‘ಕಡೂರಲ್ಲಿ ನೀನು ಹೇಳಿದವ್ರಿಗೇ ಬಿ ಫಾರಂ.. ಹಾಸನ ಕ್ಷೇತ್ರ ಬಿಟ್ಟುಬಿಡು’ – ರೇವಣ್ಣಗೆ ಹೆಚ್​ ಡಿಕೆ ಆಫರ್..!

‘ಕಡೂರಲ್ಲಿ ನೀನು ಹೇಳಿದವ್ರಿಗೇ ಬಿ ಫಾರಂ.. ಹಾಸನ ಕ್ಷೇತ್ರ ಬಿಟ್ಟುಬಿಡು’ – ರೇವಣ್ಣಗೆ ಹೆಚ್​ ಡಿಕೆ ಆಫರ್..!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇದೆ. ಆದರೆ ಮೂರೂ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ವಿಚಾರವೇ ಗೊಂದಲ ಉಂಟು ಮಾಡಿದೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನೀರು ಕುಡಿದಷ್ಟೇ ಸಲೀಸಾಗಿದ್ರೂ ಕೂಡ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಬಿಸಿ ತುಪ್ಪದಂತಾಗಿದೆ. ಒಬ್ಬರಿಗೆ ಟಿಕೆಟ್ ಕೊಟ್ಟು ಮತ್ತೊಬ್ಬರಿಗೆ ಟಿಕೆಟ್ ತಪ್ಪಿದ್ರೆ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಹತ್ತಾರು ಲೆಕ್ಕಾಚಾರ ಹಾಕಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಕೊಡೋದು ಡೌಟ್ – ಬೇರೆ ಅಭ್ಯರ್ಥಿ ಆಯ್ಕೆ ಮಾಡಿದ ಹೈಕಮಾಂಡ್!?

ಅದ್ರಲ್ಲೂ ದೊಡ್ಡಗೌಡ್ರ ಮನೆಯಲ್ಲಿ ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಹಾಸನ ಜೆಡಿಎಸ್ ಟಿಕೆಟ್ ವಿಚಾರ ಕೋಲಾಹಲ ಎಬ್ಬಿಸಿದೆ. ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅಂತಾ ಪಟ್ಟು ಹಿಡಿದು ಕುಳಿತಿದ್ರೆ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಕುಟುಂಬದವ್ರಿಗೆ ಟಿಕೆಟ್ ಇಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳ್ತಿದ್ದಾರೆ. ಖುದ್ದು ದೇವೇಗೌಡರೇ ಅಖಾಡಕ್ಕಿಳಿದ್ರೂ ಕೂಡ ಈ ಗೊಂದಲಕ್ಕೆ ತೆರೆ ಬಿದ್ದಿಲ್ಲ. ಇದೇ ಕಾರಣದಿಂದ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯೂ ನಿಧಾನ ಆಗ್ತಿದೆ. ಹೀಗಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಹೆಚ್​ಡಿಕೆ, ತಮ್ಮ ಸೋದರ ಹೆಚ್.ಡಿ ರೇವಣ್ಣರ ಮನವೊಲಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಹಾಸನ ಕ್ಷೇತ್ರದ ಬದಲಿಗೆ ಕಡೂರು ಕ್ಷೇತ್ರದ ಟಿಕೆಟ್ ನೀನು ಯಾರಿಗೆ ಹೇಳುತ್ತೇಯೋ ಅವರಿಗೇ ಬಿ ಫಾರಂ ಕೊಟ್ಟು ಸಹಿ ಹಾಕಿಕೊಡ್ತೇನೆ. ಆದರೆ ಹಾಸನ ಕ್ಷೇತ್ರದ ಟಿಕೆಟ್ ಕಾರ್ಯಕರ್ತರಿಗೇ ಕೊಡೋಣ. ಸ್ವರೂಪ್ ಗೆ ಈ ಸಲ ಟಿಕೆಟ್ ಕೊಡೋಣ ಎಂದಿದ್ದಾರಂತೆ. ಇನ್ನು ಕಡೂರು ಕ್ಷೇತ್ರದಲ್ಲಿ ವೈಎಸ್​ವಿ ದತ್ತ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದರಿಂದಾಗಿ ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಇತ್ತ ಕಾಂಗ್ರೆಸ್ ಸೇರ್ಪಡೆಯಾಗಿದ್ದ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಡೂರು ವಿಧಾನಸಭಾ ಕ್ಷೇತ್ರ ಬಾರೀ ಕುತೂಹಲಕ್ಕೆ ಕಾರಣವಾಗಿದೆ..

suddiyaana