2 ನಿಮಿಷ ನಿನ್ನ ಧ್ವನಿ ಕೇಳಬೇಕು ಅಂತಾ ಪತ್ನಿಗೆ ಫೋನ್ ಮಾಡಿದ! – ಕೆಲವೇ ಕ್ಷಣದಲ್ಲಿ  ಸೂಸೈಡ್ ಮಾಡ್ಕೊಂಡ ಪತಿ!

2 ನಿಮಿಷ ನಿನ್ನ ಧ್ವನಿ ಕೇಳಬೇಕು ಅಂತಾ ಪತ್ನಿಗೆ ಫೋನ್ ಮಾಡಿದ! – ಕೆಲವೇ ಕ್ಷಣದಲ್ಲಿ  ಸೂಸೈಡ್ ಮಾಡ್ಕೊಂಡ ಪತಿ!

ಗಂಡ ಹೆಂಡತಿ ಮಧ್ಯೆ ಮನಸ್ತಾಪ, ಜಗಳಗಳು ಕಾಮನ್‌. ಸಣ್ಣ ಪುಟ್ಟ ವಿಷ್ಯಕ್ಕೂ ಜಗಳವಾಡಿಕೊಂಡು ದೂರವಾಗುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣಗಳು ಸಾವಿನಲ್ಲಿ ಅಂತ್ಯ ಕಾಣುತ್ತಿವೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಪತಿ, ಪತ್ನಿ ಮಧ್ಯೆ ಗಲಾಟೆ ಉಂಟಾಗಿ ಬಳಿಕ ಗಂಡ ಸಾವಿನ ಹಾದಿ ಹಿಡಿದಿದ್ದಾನೆ.

ಹೌದು, ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಪತ್ನಿ ಗಲಾಟೆ ಮಾಡಿದ್ದಕ್ಕೆ ಮನನೊಂದ ಪತಿರಾಯನೊಬ್ಬ ಆಕೆಗೆ ಫೋನ್ ಮಾಡಿ 2 ನಿಮಿಷ ನಿನ್ನ ಧ್ವನಿ ಕೇಳಬೇಕು ಅಂತಾ ಫೋನ್‌ ಮಾಡಿದ್ದಾನೆ. ಫೋನ್‌ನಲ್ಲಿ ಮಾತನಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಕೆಲಸಕ್ಕೆ ಹೋಗುವ ಆತುರದಲ್ಲಿ ಹೇರ್‌ ಡ್ರೈಯರ್‌ನಲ್ಲಿ ಕೂದಲು ಒಣಗಿಸಿದ್ಲು.. – ಅಯ್ಯಯ್ಯೋ.. ಕೂದಲೇ ಸುಟ್ಟು ಹೋಯ್ತು!

ಅಷ್ಟಕ್ಕೂ ಆಗಿದ್ದೇನು?

ಮಹಾರಾಷ್ಟ್ರದ ಡೊಂಬಿವಿಲಿ ನಿವಾಸಿ ಸುಧಾಕರ್ ಯಾದವ್ ಹಾಗೂ ಪತ್ನಿ ಸಂಜನಾ ಯಾದವ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಮನನೊಂದ ಸಂಜನಾ ಡಿಸೆಂಬರ್ 19ರಂದು ಪತಿ ಮನೆಯನ್ನು ಬಿಟ್ಟು ತನ್ನ ಸೋದರಿಯ ಮನೆಗೆ ಹೋಗಿದ್ದಾಳೆ. ಘಟನೆ ನಡೆದ ಮರುದಿನ, ಡಿಸೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ಸಂಜನಾಗೆ ಫೋನ್ ಮಾಡಿದ ಸುಧಾಕರ್ ನನಗೆ ಎರಡು ನಿಮಿಷ ನಿನ್ನ ವಾಯ್ಸ್ ಕೇಳಬೇಕು ಅನಿಸ್ತಿದೆ ಎಂದು ಹೇಳಿದ್ದಾನೆ. ಈ ವೇಳೆ ಸಂಜನಾ ಕುರ್ಲಾಗೆ ಕೆಲಸಕ್ಕಾಗಿ ತೆರಳುತ್ತಿದ್ದಳು. 2 ನಿಮಿಷ ಮಾತನಾಡಿದ ಬಳಿಕ ಸುಧಾಕರ್ ಫೋನ್ ಕಾಲ್ ಕಟ್ ಮಾಡಿದ್ದ. ನಂತರ ವಾಟ್ಸಪ್‌ನಲ್ಲಿ ಪತಿ ಆತ್ಮಹತ್ಯೆಗೆ ಸಿದ್ಧನಾಗಿ ನಿಂತಿರೋ ಫೋಟೋ ಕಳಿಸಿದ್ದ ಎಂದು ಸಂಜನಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಜೊತೆಗೆ ಗಂಡನ ಮನೆಯ ಪಕ್ಕದ ಮನೆಯಲ್ಲಿದ್ದವರಿಗೆ ಕಾಲ್ ಮಾಡಿ ಮನೆಯಲ್ಲಿ ಚೆಕ್ ಮಾಡುವಂತೆ ಹೇಳಿದ್ದಾಳೆ. ನೆರೆಮನೆಯವರು ಬಂದು ಮನೆ ಬಾಗಿಲು ಬಡಿದರೂ ತೆರೆಯಲಿಲ್ಲ. ಬಳಿಕ ಅವರು ಬಾಗಿಲು ಒಡೆದು ನೋಡಿದಾಗ ಸುಧಾಕರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡೊಂಬಿವಿಲಿಯ ವಿಷ್ಣುನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Shwetha M