ಹಾಸನ ವಿಡಿಯೋ ಕೇಸ್‌ 4-5 ವರ್ಷ ಹಳೇದು – ಸ್ಪೋಟಕ ಹೇಳಿಕೆ ಕೊಟ್ಟ ಹೆಚ್‌.ಡಿ ರೇವಣ್ಣ

ಹಾಸನ ವಿಡಿಯೋ ಕೇಸ್‌ 4-5 ವರ್ಷ ಹಳೇದು – ಸ್ಪೋಟಕ ಹೇಳಿಕೆ ಕೊಟ್ಟ ಹೆಚ್‌.ಡಿ ರೇವಣ್ಣ

ಹಾಸನ ಪೆನ್‌ಡ್ರೈವ್‌ ಪ್ರಕರಣ ಈಗ ರಾಜ್ಯದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣವನ್ನು ಖಂಡಿಸಿ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಹೆಚ್‌ಡಿ ರೇವಣ್ಣ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಹಾಸನ ವಿಡಿಯೋ ಪ್ರಕರಣದಲ್ಲಿ 4-5 ವರ್ಷ ಹಳೆದು ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್‌ ಕೇಸ್‌ – ಸಂಸದ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ  ಉಚ್ಛಾಟನೆ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.

ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.

ಇನ್ನು  ಸಂತ್ರಸ್ತೆಯ ಅತ್ತೆ ಹಾಗೂ ಕುಟುಂಬಸ್ಥರು ಶಾಕಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಗೌಡರ ಮನೆಗೆ ಕಪ್ಪು ಚುಕ್ಕಿ ತರಲು ದೂರು ನೀಡಿದ್ದಾಳೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂತ್ರಸ್ತೆಯ ಅತ್ತೆ, ನಮ್ಮನ್ನು ರೇವಣ್ಣ ಕುಟುಂಬಸ್ಥರು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ? ಯಾವುದೇ ಕಪ್ಪು ಚುಕ್ಕಿ ಇಲ್ಲ. ನಮ್ಮ ಕಷ್ಟ-ಸುಖವನ್ನ ಭವಾನಿ  ಅಮ್ಮ ನೋಡಿದ್ದಾರೆ. ದೂರುದಾರರ ನಡತೆ ಕೂಡ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ನಡೆದಿಲ್ಲ. ಐದು ವರ್ಷದಿಂದ ಏನು ಮಾಡುತ್ತಿದ್ದರು? ಈಗ ದೂರು ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಮೇಡಂ, ಸಾಹೇಬರು ನಮಗೆ ದೇವರಿದ್ದಂತೆ. ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಿರಬಹುದು. ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಹೆಣ್ಣಾದವಳು ಐದು ವರ್ಷದ ಹಿಂದೆಯೇ ಹೇಳಬಹುದಿತ್ತು. ಇಂದು ಯಾಕೆ ಅವರ ವಿರುದ್ಧ ಮಾತನಾಡುತ್ತಿದ್ದಾಳೆ? ವಿಡಿಯೋ ಸತ್ಯದ ಬಗ್ಗೆ ಪ್ರಶ್ನಿಸಿ ದೂರುದಾರರ ವಿರುದ್ಧವೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.‌

Shwetha M