ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ ಎಸಿಪಿ ಪುತ್ರನ ಭೀಕರ ಹತ್ಯೆ – ಲಾಯರ್ ಮರ್ಡರ್ ರಹಸ್ಯ ಬಿಚ್ಚಿಟ್ಟ ದೆಹಲಿ ಪೊಲೀಸರು
ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗನ ಕೊಲೆಗೆ ಕಾರಣ ಬಹಿರಂಗವಾಗಿದೆ. ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಯಶ್ಪಾಲ್ ಸಿಂಗ್ ಅವರ ಪುತ್ರ ಲಕ್ಷ್ಯ ಚೌಹಾಣ್ ಸೋಮವಾರ ಹರ್ಯಾಣದಲ್ಲಿ ತನ್ನ ಇಬ್ಬರು ಸ್ನೇಹಿತರ ಜೊತೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಮದುವೆ ಮುಗಿಸಿ ಮರುದಿನ ದೆಹಲಿಗೆ ಬರಬೇಕಿತ್ತು. ಈ ವೇಳೆ ಕೊಲೆ ನಡೆದಿದೆ.
ಇದನ್ನೂ ಓದಿ: ಕಾರಿನಲ್ಲಿ ಬೆತ್ತಲಾಗಿ ಜೋಡಿಗಳ ಕುಚು ಕುಚು – ಬುದ್ದಿಹೇಳಲು ಬಂದ ಪೊಲೀಸ್ ಮೇಲೆ ಕಾರು ಚಲಾಯಿಸಿ ಜೋಡಿ ಎಸ್ಕೇಪ್
ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್ಪಾಲ್ ಸಿಂಗ್ ಅವರ ಪುತ್ರ ಲಕ್ಷ್ಯ ಚೌಹಾಣ್ ಸೋಮವಾರ ಹರ್ಯಾಣದಲ್ಲಿ ತನ್ನ ಇಬ್ಬರು ಸ್ನೇಹಿತರ ಜೊತೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಲಕ್ಷ್ಯ ಚೌಹಾಣ್ ವಕೀಲರಾಗಿದ್ದರು. ಮದುವೆ ಮುಗಿಸಿ ಮರುದಿನ ದೆಹಲಿಗೆ ಬರಬೇಕಿತ್ತು. ಆದರೆ ಆ ದಿನ ಲಕ್ಷ್ಯ ಚೌಹಾಣ್ ದೆಹಲಿಯಲ್ಲಿರುವ ತನ್ನ ಮನೆಗೆ ಬಂದಿಲ್ಲ. ಇದರಿಂದ ಆತಂಕಗೊಂಡ ತಂದೆ ಎಸಿಪಿ ಯಶ್ಪಾಲ್ ಸಿಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಮ್ಮ ಸಹೋದ್ಯೋಗಿಯ ಮಗ ಎಂದು ವಿಶೇಷ ಕಾಳಜಿ ವಹಿಸಿ ಹುಡುಕಾಟ ನಡೆಸಿದ್ದಾರೆ. ಈ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ನಡೆಸಿ ಕೊಲೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಎಸಿಪಿ ಪುತ್ರನನ್ನು ಮದುವೆಗೆಂದು ಕರೆದುಕೊಂಡು ಹೋಗಿ ಆತನ ಸ್ನೇಹಿತರೇ ಕೊಲೆ ಮಾಡಿದ್ದರು. 24 ವರ್ಷದ ಲಕ್ಷ್ಯ ಚೌಹಾಣ್ ರನ್ನ ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಲಕ್ಷ್ಯ ಚೌಹಾಣ್, ಅದೇ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ವಿಕಾಸ್ ಭಾರದ್ವಾಜ್‌ನಿಂದ ಹಣ ಪಡೆದಿದ್ದರು. ಆದರೆ ಈ ಹಣವನ್ನು ನೀಡದೆ ಲಕ್ಷ್ಯ ಚೌಹಾಣ್ ಸತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಚೌಹಾಣ್ ಕೊಲೆಗೆ ಸಂಚು ರೂಪಿಸಿ ಮದುವೆಗೆ ಆಹ್ವಾನಿಸಿ ಕೆರದುಕೊಂಡು ಹೋಗಿದ್ದಾರೆ. ಮದುವೆ ಮುಗಿದ ನಂತರ ಮೂವರು ವಾಪಸ್ ಆಗುವಾಗ ಮೂತ್ರವಿಸರ್ಜನೆಗೆಂದು ಕಾಲುವೆಯತ್ತ ಕರೆದೊಯ್ದಿದ್ದಾರೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇಬ್ಬರು ಚೌಹಾಣ್‌ನನ್ನು ಕಾಲುವೆಗೆ ತಳ್ಳಿದ್ದಾರೆ. ಇತ್ತ ಕೃತ್ಯ ಎಸಗಿ ಭಾರದ್ವಾಜ್ ಮತ್ತು ಅಭಿಷೇಕ್ ಘಟನಾ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಭಿಷೇಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪ್ರಕರಣದ ಕುರಿತು ಬಾಯಿಬಿಟ್ಟಿದ್ದಾನೆ. ಇನ್ನು ಪರಾರಿಯಾಗಿರುವ ಭಾರದ್ವಾಜ್‌ಗಾಗಿ ಪೊಲೀಸರು ತೀವ್ರ ಹುಟುಕಾಟ ನಡೆಸುತ್ತಿದ್ದಾರೆ.