ಭವಾನಿ ರೇವಣ್ಣ ಸ್ಪರ್ಧೆ ವಿಚಾರ – ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹೇಳಿದ್ದೇನು..?

ಭವಾನಿ ರೇವಣ್ಣ ಸ್ಪರ್ಧೆ ವಿಚಾರ – ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹೇಳಿದ್ದೇನು..?

ಜೆಡಿಎಸ್ ಅಂದ್ರೆ ರಾಜ್ಯ ರಾಜಕೀಯದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಅನ್ನೋ ಮಾತಿದೆ. ಇದೀಗ ನಡೆದಿರೋ ಮತ್ತೊಂದು ಬೆಳವಣಿಗೆ ಹತ್ತಾರು ಚರ್ಚೆಗಳಿಗೆ ಕಾರಣವಾಗಿದೆ.

ಪ್ರತೀ ಸಲ ಚುನಾವಣೆ ಬಂದಾಗಲೂ ಜೆಡಿಎಸ್ ಬಗ್ಗೆ ಹಲವು ನಾಯಕರು ‘ಕುಟುಂಬ ರಾಜಕಾರಣ’ ಎಂದು ಟೀಕೆ ಮಾಡುತ್ತಾರೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ತಾನೇ ಸ್ಪರ್ಧೆ ಮಾಡೋದಾಗಿ ಭವಾನಿ ರೇವಣ್ಣ ಘೋಷಣೆ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಗೊಂದಲದ ಹೇಳಿಕೆ ನೀಡಿದ್ದಾರೆ. ಭವಾನಿಯವರಿಗೂ ಎಲೆಕ್ಷನ್​ಗೆ ನಿಲ್ಲಬೇಕು ಅನ್ನೋ ಆಸೆ ಇದೆ. ಆಸೆ ಇರೋದು ತಪ್ಪಾ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲುವ ಹಕ್ಕಿದೆ. ಆದ್ರೆ ಜನತೆಗೆ ಸಂದೇಶ ಕೊಡುವ ದೃಷ್ಟಿಯಿಂದ ಮತ್ತು ಸಂಘಟನಾ ದೃಷ್ಟಿಯಿಂದ ಏನು ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು ಅದನ್ನ ಪಕ್ಷದಲ್ಲಿ ತೆಗೆದುಕೊಳ್ತೀವಿ ಎಂದಿದ್ದಾರೆ.

ಇದನ್ನೂ ಓದಿ : ಕುರ್ಚಿ ತರಲು ಲೇಟ್ ಆಗಿದ್ದಕ್ಕೆ ರೊಚ್ಚಿಗೆದ್ದ ಸಚಿವ – ಕಾರ್ಯಕರ್ತರ ಮೇಲೆ ಕಲ್ಲೆಸೆದು ದರ್ಪ!

ಮತ್ತೊಂದೆಡೆ ಇದೇ ವಿಚಾರವಾಗಿ ಮಾತನಾಡಿರೋ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಅವರ ಸ್ಪರ್ಧೆ ವಿಚಾರವಾಗಿ ರೇವಣ್ಣ ಅವರಿಗಾಗಲೀ, ಕುಮಾರಸ್ವಾಮಿ  ಅವರಿಗಾಗಲೀ ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಜೆಡಿಎಸ್ ಅಭ್ಯರ್ಥಿಯಾದರೂ ಅದನ್ನ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರೇ ನಿರ್ಧರಿಸಬೇಕು ಎಂದಿದ್ದಾರೆ. ಕುತೂಹಲಕಾರಿ ವಿಚಾರ ಅಂದ್ರೆ ಈಗಾಗ್ಲೇ ವಿಧಾನಸಭಾ ಚುನಾವಣೆಗೆ ಜೆಡಿಎಸ್ 97 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ ಜೆಡಿಎಸ್ ಹೆಡ್ ಕ್ವಾರ್ಟರ್ಸ್ ಆಗಿರೋ ಹಾಸನದಲ್ಲಿ ಮಾತ್ರ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ. ಕುಟುಂಬ ರಾಜಕೀಯದ ವಿಚಾರವಾಗಿರೋ ಟಿಕೆಟ್ ಘೋಷಣೆ ಮಾಡಿಲ್ಲ ಅನ್ನೋ ಆರೋಪ ಇದೆ.

ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಕಕ್ಕೇನಹಳ್ಳಿಯಲ್ಲಿ ಅಣ್ಣಪ್ಪಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಭವಾನಿ ರೇವಣ್ಣ ಈ ಹೇಳಿಕೆ ನೀಡಿದ್ದರು. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಹಾಗಾಗಿ ಕೆಲವೇ ದಿನಗಳಲ್ಲಿ ನಮ್ಮ ಹೆಸರು ಕೂಡ ಹೇಳುತ್ತಾರೆ. ಮುಂದಿನ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟ ಆಗಲಿದೆ ಎಂದಿದ್ದರು.

suddiyaana