ಕನಕನ ನಾಡಿನಲ್ಲಿ ಮೊಳಗಿದ ಕನ್ನಡ ಡಿಂಡಿಮ –  ಪುಟಿದೆದ್ದ ಸಾಹಿತ್ಯಾಭಿಮಾನ

ಕನಕನ ನಾಡಿನಲ್ಲಿ ಮೊಳಗಿದ ಕನ್ನಡ ಡಿಂಡಿಮ –  ಪುಟಿದೆದ್ದ ಸಾಹಿತ್ಯಾಭಿಮಾನ

ಹಾವೇರಿ: ಹಾವೇರಿಯಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿದೆ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳ ದಂಡೇ ಹರಿದು ಬರುತ್ತಿದೆ. ಅಕ್ಷರ ಜಾತ್ರೆಯ ಅಂಗವಾಗಿ ಇಡೀ ಜಿಲ್ಲೆ ಕಳೆಗಟ್ಟಿದೆ. ಶುಕ್ರವಾರದಿಂದ ಕನಕದ ನಾಡಿನಲ್ಲಿ ಕನ್ನಡದ ಕಂಪು ಪಸರಿಸಿದ್ದು ಕನ್ನಡಿಗರ ಕಣ್ಮನ ತಣಿಸುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡರ ಭಾಷಣವಂತೂ ಅನೇಕ ಅಪಸ್ವರಗಳಿಗೆ ತಕ್ಕ ಉತ್ತರ ನೀಡಿದಂತಿತ್ತು. ದೊಡ್ಡರಂಗೇಗೌಡರು ತಮ್ಮ 48 ಪುಟಗಳ ಭಾಷಣದಲ್ಲಿ ಸಮ್ಮೇಳನದ ಹೊಸ್ತಿಲಲ್ಲಿ ಕೇಳಿಬಂದ ಅನೇಕ ಕೆಲ ವಿವಾದಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇನ್ನು ಸಮ್ಮೇಳನಾಧ್ಯಕ್ಷರು ಕೆಲವೊಂದು ಸಲಹೆಯನ್ನೂ ಕೂಡಾ ನೀಡಿದ್ದಾರೆ. ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರಕಾರ ಕಡ್ಡಾಯಗೊಳಿಸಬೇಕು. ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ನಂತರ ಎಷ್ಟು ಭಾಷೆಗಳನ್ನಾದರೂ ಕಲಿಯಲಿ, ಅನ್ಯ ಭಾಷೆಯ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡುಬರುತ್ತಿರುವುದಕ್ಕೆ ನಾವು ಕುರುಡಾಗಬಾರದು. ಕನ್ನಡ ಮನೆ ಮನದ ಭಾಷೆಯಾಗಿ ಉಳಿಯಬೇಕು ಎಂದಿದ್ದಾರೆ. ಜೊತೆಗೆ ಡಬಲ್ ಎಂಜಿನ್ ಸರ್ಕಾರದ ಅನುಕೂಲಗಳ ಬಗ್ಗೆ ಪದೇ ಪದೇ ಹೇಳುವ ಸರ್ಕಾರ ಕನ್ನಡಕ್ಕೆ ಮಾಡಿದ್ದೇನು ಎಂದು ಪ್ರಶ್ನೆ ಮಾಡಿದರು. ಬೆಳಗಾವಿಯ ಒಂದಂಗುಲ ಜಾಗವನ್ನು ಬಿಡೆವು ಅನ್ನೋದನ್ನ ಒತ್ತಿ ಹೇಳಿದರು.

ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಕನ್ನಡವೆಂದರೆ ಜೇನಿನ ಸವಿ ಎಂಬ ಸಂದೇಶ ಎಲ್ಲರ ಮನಗೆದ್ದಿತ್ತು.  ಇನ್ನಿ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿಯವರು ಶರೀಫರ ಗುರುಗಳಾದ ಗೋವಿಂದ ಭಟ್ಟರ ಮರಿಮೊಮ್ಮಗ ನಾನು. ಹೀಗಾಗಿ ಅವರ ಬಗ್ಗೆ ಮಾತನಾಡುವುದು ನನ್ನ ಧರ್ಮ. ಇಂತಹ ಗುರು ಶಿಷ್ಯರ ಪರಂಪರೆ ಇನ್ನೆಲ್ಲಿ ಕಾಣಲು ಸಾಧ್ಯ ಎಂದರು.  ಇನ್ನು ಕಲಾತಂಡಗಳ ಪ್ರದರ್ಶನ ಕೂಡಾ ಬಂದವರ ಮನಸೆಳೆಯಿತು. ಗಂಧರ್ವ ಲೋಕವೇ ಧರೆಗಿಳಿಯಿತೇನೋ ಎಂಬಂತೆ, ಕರಗ, ಕಂಸಾಳೆ, ಹಗಲುವೇಷ, ಗೊರವರ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ ಕಲಾವಿದರ ಪ್ರದರ್ಶನ ಆಕರ್ಷಕವಾಗಿತ್ತು.

suddiyaana