ಹೆಚ್‌ಡಿಕೆ ನಂತರ ಡಿಕೆಶಿ ಅಮಾವಾಸ್ಯೆ ಪೂಜೆ – ಕಾಲಭೈರವನ ಮೊರೆ ಹೋದರೆ ಸಿಎಂ ಆಗ್ತಾರಾ?

ಹೆಚ್‌ಡಿಕೆ ನಂತರ ಡಿಕೆಶಿ ಅಮಾವಾಸ್ಯೆ ಪೂಜೆ – ಕಾಲಭೈರವನ ಮೊರೆ ಹೋದರೆ ಸಿಎಂ ಆಗ್ತಾರಾ?

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಲಭೈರವನಿಗೆ ಪೂಜೆ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಡಿಕೆ ಶಿವಕುಮಾರ್ ಕಾಲಭೈರವ ಪೂಜೆ ಮಾಡಿಸಿರುವುದರಲ್ಲಿ ವಿಶೇಷತೆಯೂ ಇದೆ. 2018ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ನಾಗಮಂಗಲದ ಕಾಲಭೈರವನಿಗೆ ಮೂರು ಬಾರಿ ಅಮಾವಾಸ್ಯೆ ಪೂಜೆ ಮಾಡಿದ್ದರು. ಬಳಿಕ 20 ತಿಂಗಳುಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ಬಾರಿ ಡಿಕೆ ಶಿವಕುಮಾರ್ ಕೂಡ ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:  ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಪಟ್ಟು – ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ!

ಡಿಕೆ ಶಿವಕುಮಾರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ಈ ಪೂಜೆಯಿಂದಲೂ ತಿಳಿದುಬರುತ್ತಿದೆ ಎನ್ನಲಾಗ್ತಿದೆ. ಆದರೆ, ಡಿ. ಕೆ ಶಿವಕುಮಾರ್ ಮಾತ್ರ ಕಾಲಭೈರವನ ಪೂಜೆ ಕುರಿತು ಯಾವ ಗುಟ್ಟು ಬಿಟ್ಟುಕೊಟ್ಟಿಲ್ಲ. ‘ಇದು ನಮ್ಮ ಮಠ, ಇದು ನಮ್ಮ ಧರ್ಮಪೀಠ, ಹೊಸ ವರ್ಷ, ಭೈರವೇಶ್ವರನ ಅಮಾವಾಸ್ಯೆ ಪೂಜೆ ಬಹಳ ಶ್ರೇಷ್ಠವಾದದ್ದು, ಈ ವರ್ಷ ಈ ರಾಜ್ಯದಲ್ಲಿ ಬಹಳಷ್ಟು ವ್ಯತ್ಯಾಸವಾಗಲಿದೆ ಈ ಹಿನ್ನೆಲೆಯಲ್ಲಿ ನಮಗೆ, ನಿಮಗೆ ಹಾಗೂ ನಾಡಿಗೆ ಒಳ್ಳೆಯದಾಗಲಿ’ ಎಂದು ಪೂಜೆ ಮಾಡಿರುವುದಾಗಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

suddiyaana