ಮೆಕ್ಸಿಕೋದಲ್ಲಿ ಹೀಟ್‌ವೇವ್‌ಗೆ 100ಕ್ಕೂ ಹೆಚ್ಚು ಮಂದಿ ಸಾವು
ಮೆಕ್ಸಿಕೋ: ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ತಾಪಮಾನ ಹೆಚ್ಚಳ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದೀಗ ಅಮೆರಿಕದ ಕೆಲವು ಭಾಗಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ (122 ಫ್ಯಾರನ್‌ಹೈಟ್) ಶಾಖ ದಾಖಲಾಗಿದೆ. ಮೆಕ್ಸಿಕೊದಲ್ಲಿ ಕಳೆದ ಎರಡು ವಾರಗಳಲ್ಲಿ ಹೀಟ್ವೇವ್ ಸಂಬಂಧಿತ ಕಾರಣಗಳಿಂದಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ವಿಶ್ವದೆಲ್ಲೆಡೆ ಅಧಿಕ ತಾಪಮಾನ! – ವಿಶ್ವ ಸಂಸ್ಥೆ ಎಚ್ಚರಿಕೆ ಏನು?
ಕಳೆದ ಮೂರು ವಾರಗಳಿಂದ ಮೆಕ್ಸಿಕೋ ನಗರದಲ್ಲಿ ಹೀಟ್ ವೇವ್ ಹೆಚ್ಚಾಗಿದೆ. ನೂರಾರು ಮಂದಿ ಅಸ್ವಸ್ಥರಾಗುತ್ತಿದ್ದಾರೆ. ಕಳೆದ ಮೂರು ವಾರಗಳಲ್ಲಿ ಬಹುತೇಕ ಎಲ್ಲಾ ಸಾವುಗಳು ಹೀಟ್ ಸ್ಟ್ರೋಕ್ನ ಕಾರಣದಿಂದ ಆಗಿದೆ. ಬೆರಳೆಣಿಕೆಯಷ್ಟು ಜನರು ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ. ಸುಮಾರು 64% ಸಾವುಗಳು ಟೆಕ್ಸಾಸ್‌ನ ಗಡಿಯಲ್ಲಿರುವ ಉತ್ತರ ರಾಜ್ಯವಾದ ನ್ಯೂವೊ ಲಿಯಾನ್‌ನಲ್ಲಿ ಸಂಭವಿಸಿವೆ. ಉಳಿದವುಗಳಲ್ಲಿ ಹೆಚ್ಚಿನವು ಗಲ್ಫ್ ಕರಾವಳಿಯ ನೆರೆಯ ತಮೌಲಿಪಾಸ್ ಮತ್ತು ವೆರಾಕ್ರಜ್‌ನಲ್ಲಿವೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ, ಮಳೆ ಬಿದ್ದಿದ್ದರಿಂದ ತಾಪಮಾನವು ಕುಸಿದಿದೆ. ಆದರೂ ಅಮೆರಿಕದ ಕೆಲವು ಉತ್ತರದ ನಗರಗಳಲ್ಲಿ ಇನ್ನೂ ತಾಪಮಾನ ಹೆಚ್ಚಾಗೆ ಇದೆ. ಸೊನೊರಾ ರಾಜ್ಯದಲ್ಲಿ, ಅಕೊಂಚಿ ಪಟ್ಟಣದಲ್ಲಿ 49 ಡಿಗ್ರಿ ಸೆಲ್ಸಿಯಸ್ (120 ಫ್ಯಾರನ್‌ಹೀಟ್) ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿದೆ.
ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಅಮೆರಿಕದ ಕೆಲವು ಭಾಗಗಳಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡುವಂತೆ ಸರ್ಕಾರಕ್ಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.