ಇ-ಸಿಗರೇಟ್ ನಿಂದಲೂ ಆರೋಗ್ಯಕ್ಕೆ ಕಂಟಕ ತಪ್ಪಿದ್ದಲ್ಲ.. ಎಚ್ಚರ!
ಅಧ್ಯಯನದಿಂದ ಹೊರಬಿದ್ದಿದೆ ಬೆಚ್ಚಿಬೀಳುವ ಮಾಹಿತಿ..!
ಯಾವುದೇ ತಂಬಾಕು ಉತ್ಪನ್ನಗಳು ಇರಲಿ, ಅದು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಹೃದಯ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತಂಬಾಕು ಉತ್ಪನ್ನಗಳು ಕಾರಣವಾಗುತ್ತೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತು. ಆದರೆ ಆಧುನಿಕತೆ ಮುಂದುವರೆಯುತ್ತಿದ್ದಂತೆ ತಂಬಾಕು ಉತ್ಪನ್ನಗಳಿಗೆ ಪರ್ಯಾಯವಾಗಿ ಇ -ಸಿಗರೇಟ್ ಗಳನ್ನ ಕೆಲವು ದೇಶಗಳು ಉಪಯೋಗಿಸುತ್ತಿದ್ದವು. ಇದು ಸುರಕ್ಷಿತ ಪರ್ಯಾಯ ವಿಧಾನವೆಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಇ- ಸಿಗರೇಟ್ ನಿಂದ ಆರೋಗ್ಯಕ್ಕೆ ಅಪಾಯವಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೆಲವರಿಗೆ ಮಾತ್ರ ಸೊಳ್ಳೆ ಜಾಸ್ತಿ ಕಚ್ಚೋದು ಯಾಕೆ?
ಯೂನಿವರ್ಸಿಟಿ ಅಫ್ ಕ್ಯಾಲಿಫಾರ್ನಿಯದವರು ತಂಬಾಕು ಆಧಾರಿತ ಸಿಗರೇಟ್ ಮತ್ತು ಇ-ಸಿಗರೇಟ್ ಉಪಯೋಗಿಸುವ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಈ ಎರಡು ತಂಡದ ವ್ಯಕ್ತಿಗಳ ರಕ್ತನಾಳಗಳೂ ಸಂಕುಚಿತಗೊಂಡಿದ್ದು ಕಂಡುಬಂದಿದೆ. ಈ ಸಂಕುಚಿತಗೊಂಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಂಭವ ಜಾಸ್ತಿ ಇರುತ್ತದೆ. ಇ-ಸಿಗರೇಟ್ ಬ್ಯಾಟರಿ ಆಧಾರಿತ ಉಪಕರಣವಾಗಿದ್ದು, ಆವಿಗೊಂಡ ದ್ರವ್ಯವನ್ನ ಬಿಡುಗಡೆ ಮಾಡುತ್ತದೆ. ಹಾಗೇ ಬಿಡುಗಡೆಯಾಗುವ ಆವಿಯನ್ನ ಸೇದಿಕೊಳ್ಳಬಹುದು. ಇ-ಸಿಗರೇಟ್ ಗಳೂ ಪೆನ್, ಪೈಪ್ ಮತ್ತೂ USB ಡ್ರೈವ್ ಗಳ ಆಕಾರದಲ್ಲಿ ಇದ್ದೂ ಇದರ ಒಳಗಿನ ದ್ರವ್ಯವೂ ಹಣ್ಣಿನ ಸುವಾಸನೆಯನ್ನು ಬೀರುತ್ತದೆ. ಇದರಲ್ಲಿ ನಿಕೋಟಿನ್ ಅಂಶವು ಜಾಸ್ತಿ ಇರುತ್ತದೆ. ಇದನ್ನ ಹೆಚ್ಚಾಗಿ ಚೀನಾ, ಯುರೋಪ್, ಅಮೇರಿಕಾದಲ್ಲಿ ಬಳಸುತ್ತಿದ್ದಾರೆ.