ಗಗನ್-ಮಂಜು ನಡುವೆ ತಾರಕಕ್ಕೇರಿದ ಜಗಳ – ತಿನ್ನುವ ಟಾಸ್ಕ್‌ನಲ್ಲಿ ಗೆದ್ದ ಮಂಜು ಮನೆಗೆ ಎಂಟ್ರಿ!

ಗಗನ್-ಮಂಜು ನಡುವೆ ತಾರಕಕ್ಕೇರಿದ ಜಗಳ – ತಿನ್ನುವ ಟಾಸ್ಕ್‌ನಲ್ಲಿ ಗೆದ್ದ ಮಂಜು ಮನೆಗೆ ಎಂಟ್ರಿ!

ಬಿಗ್‌ಬಾಸ್ ಕನ್ನಡದಲ್ಲಿ ಸ್ಪರ್ಧಿಗಳ ಮಾತು, ಜಗಳ ಮಿತಿಮೀರಿದೆ. ಈ ಬಾರಿ ದೊಡ್ಮನೆಗೆ ಬಂದವರು ಜಗಳಕ್ಕೆ ರೆಡಿಯಾಗಿಯೇ ಬಂದವರಂತೆ ಮಾತಿಗೆ ಮಾತು, ಏಟಿಗೆ ಎದುರೇಟು ಕೊಡುತ್ತಿದ್ದಾರೆ. ಗಗನ್ ಚಿನ್ನಪ್ಪ ಮತ್ತು ಮಾಡರ್ನ್​ ಮಹಾಕವಿ ಮಂಜು ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದೆ.

ಇದನ್ನೂ ಓದಿ:ಬಿಗ್‌ಬಾಸ್‌ ಶೋನಲ್ಲಿ ಕೀಳು ಮಟ್ಟದ ಮಾತು – ರಿಯಾಲಿಟಿ ಶೋನಲ್ಲಿ ಇಂಥಾ ಕ*ಚ*ಡ ಮಾತು ಬೇಕಾ?

ಬಿಗ್ ಬಾಸ್ ಮನೆಯಲ್ಲಿ ತಿನ್ನುವ ಟಾಸ್ಕ್‌ ನೀಡಲಾಗಿದೆ. ತಮಗೆ ಮೀಸಲಿರುವ ಎಲ್ಲಾ ತಿಂಡಿಗಳನ್ನು ಮೊದಲು ತಿಂದು ಖಾಲಿ ಮಾಡುವ ತಂಡ ಈ ಟಾಸ್ಕ್ ಗೆಲ್ಲುತ್ತದೆ. ಈ ವೇಳೆ ಫುಲ್ ಖಾರ ಹಾಕಿ ಅಡುಗೆ ಮಾಡಲಾಗಿದೆ. ಆದರೆ, ಮಂಜು ಇದನ್ನು ತಿಂದು ತೇಗಿದ್ದಾರೆ. ಮಂಜು ಮತ್ತು  ಗಗನ್ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆದಿದೆ.  ಗಗನ್ ಹೇಳಿದಂತೆ ಮಾಡು ಅಂತ ಹೇಳ್ತಿದ್ದಾರೆ. ಆಗ ಮಂಜು ಮಾತಿಗೆ ಮಾತು ಬೆಳೆಸಿದ್ದಾರೆ.

ಗಗನ್ ಚಿನ್ನಪ್ಪ ಇದೀಗ ವಿಐಪಿ ಆಗಿದ್ದಾರೆ. ದೊಡ್ಮನೆಯಿಂದ ವಿಶೇಷ ಸೌಲಭ್ಯ ಕೂಡ ಸಿಕ್ಕಿದೆ. ಮತ್ತೊಂದೆಡೆ ಗಗನ್ ಮತ್ತು ಮಂಜು ನಡುವೆ ಜಗಳ ಜೋರಾಗಿಯೇ ಆಗಿದೆ. ಇನ್ನು ಈ ಟಾಸ್ಕ್‌ನಲ್ಲಿ ಮಂಜು ಗೆದ್ದಿರಬಹುದು ಎಂದು ಅಂದಾಜಿಸಲಾಗಿದೆ. ಮಂಜು ಏನಾದರೂ ಗೆದ್ದರೆ ಬಿಗ್‌ಬಾಸ್ ಮನೆಯೊಳಗೆ ಬರಬಹುದು.

Sulekha

Leave a Reply

Your email address will not be published. Required fields are marked *