ನಂಬಿಕೆಯಷ್ಟೇ ಅಲ್ಲ.. ಅನಾರೋಗ್ಯಕ್ಕೂ ರಾಮಬಾಣ! – ವಿಭೂತಿ ಹಚ್ಚೋದ್ರಿಂದ ಎಷ್ಟೆಲ್ಲಾ ಪ್ರಯೋಜನ?
ನಮ್ಮ ಪುರಾಣ ಹಾಗೂ ಶಾಸ್ತ್ರಗಳಲ್ಲಿ ನಾವು ಹಣೆಗೆ ಹಚ್ಚುವ ವಿಭೂತಿಗೆ ವಿಶೇಷವಾದ ಸ್ಥಾನಮಾನವಿದೆ. ಬಹಳಷ್ಟು ಪವಿತ್ರ ಎಂದು ಭಾವಿಸುತ್ತೇವೆ. ಪೂಜೆಯ ಸಂದರ್ಭಗಳಲ್ಲಿ ದೇವರಿಗೂ ಹಚ್ಚಿ ಜನ ತಾವು ಕೂಡ ಹಚ್ಚಿಕೊಳ್ಳುತ್ತಾರೆ. ಆದ್ರೆ ವಿಭೂತಿ ಕೇವಲ ಒಂದು ಧಾರ್ಮಿಕ ನಂಬಿಕೆಯಲ್ಲ. ವೈಜ್ಞಾನಿಕವಾಗಿಯೂ ಹಲವಾರು ಪ್ರಯೋಜನಗಳಿವೆ.
ಇದನ್ನೂ ಓದಿ: ಮೇ ಒಳಗೆ ಭಾರತದ ಸೇನೆ ವಾಪಸ್ ಹೋಗಲೇಬೇಕು! – ಮತ್ತೆ ಗುಡುಗಿದ ಮಾಲ್ಡೀವ್ಸ್ ಅಧ್ಯಕ್ಷ!
ಹಣೆಯ ಮೇಲೆ ವಿಭೂತಿ ಧರಿಸುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ವಿಭೂತಿಯನ್ನು ಧರಿಸುವುದರಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಳ್ಳುವುದು ಕೂಡ ವಿಭೂತಿ ಹಚ್ಚುವುದಕ್ಕೆ ಸಮ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಹಣೆಯ ಮೇಲ್ಭಾಗದಲ್ಲಿ ವಿಭೂತಿ ಅಥವಾ ಭಸ್ಮ ಹಚ್ಚುವುದರಿಂದ ವಿಪರೀತ ಬಿಸಿಲಿಗೆ ತಲೆನೋವು ಬರುವ ಸಮಸ್ಯೆ ಇರುವುದಿಲ್ಲ. ಹಣೆಯ ಮಧ್ಯಭಾಗ ಇಡೋದ್ರಿಂದ ನಮಗೆ ಆಲೋಚನೆಗಳು ಬರಲು ಮತ್ತು ನಮ್ಮಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಯಾವಾಗಲೂ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಕೂಡಿರುತ್ತವೆ. ಮತ್ತು ಜೀವನದಲ್ಲಿ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಪಾಸಿವಿಟ್ ಎನರ್ಜಿ ತುಂಬುತ್ತದೆ. ವಿಭೂತಿ ಬರೀ ನಮ್ಮ ಸಂಪ್ರದಾಯವಲ್ಲ. ನಮ್ಮ ಆರೋಗ್ಯದ ಗುಟ್ಟೂ ಕೂಡ ಅಡಗಿದೆ.
ಮರ ಅಥವಾ ಕಟ್ಟಿಗೆ. ಹಸುವಿನ ತುಪ್ಪ, ಕೆಲವು ಗಿಡಮೂಲಿಕೆಗಳು, ಕಾಳುಗಳು ಮತ್ತು ಇನ್ನಿತರ ಶುದ್ಧವಾದ ಪದಾರ್ಥಗಳಿಂದ ವಿಭೂತಿ ತಯಾರು ಮಾಡಲಾಗುತ್ತದೆ. ಇದೇ ಕಾರಣಕ್ಕೆ ವಿಭೂತಿಗೆ ಆಯುರ್ವೇದದ ಔಷಧಿ ಎನ್ನಲಾಗುತ್ತೆ. ನಮ್ಮ ದೇಹದಲ್ಲಿ ಕಂಡುಬರುವ ಅತಿಯಾದ ತೇವಾಂಶವನ್ನು ವಿಭೂತಿ ಹೀರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಶೀತ ಹಾಗೂ ಕೆಮ್ಮಿನ ಸಮಸ್ಯೆಯನ್ನು ದೂರಮಾಡುತ್ತದೆ. ವಿಭೂತಿ ಧರಿಸುವುದರಿಂದ ದೇಹದ ಜಡತ್ವ ದೂರವಾಗುತ್ತದೆ. ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ನರಮಂಡಲಗಳನ್ನು ಉತ್ತೇಜಿಸಿ ಎಲ್ಲಾ ಶಕ್ತಿ ಚಕ್ರಗಳನ್ನು ಸಕಾರಾತ್ಮಕವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ನಮ್ಮ ಹಣೆಯ ಮೇಲ್ಭಾಗದಲ್ಲಿ, ತೋಳು ಹಾಗೂ ಎದೆಯ ಭಾಗದಲ್ಲಿ ವಿಭೂತಿ ಹಚ್ಚಿಕೊಳ್ಳುವುದರಿಂದ, ಶೀತದ ಸಮಸ್ಯೆಯಿಂದ ಪಾರಾಗಬಹುದು. ಜ್ವರ ಬಂದಂತಹ ಸಂದರ್ಭದಲ್ಲಿ ಇಡೀ ದೇಹಕ್ಕೆ ವಿಭೂತಿಯಿಂದ ಉಜ್ಜುವುದರಿಂದ ಅತ್ಯುತ್ತಮ ಪರಿಹಾರ ಸಿಗುತ್ತದೆ. ಕಾಲ ಎಷ್ಟೇ ಬದಲಾದ್ರೂ ನಮ್ಮ ಪೂರ್ವಜರ ನಂಬಿಕೆಗಳು ಮಾತ್ರ ಇಂದಿಗೂ ಒಳಿತನ್ನೇ ಮಾಡುತ್ತಿವೆ.