ಮುದ್ದಿನ ಪತ್ನಿಗೆ ದೇವೇಗೌಡರಿಂದ ಭಾವುಕ ವಿದಾಯ! – ಪ್ರೀತಿಯ ಅಮ್ಮನಿಗೆ ಮಕ್ಕಳ ಕೊನೆಯ ಮುತ್ತು!

ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು ಇಂದು ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ದೇವೇಗೌಡ ಅವರು ಮುದ್ದಿನ ಮಡದಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮಣ್ಣಿನ ಮಗಳಿಗೆ ಕಣ್ಣೀರ ವಿದಾಯ – ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ
ಅಂತ್ಯಕ್ರಿಯೆಗೂ ಮುನ್ನ ಭಾವುಕರಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಕ್ಕಳ ಆಸೆಯಂತೆ ಈ ಜಾಗದಲ್ಲೇ ಚೆನ್ನಮ್ಮ ಅವರ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ನಾನು ಪ್ರಧಾನಿಯಾಗಲು ರಂಗನಾಥಸ್ವಾಮಿಯ ಅನುಗ್ರಹವೂ, ಚೆನ್ನಮ್ಮ ಅವರ ಬೆಂಬಲವೂ ಕಾರಣ. ನಮ್ಮ ಏಳಿಗೆಯಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದು ಎಂದು ಕಣ್ಣೀರಿಟ್ಟರು.
ನಾನು ಕಣ್ಣೀರು ಹಾಕಲ್ಲ ಮಾತನಾಡುತ್ತೇನೆ, ನನಗೆ ಶಕ್ತಿ ತುಂಬಿದ್ದೇ ಪತ್ನಿ. ನನ್ನ ಸ್ನೇಹಿತರಾದ ಡಾ.ಕೃಷ್ಣ, ಹೆಣ್ಣುಮಕ್ಕಳು, ಅಳಿಯಂದಿರು ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತೀರ್ಮಾನ ಮಾಡಿದರು. ಮಳೆ ಬರುತ್ತೆ ಅಂದುಕೊಂಡಿದ್ದರು, ಎಳ್ಳಷ್ಟು ತೊಂದರೆ ಆಗಲ್ಲ ಎಂದಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿಕೊಟ್ಟವನು ರಂಗನಾಥಸ್ವಾಮಿ. ಒಂದೆಡೆ ರಂಗನಾಥ, ಮತ್ತೊಂದೆಡೆ ಕುಲದೇವರು ದೇವೇಶ್ವರನ ಆಶೀರ್ವಾದ. ನನ್ನ ಬೆಳವಣಿಗೆಗೆ ನಮ್ಮ ಕುಟುಂಬದ ಎಲ್ಲರೂ ಕಾರಣ. ನನ್ನ ಪತ್ನಿ ಚೆನ್ನಮ್ಮ ಅನ್ನಪೂರ್ಣೆ ಎಂದು ಉತ್ಪ್ರೇಕ್ಷೆಯಿಂದ ಹೇಳಲ್ಲ. ಅವರನ್ನು ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ. ನನ್ನ ಬೆಳವಣಿಗೆಗೆ ಪ್ರತಿ ಹಂತದಲ್ಲೂ ಪತ್ನಿ ಚೆನ್ನಮ್ಮ ನೆರವಾದರು. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್.ಡಿ ಕುಮಾರಸ್ವಾಮಿ
ಇನ್ನು ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ತಾಯಿಯನ್ನು ನೋಡುತ್ತಾ ಕಣ್ಣೀರು ಹಾಕಿದ್ದಾರೆ. ಭಾವುಕರಾಗಿ ಮುತ್ತಿಟ್ಟು ಕುಮಾರಸ್ವಾಮು ಅಂತಿಮ ವಿದಾಯ ಹೇಳಿದರು. ಈ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು.
ಅಮ್ಮನಿಗೆ ರೇವಣ್ಣ ಕಣ್ಣೀರ ವಿದಾಯ
ಇನ್ನು ಹಿರಿಯ ಪುತ್ರ ಹೆಚ್ ಡಿ ರೇವಣ್ಣ ಅವರು ಕೂಡ ಚೆನ್ನಮ್ಮ ಅವರನ್ನ ನೋಡುತ್ತಾ ಭಾವುಕರಾಗಿದ್ದಾರೆ. ಅಮ್ಮನನ್ನು ನೋಡುತ್ತಾ ನಿಂತಿದ್ದಾರೆ. ಬಳಿಕ ಪ್ರೀತಿಯ ತಾಯಿಯ ಕೆನ್ನೆಗೆ ಮುತ್ತಿಟ್ಟಿದ್ದಾರೆ.

ನೋಡಿರಿ

