₹25 ಲಕ್ಷ ಸಾಲ ಮಾಡಿ ಮಗಳ ಮದುವೆ ಮಾಡಿದ್ರು – ಹೆತ್ತವರ ಜೊತೆ ನವವಿವಾಹಿತೆಯೂ ಸಾವು..!

₹25 ಲಕ್ಷ ಸಾಲ ಮಾಡಿ ಮಗಳ ಮದುವೆ ಮಾಡಿದ್ರು – ಹೆತ್ತವರ ಜೊತೆ ನವವಿವಾಹಿತೆಯೂ ಸಾವು..!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನುವ ಮಾತೇ ಇದೆ. ಯಾಕಂದ್ರೆ ಇದೆರಡರ ಕಷ್ಟ ಅನುಭವಿಸಿದವ್ರಿಗಷ್ಟೇ ಗೊತ್ತಿರುತ್ತೆ. ಹೀಗೆ ಈ ದಂಪತಿ ಕೂಡ ತಮ್ಮ ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಬೇಕು ಅಂತಾ ಲಕ್ಷ ಲಕ್ಷ ಸಾಲ ಮಾಡಿದ್ರು. ಆದ್ರೆ ಅದೇ ಸಾಲ ಕುಟುಂಬವನ್ನೇ ಸರ್ವನಾಶ ಮಾಡಿದೆ. ಮೂವರನ್ನ ಬಲಿ ಪಡೆದಿದೆ.

ಸಾಲಬಾಧೆಯಿಂದ ನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ. ಹನುಮಂತಗೌಡ ಪಾಟೀಲ (54), ಅವರ ಪತ್ನಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಮೃತ ದುರ್ದೈವಿಗಳು.

ಇದನ್ನೂ ಓದಿ : ‘ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ನನ್ನ ಧನ್ಯವಾದ’ – ಅಪಾಯದಿಂದ ಪಾರಾದ ನಟ ವಿಶಾಲ್

ಹನುಮಂತಗೌಡ ಪಾಟೀಲ ಅವರದ್ದು ಮಧ್ಯಮ ವರ್ಗದ ಕುಟುಂಬ. ಹನುಮಂತಗೌಡ ಪಾಟೀಲ ದಂಪತಿ ಸುಮಾರು 25 ಲಕ್ಷ ರೂಪಾಯಿ ಸಾಲ ಮಾಡಿ ಮಗಳ ಮದುವೆ ಮಾಡಿದ್ದರು. ಆದ್ರೆ ಈ ಸಾಲ ತೀರಿಸೋಕೆ ಸಾಧ್ಯವಾಗದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆತ್ತವರ ಸಾವಿನ ಸುದ್ದಿ ಕೇಳಿದ ಮಗಳು ಕೂಡ ಮನನೊಂದು ತಾನೂ ನೇಣು ಬಿಗಿದು ಸೂಸೈಡ್ ಮಾಡಿಕೊಂಡಿದ್ದಾಳೆ.

ವಿಷಯ ಏನಂದ್ರೆ ಗಂಡನ ಮನೆಯಿಂದ ನೇತ್ರಾ ತವರು ಮನೆಗೆ ಬಂದಿದ್ದಳು. ಮಗಳು ಮನೆಗೆ ಬಂದ ವೇಳೆಯೇ ದಂಪತಿ ಆಕೆಗೆ ಗೊತ್ತಿಲ್ಲದಂತೆ ನೇಣು ಬಿಗಿದುಕೊಂಡಿದ್ದರು. ತಂದೆತಾಯಿಯ ಮೃತದೇಹ ನೋಡಿದ ಮಗಳು ಕೂಡ ನೇಣಿಗೆ ಕೊರಳೊಡ್ಡಿದ್ದಾಳೆ. ಮಗಳ ಜತೆ ಸಾಲ ಮತ್ತಿತರ ವಿಚಾರಗಳ ಬಗ್ಗೆ ಮೊದಲು ಚರ್ಚೆ ನಡೆಸಿರುವ ಸಾಧ್ಯತೆಗಳಿವೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸವಣೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

suddiyaana