‘ನಾನು ಸಿಎಂ ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ – ಕದನಕಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅಬ್ಬರ

ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಆದ್ರೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಚರ್ಚೆಗಿಂತ ಯಾರು ಸಿಎಂ ಆಗ್ತಾರೆ ಅನ್ನೋ ಚರ್ಚೆಯೇ ಜೋರಾಗಿ ನಡೀತಿದೆ. ಈಗಾಗ್ಲೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಹೆಸರು ರೇಸ್ ನಲ್ಲಿದೆ. ಹಾಗೇ ಬಿಜೆಪಿಯಲ್ಲೂ ಕೂಡ ಮುಖ್ಯಮಂತ್ರಿ ಯಾರಾಗಬಹುದು ಅನ್ನೋ ಕುತೂಹಲ ಇದೆ. ಇದರ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾನು ಸಿಎಂ ಆಗೋದನ್ನ ಯಾರೂ ತಪ್ಪಿಸೋಕೆ ಆಗಲ್ಲ ಅಂತಾ ಇವತ್ತು ಅಬ್ಬರಿಸಿದ್ದಾರೆ.
ಇದನ್ನೂ ಓದಿ : ಶಿವಣ್ಣನ ಪ್ರಚಾರ ಟೀಕಿಸಿ ಬೆಪ್ಪಾದ ಪ್ರಶಾಂತ್ ಸಂಬರಗಿ – ಇದಪ್ಪಾ ದೊಡ್ಮನೆ ಫ್ಯಾನ್ಸ್ ಪವರ್ ಅಂದ್ರೆ!
ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ. ರಾಮನಗರ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜಿಲ್ಲೆ. ನಿಮ್ಮ ಆಶೀರ್ವಾದದಿಂದ 14 ತಿಂಗಳು ಸಿಎಂ ಆಗಿದ್ದೆ. ಆದ್ರೆ ಶಾಸಕರನ್ನ ಬೆಟ್ಟಿಂಗ್ ರೀತಿ ಖರೀದಿಸಿ ಸರ್ಕಾರ ಕೆಡವಿದ್ರು. ಆದರೆ ನಾನು ಮತ್ತೆ ಸಿಎಂ ಆಗೋದನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಗರ್ಜಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಏನೇ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ. ಹೀಗಾಗಿ ಜೆಡಿಎಸ್ ಗೇ ಮತ ಹಾಕಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಯೋಜನೆ ಜಾರಿಗೊಳಿಸೋಕೆ ಬದ್ಧ. ಹಾಗೇ ಜನರ ಕನಸನ್ನ ನನಸು ಮಾಡುತ್ತೇನೆಂದು ಭರವಸೆ ನೀಡಿದ್ದಾರೆ.