ಭಾರಿ ಮಳೆ ಎಫೆಕ್ಟ್‌ – ಗಗನಕ್ಕೇರಿದ ತರಕಾರಿ ಬೆಲೆ   

ಭಾರಿ ಮಳೆ ಎಫೆಕ್ಟ್‌ – ಗಗನಕ್ಕೇರಿದ ತರಕಾರಿ ಬೆಲೆ   

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದ್ರಿಂದಾಗಿ ಸಾಕಷ್ಟು ಬೆಲೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬೆನ್ನಲ್ಲೇ ತರಕಾರಿ ಬೆಲೆ  ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ.

ಇದನ್ನೂ ಓದಿ: ದರ್ಶನ್‌ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್‌ ರಿಲೀಫ್‌

ಒಂದ್ಕಂಡೆ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಮತ್ತೊಂದ್ಕಡೆ  ದೀಪಾವಳಿ ಹಬ್ಬ ಹತ್ತಿರವಾಗುತ್ತಿದೆ.  ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದೆ.

ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲುಗೆಡ್ಡೆ, ಟೊಮಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ. ಇಂದ 440 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ.

ಯಾವ ತರಕಾರಿ ದರ ಎಷ್ಟಿತ್ತು? ಎಷ್ಟಾಗಿದೆ?

  • ದಪ್ಪ ಈರುಳ್ಳಿ: 58 – 79 ರೂ.
  • ಸಾಂಬಾರ್ ಈರುಳ್ಳಿ: 60 – 85 ರೂ.
  • ಟೊಮಾಟೊ: 60- 85 ರೂ.
  • ಹಸಿ ಮೆಣಸಿನಕಾಯಿ: 50 – 70 ರೂ.
  • ಬೀಟ್‌ರೂಟ್: 45 – 60 ರೂ.
  • ಆಲುಗೆಡ್ಡೆ: 50 – 70 ರೂ.
  • ಕ್ಯಾಪ್ಸಿಕಮ್: 50 – 65 ರೂ.
  • ಹಾಗಲಕಾಯಿ: 45- 65 ರೂ.
  • ಬೀನ್ಸ್: 60 – 80 ರೂ.
  • ಡಬಲ್ ಬೀನ್ಸ್: 65 – 90 ರೂ.
  • ಕ್ಯಾಬೇಜ್: 35- 50 ರೂ.
  • ಸೌತೆಕಾಯಿ: 45 – 55 ರೂ.
  • ಬದನೆಕಾಯಿ: 40 – 55 ರೂ.
  • ಸುವರ್ಣಗೆಡ್ಡೆ: 50 – 70 ರೂ.
  • ಶುಂಠಿ: 75- 100 ರೂ.
  • ಬೆಂಡೆಕಾಯಿ: 35- 50 ರೂ.
  • ಕ್ಯಾರೆಟ್: 50- 65 ರೂ.

Shwetha M