ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ! – ಹೆಚ್ಡಿ ಕುಮಾರಸ್ವಾಮಿ ಹೊಸ ಪ್ಲ್ಯಾನ್ ಏನು?

ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಅಂತ ಗಮನಿಸುತ್ತಿದ್ದೇನೆ. ಒಳ್ಳೆ ಸರ್ಕಾರ ತಂದು ಜನತೆ ನೆಮ್ಮದಿಯಿಂದ ಇರಬೇಕು. ಹೀಗಾಗಿ ನಾನು ರಾಜ್ಯ ರಾಜಕೀಯಕ್ಕೆ ಬರುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಇದನ್ನೂ ಓದಿ: ಬಾಸ್ ಮನೆಗೆ ವಿಶೇಷ ಅತಿಥಿ ಎಂಟ್ರಿ! – ರಾಣಿ ಕತೆ ಕೇಳಿ ಭಾವುಕರಾದ ಅಶ್ವಿನಿ ಗೌಡ!
ಜೆಡಿಎಸ್ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಸದ್ದು ಮಾಡಿದ್ದ ಡ್ಯಾಡಿ ಈಸ್ ಹೋಮ್ ಎಐ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯೇ ಈ ವಿಡಿಯೋ ಎನ್ನುವ ಮಾತು ಕೇಳಿ ಬಂದಿತ್ತು. ಈ ಚರ್ಚೆ ಬೆನ್ನಲ್ಲೇ ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ಕೊಟ್ಟಿದ್ದಾರೆ. ಇದೀಗ ಈ ಬಗ್ಗೆ ಸುದ್ದಿಗಾರರೊಂದಿಗೆ ಹೆಚ್ಡಿಕೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಅಂತ ಗಮನಿಸುತ್ತಿದ್ದೇನೆ. ಒಳ್ಳೆ ಸರ್ಕಾರ ತಂದು ಜನತೆ ನೆಮ್ಮದಿಯಿಂದ ಇರಬೇಕು. ಆ ನಿಟ್ಟಿನಲ್ಲಿ ನಾಡಿನ ಜನತೆ ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ಅವರು. ನನ್ನ ಕೈಯಲ್ಲಿ ಇಲ್ಲ. ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದ್ರು ತಿಳಿದುಕೊಂಡಿದ್ರೆ, ನಾನು ದೂರ ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯ ರಾಜಕೀಯದಿಂದ ನಾನು ದೂರು ಸರಿಯೋದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ರಾಜ್ಯದ ಜನತೆ. ನಾವು ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಒಳ್ಳೆ ಸರ್ಕಾರ ತರಬೇಕು ಅನ್ನೋದು. ವೈಯಕ್ತಿಕವಾಗಿ ನನ್ನ ಉದ್ದೇಶ ಇದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಪ್ರಧಾನಿಗಳು ಹುದ್ದೆ ಕೊಟ್ಟಿದ್ದಾರೆ. ಆ ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡೋಕೆ ಈಗಾಗಲೇ ಫೌಂಡೇಶನ್ ಹಾಕಿದ್ದೇನೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡ್ತೀನಿ. ರಾಜ್ಯ ರಾಜಕೀಯಕ್ಕೆ ಬರಲೇಬೇಕಾಗುತ್ತದೆ. ಯಾವಾಗ ಅಂತ ತೀರ್ಮಾನ ಮಾಡ್ತೀನಿ ಎಂದಿದ್ದಾರೆ ಹೆಚ್ಡಿ ಕುಮಾರಸ್ವಾಮಿ.

ನೋಡಿರಿ

