ಈ ಹೊತ್ತಲ್ಲಿ ರಾಗಿ ಮುದ್ದೆ ಸೇವಿಸಿದ್ರೆ ಆರೋಗ್ಯ ಲಾಭ ಡಬಲ್! – ತೂಕವೂ ಇಳಿಕೆ!

ಆರೋಗ್ಯಕರ ಆಹಾರಗಳಲ್ಲಿ ರಾಗಿಮುದ್ದೆಯೂ ಒಂದು. ಕರ್ನಾಟಕದ ಹಲವು ಭಾಗಗಳಲ್ಲಿ ರಾಗಿ ಮುದ್ದೆಯನ್ನ ಸೇವಿಸುತ್ತಾರೆ. ಆದ್ರೆ ಈ ಹೊತ್ತಲ್ಲಿ ರಾಗಿ ಮುದ್ದೆಯನ್ನ ಸೇವಿಸಿದ್ರೆ ಸಾಕಷ್ಟು ಆರೋಗ್ಯ ಲಾಭಗಳಿವೆ.
ಇದನ್ನೂ ಓದಿ: HITಮ್ಯಾನ್ ಸ್ಥಾನಕ್ಕೆ ಐವರ ರೇಸ್ – ಅಭಿ, ಕಿಶನ್, ವೈಭವ್.. ಯಾರು ಬೆಸ್ಟ್?
ರಾಗಿ ಮುದ್ದೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ರಾಗಿ ಮುದ್ದೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿದೆ. ಬೆಳಗ್ಗೆ ಉಪಹಾರದ ಬದಲು ರಾಗಿ ಮುದ್ದೆಯನ್ನ ಸೇವಿಸಿದ್ರೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೆ, ಮೂಳೆಯ ಸಾಂದ್ರತೆಯೂ ಹೆಚ್ಚುತ್ತದೆ.
ಹೌದು, ರಾಗಿ ಮುದ್ದೆಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಉಪಹಾರದ ಭಾಗವಾಗಿ ಪ್ರತಿದಿನ ಇದನ್ನು ನೀವು ಸೇವಿಸಿದರೆ, ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ. ಅಲ್ಲದೆ, ಹೊಟ್ಟೆಯ ಸಮಸ್ಯೆಗಳನ್ನು ಸಹ ತಡೆಯುತ್ತದೆ. ರಾಗಿ ಮುದ್ದೆಯಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಇರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಹೃದಯ ಆರೋಗ್ಯ ಮತ್ತು ಸದೃಢವಾಗಿರುತ್ತದೆ. ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೇ ರಕ್ತಹೀನತೆಯಿಂದ ಬಳಲುತ್ತಿರುವವರು ರಾಗಿ ಮುದ್ದೆಯನ್ನು ಪ್ರತಿದಿನ ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.
ರಾಗಿ ಮುದ್ದೆಯಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ. ಇದನ್ನು ಪ್ರತಿದಿನ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಾಗಿ ಮುದ್ದೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಚರ್ಮವು ತುಂಬಾ ಆರೋಗ್ಯಕರವಾಗಿರುತ್ತದೆ.
ರಾಗಿ ಮುದ್ದೆ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ ಏಕೆಂದರೆ ಇದನ್ನು ಪ್ರತಿದಿನ ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ. ಇದು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮುದ್ದೆಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ, ಹೀಗಾಗಿ ಕ್ಯಾನ್ಸರ್ನಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ನೋಡಿರಿ

