ಬೆಕ್ಕಿನ ಮರಿಯನ್ನು ರಕ್ಷಿಸಲು ಕೋತಿಯ ಶತಪ್ರಯತ್ನ – ಹೃದಯ ತುಂಬಿ ಬರುವಂತಿದೆ ಈ ದೃಶ್ಯ

ಬೆಕ್ಕಿನ ಮರಿಯನ್ನು ರಕ್ಷಿಸಲು ಕೋತಿಯ ಶತಪ್ರಯತ್ನ – ಹೃದಯ ತುಂಬಿ ಬರುವಂತಿದೆ ಈ ದೃಶ್ಯ

ಪ್ರೀತಿ, ಬಾಂಧವ್ಯ, ಕಾಳಜಿ ಮನುಷ್ಯರಂತೆ ಪ್ರಾಣಿಗಳಿಗೂ ಇದೆ. ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೆ ಏನಾದರೂ ತೊಂದರೆಯಾದ್ರೆ ಪ್ರಾಣಿಗಳು ಕೂಡ ಸಹಿಸಿಕೊಳ್ಳುವುದಿಲ್ಲ. ಅಪಾಯಕ್ಕೆ ಸಿಲುಕಿದ ವೇಳೆ ಜೀವವನ್ನು ಪಣಕ್ಕಿಟ್ಟು ತನ್ನವರನ್ನು ಕಾಪಾಡುತ್ತವೆ. ಇಲ್ಲೊಂದು ಬೆಕ್ಕಿನ ಮರಿ ಹೊಂಡವೊಂದಕ್ಕೆ ಬಿದ್ದಿದೆ. ಈ ಮರಿಯನ್ನು ಕೋತಿ ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ:ಬಾಳೆ ಹಣ್ಣಿನ ಸಿಪ್ಪೆ ಸುಲಿದುಕೊಂಡೇ ತಿಂತಾನೆ! –  ಎಲ್ಲರಂತಲ್ಲ ಈ ಆನೆ!

ಕೋತಿಗಳು ಮನುಷ್ಯರಂತೆ ಆಗಾಗ ವರ್ತಿಸುತ್ತವೆ. ಮನುಷ್ಯರಂತೆ ಅವುಗಳು ಕೂಡ ತನ್ನವರ ಮೇಲೆ ಪ್ರೀತಿ, ಕಾಳಜಿ ಹೊಂದಿರುತ್ತವೆ. ಕೆಲವೊಮ್ಮೆ ಇವುಗಳು ತೋರುವ ಅದ್ಭುತ ಬುದ್ಧಿವಂತಿಕೆ ಅಚ್ಚರಿ ಮೂಡಿಸುತ್ತವೆ. ಇದೀಗ ವೈರಲ್ ಆದ  ದೃಶ್ಯ ಅದಕ್ಕೆ ಸಾಕ್ಷಿ. ಬೆಕ್ಕಿನ ಮರಿಯೊಂದು ಪಾಳು ಗುಂಡಿಗೆ ಬಿದ್ದಿಗೆ. ಇದನ್ನು ಕಂಡ ಕೋತಿ ಬೆಕ್ಕಿನ ರಕ್ಷಣೆಗೆ ಮುಂದಾಗಿದೆ.  ಕೋತಿಯು ಈ ಹೊಂಡಕ್ಕೆ ಜಿಗಿದು, ಬೆಕ್ಕಿನ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊಂಡದಿಂದ ಮೇಲೆ ಬರಲು ಪ್ರಯತ್ನಿಸುತ್ತಿದೆ. ಎರಡ್ಮೂರು ಸಲ ಗುಂಡಿಯಿಂದಲೇ ಮೇಲೆ ಬಂದು ರಕ್ಷಣೆಗೆ ತನ್ನದೇ ಆದ ತಂತ್ರ ರೂಪಿಸುವ ಕೋತಿ ಬೆಕ್ಕನ್ನು ಪಾರು ಮಾಡುವ ಯಾವ ಪ್ರಯತ್ನವನ್ನೂ ಬಿಟ್ಟಿರಲಿಲ್ಲ. ಈ ಮುಗ್ಧ ಜೀವಿಯ ಪ್ರಯತ್ನ ಸಫಲವಾಗದೇ ಇದ್ದಾಗ ಹುಡುಗಿಯೊಬ್ಬಳು ಇವುಗಳ ಸಹಾಯಕ್ಕೆ ಬಂದಿದ್ದಾಳೆ. ಆಕೆ ಈ ಬೆಕ್ಕನ್ನು ಕೋತಿ ಹೊಂಡದಿಂದ ಹೊರಕ್ಕೆ ತೆಗೆದಿದ್ದಾಳೆ.

ಕೋತಿಯು ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು CCTV IDIOTS   ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

suddiyaana