ಬೆಟ್ಟಿಂಗ್‌ ಕಟ್ಟಿ 10 ನಿಮಿಷದಲ್ಲಿ ಲೀಟರ್‌ಗಟ್ಟಲೆ ಮದ್ಯ ಸೇವಿಸಿದ..! – ದುಡ್ಡಿನ ಆಸೆಯಿಂದ ಪ್ರಾಣವೇ ಹೊಯ್ತು!

ಬೆಟ್ಟಿಂಗ್‌ ಕಟ್ಟಿ 10 ನಿಮಿಷದಲ್ಲಿ ಲೀಟರ್‌ಗಟ್ಟಲೆ ಮದ್ಯ ಸೇವಿಸಿದ..! – ದುಡ್ಡಿನ ಆಸೆಯಿಂದ ಪ್ರಾಣವೇ ಹೊಯ್ತು!

ಸಣ್ಣ ಪುಟ್ಟ ವಿಚಾರಕ್ಕೂ ಚಾಲೆಂಜ್‌ ಹಾಕೋದು ಸಾಮಾನ್ಯವಾಗಿದೆ. ಯಾರು ಗೆಲ್ಲುತ್ತಾರೋ ಅವರ ಮಾತು ಕೇಳಬೇಕು ಅಂತಾ ಷರತ್ತು ವಿಧಿಸುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಹಾಕಿದ ಚಾಲೆಂಜ್‌ನಿಂದಾಗಿ ಸಾಕಷ್ಟು ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಮದ್ಯ ಕುಡಿಯುವ ಚಾಲೆಂಜ್‌ ಕೂಡ ಹೆಚ್ಚಾಗಿ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ಹಾಸನದಲ್ಲಿ ಮದ್ಯ ಕುಡಿಯುವ ಚಾಲೆಂಜ್‌ ನಲ್ಲಿ ಹೆಚ್ಚು ಮದ್ಯ ಸೇವಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಾಜಿ ಕಟ್ಟಿದ 10 ನಿಮಿಷದಲ್ಲಿ ಲೀಟರ್‌ಗಟ್ಟಲೆ ಮದ್ಯ ಸೇವಿಸಿದ ವ್ಯಕ್ತಿ ಕೆಲವೇ ಹೊತ್ತಲ್ಲಿ ಸಾವನ್ನಪ್ಪಿದ್ದಾನೆ.

ಈ ಘಟನೆ ಚೀನಾದಲ್ಲಿ ನಡೆದಿದೆ. ಚಾಲೆಂಜ್‌ನಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು  ಜಾಂಗ್ ಎಂದು ಗುರುತಿಸಲಾಗಿದೆ. ಬೆಟ್ಟಿಂಗ್​ ಹಣದ ಆಸೆಗೆ ಬಿದ್ದು 10 ನಿಮಿಷದಲ್ಲಿ ಲೀಟರ್‌ಗಟ್ಟಲೆ ಮದ್ಯ ಸೇವಿಸಿ ಆತ ಪ್ರಾಣ ಕಳೆದುಕೊಂಡಿದ್ದಾನೆ.

ಅಷ್ಟಕ್ಕೂ ನಡೆದಿದ್ದೇನು?

ಚೀನಾದ ಕಂಪನಿಯೊಂದರ ಉದ್ಯೋಗಿಗಳು ಕಚೇರಿಯಲ್ಲಿ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ಮದ್ಯ ಸೇವಿಸುವ ಮುನ್ನ ಕಂಪನಿಯ ಮುಖ್ಯಸ್ಥರು ಹಾಗೂ ಉದ್ಯೋಗಿಗಳ ನಡುವೆ ಬೆಟ್ಟಿಂಗ್ ನಡೆದಿತ್ತು. ಬಾಸ್ ಯಾಂಗ್ ಉದ್ಯೋಗಿಗಳೊಂದಿಗೆ ಬಾಜಿ ಕಟ್ಟಿದ್ದಾರೆ. 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಸೇವಿಸಿದವರಿಗೆ ರೂ.5 ಸಾವಿರ ಯುವಾನ್ (ಸುಮಾರು ರೂ.58 ಸಾವಿರ) ಬಹುಮಾನ ನೀಡಲು ಮುಂದಾಗಿದ್ದಾರೆ. ಆದರೆ ಯಾರೂ ಅದಕ್ಕೆ ಸ್ಪಂದಿಸಲಿಲ್ಲ. ಹಾಗಾಗಿ ರೂ. 10 ಸಾವಿರ ಯುವಾನ್ (ಅಂದಾಜು 1.15 ಲಕ್ಷ) ನೀಡುವುದಾಗಿ ಘೋಷಿಸಿದರು. ಆದರೆ, ಯಾರೂ ಮುಂದೆ ಬರಲಿಲ್ಲ. ನಂತರ, ಬಾಸ್ ಯಾಂಗ್ ಅವರು ಒಟ್ಟು ರೂ. ಅವರು 20 ಸಾವಿರ ಯುವಾನ್ (ಸುಮಾರು 2.31 ಲಕ್ಷ ರೂ.) ನೀಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ:  ಅಪ್ಪ ಮಾರಾಟಕ್ಕಿದ್ದಾರೆ..! – 2 ಲಕ್ಷ ರೂಪಾಯಿಗೆ ತಂದೆಯನ್ನೇ ಮಾರಾಟ ಮಾಡಲು ಮುಂದಾದ ಮಗಳು!

ಹಣದಾಸೆಗೆ ಜೀವವೇ ಹೋಯ್ತು!

ಹಣದ ಆಸೆಗೆ ಬಿದ್ದ ಜಾಂಗ್ ಎಂಬ ಉದ್ಯೋಗಿ ಬಾಸ್ ಕಟ್ಟಿದ್ದ ಬೆಟ್ಟಿಂಗ್​ಗೆ ಒಪ್ಪಿಗೆ ಸೂಚಿಸಿದ್ದಾನೆ. ಒಂದು ಲೀಟರ್ ಮದ್ಯದ ಬಾಟಲಿಯನ್ನು ಬಿಚ್ಚಿದ ನಂತರ, ಅವರು 10 ನಿಮಿಷಗಳಲ್ಲಿ ಎಲ್ಲವನ್ನೂ ಕುಡಿದಿದ್ದಾನೆ. ಆದರೆ, ಮದ್ಯ ಸೇವಿಸಿದ ಕೂಡಲೇ ಜಾಂಗ್ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಯಲಿಲ್ಲ

ಆಸ್ಪತ್ರೆಯಲ್ಲಿ ಆತನನ್ನು ವೈದ್ಯರು ಪರೀಕ್ಷಿಸಿದ್ದಾರೆ. ಆದರೆ ಆತ ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅತಿಯಾಗಿ ಮದ್ಯ ಸೇವಿಸಿದ್ದರಿಂದ ಆಲ್ಕೋಹಾಲ್ ವಿಷವಾಗಿ ಉಸಿರುಗಟ್ಟುವಿಕೆ ಮತ್ತು ಹೃದಯ ಸ್ತಂಭನದಿಂದ ಅವರು ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Shwetha M