‘20-20’ ಸರ್ಕಾರದ ಬಗ್ಗೆ ಹೆಚ್​ಡಿಕೆ-ಈಶ್ವರಪ್ಪ ವಾಕ್ಸಮರ – ಸದನದಲ್ಲಿ ‘ಮೈತ್ರಿ’ ಮಹಾಯುದ್ಧ..!

‘20-20’ ಸರ್ಕಾರದ ಬಗ್ಗೆ ಹೆಚ್​ಡಿಕೆ-ಈಶ್ವರಪ್ಪ ವಾಕ್ಸಮರ – ಸದನದಲ್ಲಿ ‘ಮೈತ್ರಿ’ ಮಹಾಯುದ್ಧ..!

ವಿಧಾನಸಭಾ ಕಲಾಪದಲ್ಲಿ ಇವತ್ತು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ‘20-20’ ಸರ್ಕಾರದ ಬಗ್ಗೆಯೂ ಪ್ರಸ್ತಾಪವಾಯ್ತು. ಹಾಗೇ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಬಗ್ಗೆಯೂ ಜಟಾಪಟಿ ನಡೆಯಿತು. ರಾಷ್ಟ್ರಪಾಲರಿಗೆ ವಂದನಾ ನಿರ್ಣಯದ ಭಾಷಣದ ವೇಳೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ‘20-20’ ಸರ್ಕಾರದ ಬಗ್ಗೆ ಸ್ಪಷ್ಟನೆ ನೀಡಿದ್ರು. ಹಾಗೇ ತುರ್ತು ಪರಿಸ್ಥಿತಿ ಘೋಷಣೆ ಬಗ್ಗೆ ಮಾತನಾಡುತ್ತಾ ‘75ನೇ ಇಸವಿಯಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗಿತ್ತು. ಆದ್ರೆ ಈಗ ಅಘೋಷಿತ ತುರ್ತು ಪರಿಸ್ಥಿತಿಯ ಸನ್ನಿವೇಶ ಇದೆ ಎಂದು ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಸ್ತಾಪ ಮಾಡಿದ್ರು.

ಇದನ್ನೂ ಓದಿ : ಲಾಟರಿ ಪ್ರಧಾನಿ, ಎಟಿಎಂ ಫ್ಯಾಮಿಲಿ, ಲೂಟಿ ಎಂದವರಿಗೆ ಚಾಟಿ – ಹೆಚ್​ಡಿಕೆ ಸಿಟ್ಟಿಗೆ ಸದನದಲ್ಲಿ ಕೋಲಾಹಲ!

ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಯಾವುದು ಇರಲಿಲ್ಲ. ಜಯಪ್ರಕಾಶ್ ನೇತೃತ್ವದಲ್ಲಿ ಎಲ್ಲರೂ ಜೈಲಲ್ಲಿ ಇರಬೇಕಾಗಿ ಬಂತು ಎಂದಿ ಈಶ್ವರಪ್ಪ ಮಾತು ಶುರು ಮಾಡಿದ್ರು. ಈ ವೇಳೆ ವಿಧಾನಸಭಾ ವಿರೋಧಪಕ್ಷದ ಉಪನಾಯಕ ಯು.ಟಿ ಖಾದರ್ ಈಶ್ವರಪ್ಪ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಕೇಳಲು ಜನರಿದ್ದಾರೆ ಅಂತಾ ಏನೇನೋ ಮಾತಾಡೋಕೆ ಬರಬೇಡಿ ಎಂದರು. ಈ ವೇಳೆ ಸದನದಲ್ಲಿ ಮತ್ತೆ ಗದ್ಧಲ ಉಂಟಾಯಿತು.

ಈ ವೇಳೆ ಮತ್ತೆ ಮಾತು ಶುರು ಮಾಡಿದ ಕೆ.ಎಸ್ ಈಶ್ವರಪ್ಪ ‘ತುರ್ತು ಪರಿಸ್ಥಿತಿಯಲ್ಲಿ ಎಲ್ಲಾ ನಾಯಕರು ಜೈಲಿನಲ್ಲಿದ್ರು. ಈಗ ಅಘೋಷಿತ ತುರ್ತು ಪರಿಸ್ಥಿತಿ ಅಂತೀರಿಲ್ಲ. ಹಾಗಾದ್ರೆ ಯಾರು ಜೈಲಲ್ಲಿದ್ದಾರೆ ಎಂದು ಹೆಚ್​ಡಿಕೆಯನ್ನ ಪ್ರಶ್ನಿಸಿದ್ರು. ಹಾಗೇ ‘20-20’ ಸರ್ಕಾರದ ಬಗ್ಗೆಯೂ ಮಾತನಾಡಿದ ಈಶ್ವರಪ್ಪ ‘ನಿಮಗೆ 20 ತಿಂಗಳು  ನಮಗೆ 20 ತಿಂಗಳು ಅಂದಿದ್ರಿ. ಕೊನೆಗೆ ಮಾತು ತಪ್ಪಿದ್ರಿ. ಈ ವೇಳೆ ನಾನು ಮತ್ತು ಜಗದೀಶ್ ಶೆಟ್ಟರ್ ಕುಮಾರಸ್ವಾಮಿ ಮತ್ತು ರೇವಣ್ಣನನ್ನ ಭೇಟಿ ಮಾಡಿದ್ವಿ. ಅಧಿಕಾರ ಬಿಟ್ಟುಕೊಡಿ ಇಲ್ಲದಿದ್ರೆ ಕೆಟ್ಟ ಸಂದೇಶ ಹೋಗುತ್ತೆ ಅಂತಾ ಹೇಳಿದ್ವಿ ಅಂದ್ರು.

ನಿಮ್ಮ ಸರ್ಕಾರದಿಂದಲೇ (ಹೆಚ್​ಡಿಕೆ) ನಾವು ಮಂತ್ರಿಗಳಾಗಿದ್ದು. ಕರ್ನಾಟಕದಲ್ಲಿ ಬಿಜೆಪಿ ಆಗ್ಲಿ, ಜೆಡಿಎಸ್ ಆಗ್ಲಿ ಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ನೀವು ಆವತ್ತು ಜೆಂಟಲ್​ಮೆನ್ ರೀತಿ ನಡೆದುಕೊಂಡಿದ್ದರೆ ಯಡಿಯೂರಪ್ಪವನರಿಗೆ ಅವಕಾಶ ನೀಡಬೇಕಿತ್ತು. ನಮ್ಮ ಪಕ್ಷದಲ್ಲೂ ಸಾಕಷ್ಟು ಸಮಸ್ಯೆ ಇದೆ. ಆದ್ರೆ ನಮಗಿಂತ ನಿಮ್ಮ ಪಕ್ಷಗಳಲ್ಲಿ ಜಾಸ್ತಿ ಇದೆ. ನಾವು 150 ಸೀಟ್ ತಗೊಳ್ತೇವೆ ಅಂತಾ ಹೇಳೋದು ಸಾಮಾನ್ಯ. ನೀವು ಆವತ್ತು 20 ತಿಂಗಳು ಸರ್ಕಾರ ಕೊಟ್ಟು ಬಿಟ್ಟಿದ್ರೆ ಸರಿ ಹೋಗ್ತಿತ್ತು ಎಂದು ಈಶ್ವರಪ್ಪ ಹೆಚ್​ಡಿಕೆಗೆ ಕುಟುಕಿದ್ರು.

ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಹೆಚ್​ಡಿಕೆ ‘ನೀವು (ಈಶ್ವರಪ್ಪ) ಮತ್ತು ಜಗದೀಶ್ ಶೆಟ್ಟರ್ ಆವತ್ತು ಛೇಂಬರ್​ಗೆ ಬಂದಿದ್ರಿ. ನೀವು ಹೇಳಿದ ಹಾಗೆಯೇ ಅಗ್ರಿಮೆಂಟ್ ಆಗಿತ್ತು. ಆದ್ರೆ ಯಶವಂತ ಸಿಂಹ ಬೆಂಗಳೂರಿಗೆ ಬಂದು ದೇವೇಗೌಡರ ಜೊತೆ ಮಾತಾಡಿದ್ರು. ಅದೇನು ಮಾತಾಡಿದ್ದರೋ ಇದುವರೆಗೂ ನನಗೆ ಗೊತ್ತಿಲ್ಲ. ನಾನು ಬಲಿಪಶು ಆದೆ ಎಂದ್ರು.

 

suddiyaana