ಪ್ರತಿದಿನ ತುಪ್ಪವನ್ನು ಸೇವಿಸುತ್ತೀರಾ? – ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತುಪ್ಪ ಸೇವಿಸೋದು ಸೇಫ್?

ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಸೇವನೆಯು ನಮ್ಮ ಆರೋಗ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ತುಪ್ಪ ಸೇವಿಸುವುದರಿಂದ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ. ಆದ್ರೆ ಪ್ರತಿದಿನ ತುಪ್ಪ ಸೇವಿಸಬಹುದಾ ಅನ್ನೋ ಗೊಂದಲ ಅನೇಕರಲ್ಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಂಜಾಬ್ ಕಿಂಗ್ ಕ್ಯಾಪ್ಟನ್ ಶ್ರೇಯಸ್ ಎಡವಿದ್ದೆಲ್ಲಿ? – ಐಪಿಎಲ್ನಲ್ಲಿ ಕಳಪೆ ಬ್ಯಾಟಿಂಗ್ಗೆ ಸೂರ್ಯ ನಾಯಕತ್ವ ಕೈತಪ್ಪುತ್ತಾ?
ಸಾಮಾಜಿಕ ಜಾಲತಾಣಗಳಲ್ಲೂ ತುಪ್ಪದ ಆರೋಗ್ಯ ಲಾಭಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ತುಪ್ಪವನ್ನ “ಸೂಪರ್ ಫುಡ್” ಎಂದು ಹೊಗಳುತ್ತಿದ್ದರೆ, ಇನ್ನೂ ಕೆಲವರು ಮಿತ ಪ್ರಮಾಣವೇ ಮುಖ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ ತಜ್ಞರ ಅಭಿಪ್ರಾಯದಂತೆ ಯಾವುದೇ ಆಹಾರ ಪದಾರ್ಥದಂತೆ ತುಪ್ಪವನ್ನೂ ಮಿತವಾಗಿ ಸೇವಿಸುವುದು ಮುಖ್ಯ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಜೊತೆಗೆ ತುಪ್ಪ ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಅಂತಾ ಅವರು ತಿಳಿಸಿದ್ದಾರೆ.
ತಜ್ಞರ ಪ್ರಕಾರ, ತುಪ್ಪದಲ್ಲಿ ವಿಟಮಿನ್ A, D, E ಮತ್ತು K ಸೇರಿದಂತೆ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು ದೊರೆಯುತ್ತವೆ. ಇವು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ಎಲುಬುಗಳನ್ನ ಬಲಪಡಿಸಲು ಸಹಕಾರಿಯಾಗಬಹುದು. ತುಪ್ಪದಲ್ಲಿರುವ ಬ್ಯೂಟಿರಿಕ್ ಆಸಿಡ್ ಎಂಬ ಅಂಶ ಜೀರ್ಣಕ್ರಿಯೆಗೆ ಸಹಾಯಕವಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
ಇದಲ್ಲದೆ ತುಪ್ಪ ದೇಹಕ್ಕೆ ತ್ವರಿತ ಶಕ್ತಿ ನೀಡುವಲ್ಲಿ ಸಹಾಯಕವಾಗುತ್ತದೆ. ಕೆಲವು ಆರೋಗ್ಯ ತಜ್ಞರ ಪ್ರಕಾರ, ಮಿತ ಪ್ರಮಾಣದಲ್ಲಿ ತುಪ್ಪ ಸೇವಿಸುವುದರಿಂದ ಹೊಟ್ಟೆ ತುಂಬಿದ ಭಾವನೆ ಹೆಚ್ಚು ಕಾಲ ಉಳಿಯಬಹುದು. ಇದರಿಂದ ಅನಗತ್ಯ ತಿಂಡಿಗಳನ್ನ ಕಡಿಮೆ ತಿನ್ನುವ ಸಾಧ್ಯತೆ ಇರುತ್ತದೆ.
ಆದರೆ ವೈದ್ಯರು ಒಂದು ಮಹತ್ವದ ಎಚ್ಚರಿಕೆಯನ್ನೂ ನೀಡಿದ್ದಾರೆ. ತುಪ್ಪದಲ್ಲಿ ಸ್ಯಾಚ್ಯುರೇಟೆಡ್ ಫ್ಯಾಟ್ ಪ್ರಮಾಣ ಹೆಚ್ಚು ಇರುವುದರಿಂದ ಅತಿಯಾಗಿ ಸೇವಿಸುವುದು ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಕೊಲೆಸ್ಟ್ರಾಲ್ ಸಮಸ್ಯೆ, ಹೃದಯ ಸಂಬಂಧಿತ ಕಾಯಿಲೆ ಅಥವಾ ಮೋಟಾಪು ಇರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕೆಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ 1 ರಿಂದ 2 ಟೀ ಸ್ಪೂನ್ಗಳಷ್ಟು ತುಪ್ಪ ಸೇವಿಸುವುದು ಸಾಕು ಎಂದು ಹಲವು ವರದಿಗಳು ಸೂಚಿಸಿವೆ.

ನೋಡಿರಿ

