6 ಪವರ್‌ಫುಲ್ ರಕ್ತ ಶುದ್ಧೀಕರಿಸುವ ಆಹಾರಗಳು! – ಇವುಗಳ ಸೇವನೆಯಿಂದ ಆರೋಗ್ಯಕ್ಕೇನು ಲಾಭ?
ದೇಹದ ಆರೋಗ್ಯ ಕೇವಲ ವ್ಯಾಯಾಮವನ್ನು ಮಾತ್ರ ಅವಲಂಬಿಸಿಲ್ಲ.. ನಾವು ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.. ಅದರಲ್ಲೂ ದೇಹಕ್ಕೆ ಬೇಡದಿರುವ ಆದರೆ ಬಾಯಿಗೆ ರುಚಿಸುವ ಹಲವು ರೀತಿಯ ಆಹಾರ ಸೇವಿಸಿ ಸೇವಿಸಿ ಹೆಲ್ತ್ ಹಾಳು ಮಾಡಿಕೊಳ್ಳೋದು ಕಾಮನ್.. ಅಂತವ್ರು ತಮ್ಮ ದೇಹವನ್ನು ವಿಷಮುಕ್ತ ಮಾಡಿಕೊಳ್ಳೋದಿಕ್ಕೆ ಇರುವ ಉತ್ತಮ ಆಹಾರಗಳನ್ನು ಸೇವಿಸೋದು ಮುಖ್ಯ..
ಪಾಲಕ್ ಸೊಪ್ಪು ಸೇರಿದಂತೆ ಸೊಪ್ಪುಗಳಲ್ಲಿ ಕ್ಲೋರೋಫಿಲ್ ಅಂಶ ಇರೋದ್ರಿಂದ ಲಿವರ್ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ.. ಇದು ರಕ್ತದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.. ಎರಡನೆಯದ್ದು ಬೆರ್ರಿ ಹಣ್ಣುಗಳು.. ಬ್ಲೂ ಬೆರ್ರಿ, ಸ್ಟ್ರಾಬೆರ್ರಿ, ರಾಸ್ ಬೆರ್ರಿಯಂತಹ ಹಣ್ಣುಗಳು ಕೂಡ ಆಂಟಿ ಆಕ್ಸಿಡೆಂಟ್‌ಗಳನ್ನು ಉತ್ಪಾದಿಸಿ, ದೇಹ ಸೇರಿಕೊಂಡಿರುವ ವಿಷಕಾರಿ ಅಂಶಗಳನ್ನು ಕಡಿಮೆ ಮಾಡಿ ಬ್ಲಡ್ ಪ್ಯೂರಿಫೈ ಮಾಡಲು ಸಹಕಾರಿಯಾಗಿವೆ..
ಇದನ್ನೂ ಓದಿ: ಪ್ರಚಾರದ ಕಾವು ಹೆಚ್ಚಾಗುತ್ತಿದ್ದಂತೆ ಹೂವಿನ ಹಾರಕ್ಕೆ ಫುಲ್ ಡಿಮ್ಯಾಂಡ್!
ನಮ್ಮ ಮನೆಯಲ್ಲೇ ಇರುವ ಬೆಳ್ಳುಳ್ಳಿ.. ಬೆಳ್ಳುಳ್ಳಿಯಲ್ಲಿ ರೋಗನಿರೋಧಕ ಹೆಚ್ಚಿಸುವ ಸಾಮರ್ಥ್ಯವಿದ್ದು, ಬಿಳಿ ರಕ್ತ ಕಣಗಳನ್ನು ಉತ್ಪಾದಿಸಿ, ರಕ್ತ ಚಲನೆಯನ್ನು ಪ್ರಚೋದಿಸುತ್ತದೆ.. ಇದರಿಂದಾಗಿ ರಕ್ತದ ಶುದ್ಧೀಕರಣಕ್ಕೆ ವೇಗ ಸಿಗುತ್ತದೆ..
ಅರಿಶಿನದ ಸೇವನೆಯೂ ದೇಹದಲ್ಲಿ ರಕ್ತಪರಿಚನೆಯ ದೃಷ್ಟಿಯಿಂದ ತುಂಬಾನೆ ಸಹಕಾರಿಯಾಗಿದೆ.. ಅರಿಶಿನದಲ್ಲಿ ಕರ್ಕುಮಿನ್ ಎನ್ನುವ ಆಂಟಿ ಆಕ್ಸಿಡೆಂಟ್ ಇದ್ದು, ದೇಹದಲ್ಲಿ ಉರಿಯ ಬಾಧೆ ತಗ್ಗಿಸುವ ಕೆಲಸ ಮಾಡುತ್ತದೆ.. ಇದು ಕೂಡ ರಕ್ತದ ಶುದ್ಧೀಕರಣ ಮತ್ತು ಚಲನೆಗೆ ಸಹಾಯ ಮಾಡುತ್ತದೆ..
ನಿಂಬೆ ಹಣ್ಣಿನ ರಸವನ್ನು ಜ್ಯೂಸ್ ಮೂಲಕ ಸೇವನೆ ಮಾಡುವುದರಿಂದ ಕೇವಲ ವಿಟಮಿನ್ ಸಿ ಸಿಗೋದು ಮಾತ್ರವಲ್ಲ.. ಲಿವರ್ ಚೆನ್ನಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದಮನ ಮಾಡುತ್ತದೆ..
ನಿಯಮಿತವಾಗಿ ಗ್ರೀನ್ ಟಿ ಸೇವನೆಯೂ ದೇಹವನ್ನು ವಿಷಮುಕ್ತ ಮಾಡುವಲ್ಲಿ ನೆರವಾಗುತ್ತದೆ.. ಗ್ರೀನ್ ಟಿ ಸೇವನೆ, ಹೃದಯ ಚೆನ್ನಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಮತ್ತು ಇದರಿಂದಾಗಿ ಉತ್ತಮ ಆರೋಗ್ಯ ನಮ್ಮದಾಗುತ್ತದೆ.. ಇವು ಸಿಂಪಲ್ಲಾಗಿ ನಾವು ಮನೆಯಲ್ಲಿ ಅನುಸರಿಸಬಹುದಾದ ಡಯೆಟ್‌ಗಳು.. ಆದ್ರೆ ನಿಜಕ್ಕೂ ಏನಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.