು ಸ್ಥಗಿತ, ವಿಮಾನ ಹಾರಾಟದಲ್ಲೂ ಅಡಚಣೆಮುಂಬೈ ರಣಮಳೆಗೆ 6 ಬ*ಲಿ

ಮುಂಬೈನಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದ ಮುಂಬೈ ಮಹಾನಗರಿ ತತ್ತರಿಸಿದೆ. ನಗರದಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರೈಲು ಸೇವೆಗಳು ಮತ್ತು ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ಭೂಕುಸಿತದಿಂದ ಮುಂಬೈ-ಪುಣೆ ಮಾರ್ಗ ಬಂದ್ ಆಗಿದೆ.

ಇದನ್ನೂ ಓದಿ:ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್ – ಜುಲೈ 20 ರಿಂದ ಆಗಸ್ಟ್ 13 ರವರೆಗೆ ಚರ್ಚೆೆ

ಮುಂಬೈನಲ್ಲಿಮಹಾಮಳೆ ಸುರಿಯುತ್ತಿದೆ. ನಗರದಾದ್ಯಂತ ರಸ್ತೆಗಳು ಜಲಾವೃತಗೊಂಡಿವೆ. ಮರಗಳು ಅಲ್ಲಲ್ಲಿ ಉರುಳಿಬಿದ್ದಿವೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದರಲ್ಲೂ ಮಂಖುರ್ಡ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದರ ಭಾಗ ಕುಸಿದು ಬಿದ್ದು ಆರು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ 8.30 ರ ಸುಮಾರಿಗೆ ಮಂಖುರ್ಡ್‌ನ ಜನತಾ ನಗರದಲ್ಲಿರುವ ನಾಲ್ಕು ಅಂತಸ್ತಿನ ಚಾಲ್ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಕೂಡಾ ಆರು ಜನರು ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲೂ ಭಾರೀ ಮಳೆಯಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಮುಂಬೈ-ಪುಣೆ ರೈಲು ಕಾರಿಡಾರ್‌ನಲ್ಲಿ ಭೂಕುಸಿತ ಮಹಾರಾಷ್ಟ್ರದ ಅತ್ಯಂತ ಜನನಿಬಿಡ ರೈಲ್ವೆ ಮಾರ್ಗಗಳಲ್ಲಿ ಒಂದಾದ ಮುಂಬೈ-ಪುಣೆ ರೈಲು ಕಾರಿಡಾರ್ ಸೋಮವಾರ ಮುಂಜಾನೆ ಸಂಪೂರ್ಣ ಬಂದ್ ಆಗಿದೆ. ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಬಳಿ ನಿರಂತರ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿದೆ. ಬೆಟ್ಟದ ಮಣ್ಣು ಮತ್ತು ಬಂಡೆಗಳು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದರಿಂದ ಘಾಟ್ ವಿಭಾಗದ ಮೂರೂ ರೈಲ್ವೆ ಮಾರ್ಗಗಳು ಬಂದ್ ಆಗಿವೆ. ಇದರಿಂದಾಗಿ ಕೇಂದ್ರ ರೈಲ್ವೆ ಇಲಾಖೆಯು ಹಲವಾರು ಪ್ರಯಾಣಿಕ ಹಾಗೂ ದೂರದ ರೈಲುಗಳನ್ನು ರದ್ದುಗೊಳಿಸಿದೆ.

Sulekha

Leave a Reply

Your email address will not be published. Required fields are marked *