ರಾಹುಕಾಲದ ಮೊದಲೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಹೆಚ್.ಡಿ. ರೇವಣ್ಣ

ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಿದ್ದ ಎಚ್‌ಡಿ ರೇವಣ್ಣ ಇವತ್ತು ರಿಲೀಸ್ ಆಗಿದ್ದಾರೆ.ಸೋಮವಾರ ಜಾಮೀನು ಸಿಕ್ಕಿದ್ರೂ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸೋದು ವಿಳಂಬವಾಗಿತ್ತು. ಹೀಗಾಗಿ ಸೋಮವಾರ ರಾತ್ರಿ ಜೈಲಿನಲ್ಲೇ ಉಳಿಯಬೇಕಾಯ್ತು. ರೇವಣ್ಣ ಪರ ವಕೀಲರು ಜಾಮೀನಿನ ಷರತ್ತುಗಳನ್ನು ಪೂರೈಸಿದ ಬಳಿಕ ರೇವಣ್ಣ ಜೈಲಿನಿಂದ ಹೊರ ಬಂದಿದ್ದಾರೆ.
ಇದನ್ನೂ ಓದಿ: ರೇವಣ್ಣಗೆ ಜಾಮೀನು ಸಿಕ್ಕಿದ್ದು ನನಗೆ ಖುಷಿಯಾಗಿಲ್ಲ! – ಹೆಚ್‌ಡಿಕೆ ಹೀಗ್ಯಾಕೆ ಹೇಳಿದ್ರು?
ಸಪ್ಪೆ ಮೋರೆಯಿಂದ ಜೈಲಿನಿಂದ ಹೊರ ಬಂದ ರೇವಣ್ಣ ಸಾರಾ ಮಹೇಶ್ ಜೊತೆ ಕಾರಿನಲ್ಲಿ ಹೊರಟ್ರು.. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಕೈ ಮುಗಿದಿದ್ದಾರೆ.. ಇನ್ನು ರೇವಣ್ಣ ಮಂಗಳವಾರ ಬಿಡುಗಡೆಯಾಗುತ್ತಾರೆ ಎಂಬ ವಿಚಾರ ತಿಳಿದಿದ್ದ ಅವರ ಬೆಂಬಲಿಗರು ಮತ್ತು ನೂರಾರು ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ ಜಮಾಯಿಸಿದ್ದರು. ಹೆಚ್ಡಿ ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.
ಇನ್ನು ಹೆಚ್ ಡಿ ರೇವಣ್ಣ ಬೆಂಗಳೂರಿನ ಪದ್ಮನಾಭನಗರದಲ್ಲಿನ ದೇವೇಗೌಡರ ಮನೆಯ ಗೇಟಿನಲ್ಲಿಯೇ ಎಸ್‌ಐಟಿ ಪೊಲೀಸರು ಅರೆಸ್ಟ್ ಆಗಿದ್ರು. ಇದೀಗ ರೇವಣ್ಣ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲಿಯೇ ಪುನಃ ದೇವೇಗೌಡರ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಕೂಡ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ರು. ರೇವಣ್ಣ ಪರವಾಗಿ ಘೋಷಣೆ ಕೂಗುತ್ತಾ ಅವರಿಗೆ ಶುಭ ಕೋರಲು ಹಾರ-ತುರಾಯಿಗಳನ್ನು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ರೇವಣ್ಣ ಮಾಧ್ಯಮಗಳಿಗೂ ಪ್ರತಿಕ್ರಿಯೆ ಕೊಡದೇ, ಅಭಿಮಾನಿಗಳ ಬಳಿಯೂ ಹೋಗದೇ ಸೀದಾ ಮನೆಯೊಳಗೆ ಹೋದರು. ಅಲ್ಲಿ ತಮ್ಮ ತಾಯಿ ಚೆನ್ನಮ್ಮ ಹಾಗೂ ತಂದೆ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಹೆಚ್.ಡಿ ರೇವಣ್ಣ ಅಪ್ಪಟ ದೈವಭಕ್ತರು ಅನ್ನೋದು ಎಲ್ರಿಗೂ ಗೊತ್ತು. ಜೈಲು ಸೇರಲು ಮುಹೂರ್ತ ನೋಡಿದ್ರೋ ಬಿಟ್ರೋ. ಆದ್ರೆ, ಜೈಲಿಂದ ಬಿಡುಗಡೆಯಾಗಲು ಮಾತ್ರ ರೇವಣ್ಣ ಮುಹೂರ್ತ ನೋಡಿದ್ದಾರೆ. ಶುಭ ಗಳಿಗೆಯಲ್ಲಿಯೇ ರೇವಣ್ಣ ಜೈಲಿನಿಂದ ರಿಲೀಸ್ ಆಗಿದ್ದಾರೆ. ಮಧ್ಯಾಹ್ಯ 3:22 ರಿಂದ 5:2 ನಿಮಿಷದವರೆಗೆ ರಾಹುಕಾಲವಿದೆ. ಹೀಗಾಗಿ 3 ಗಂಟೆಗು ಮೊದಲೇ ರೇವಣ್ಣ ಜೈಲಿನಿಂದ ರಿಲೀಸ್ ಆದ್ರು. ಮಧ್ಯಾಹ್ನ 12.5 ರಿಂದ 1:39 ನಿಮಿಷದವರೆಗೆ ಗುಳಿಕ ಕಾಲ ಇದ್ದಿದ್ರಿಂದ ಜೈಲಿನಲ್ಲೇ ಕೂತಿದ್ದರು.