ಕೇರಳದಲ್ಲಿ ಮಳೆಯ ನರ್ತನ – ತುಂಬಿದ ಡ್ಯಾಂ, ಪ್ರವಾಹ ಪರಿಸ್ಥಿತಿ

ಕೇರಳದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಕೋಯಮುತ್ತೂರು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.‌

ರಂತರ ಮಳೆಯಿಂದ ಮುಲ್ಲಪೆರಿಯಾರ್ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ಜಲಾಶಯವನ್ನು ನಿರ್ವಹಿಸುವ ತಮಿಳುನಾಡು ನೀರಾವರಿ ಇಲಾಖೆಯು 13 ಗೇಟ್‌ಗಳನ್ನು 100 ಸೆಂ.ಮೀ. ತೆರೆದಿದೆ. ಬೆಳಿಗ್ಗೆ 5 ಗಂಟೆಗೆ 139.30 ಅಡಿ ನೀರು ಸಂಗ್ರಹವಾಗಿದ್ದ ಜಲಾಶಯದಿಂದ 1,400 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಿಲ್ಲಾ ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯ ಇತರ ಮೂರು ಜಲಾಶಯಗಳಿಂದಲೂ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

Kishor KV