ಹಾವೇರಿಯಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ- ಸಾಹಿತ್ಯ ಪ್ರೇಮಿಗಳ ಆರೋಗ್ಯ ಕಾಪಾಡಲು ಸಕಲ ಸಿದ್ಧತೆ
ಜನವರಿ 6 ಮತ್ತು 7ರಂದು ಐದು ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಹಾವೇರಿಯಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ- ಸಾಹಿತ್ಯ ಪ್ರೇಮಿಗಳ ಆರೋಗ್ಯ ಕಾಪಾಡಲು ಸಕಲ ಸಿದ್ಧತೆಜನವರಿ 6 ಮತ್ತು 7ರಂದು ಐದು ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಹಾವೇರಿ: ಹಾವೇರಿಯಲ್ಲಿ ಕನ್ನಡ ಡಿಂಡಿಮ ಮೊಳಗಲು ಇನ್ನು ಮೂರೇ ದಿನ ಬಾಕಿ. ಜನವರಿ 6, 7, 8ರಂದು‌ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಾಹಿತ್ಯ ಸಮ್ಮೇಳನ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಇನ್ನು ಸಮ್ಮೇಳನದ ಅಂಗವಾಗಿ ಜನವರಿ 6 ಮತ್ತು 7ರಂದು ಹಾವೇರಿಯ ಐದು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ:  ಸಾಹಿತ್ಯ ಸಮ್ಮೇಳನಕ್ಕೆ ಬರುವ ವಾಹನಗಳ ನಿಲುಗಡೆಗೆ ನೀಲಿನಕ್ಷೆ ಬಿಡುಗಡೆ – ಜಿಲ್ಲಾ ಸಂಚಾರಿ ಪೊಲೀಸರ ವಿನೂತನ ಪ್ರಯೋಗ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಹಿತ್ಯಪ್ರೇಮಿಗಳೇ ಆತಂಕ ಬಿಡಿ. ಖುಷಿಯಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶವನ್ನು ಆರೋಗ್ಯ ಇಲಾಖೆ ರವಾನಿಸಿದೆ. ಮೂರು ದಿನವೂ ಒಟ್ಟು 65 ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಸ್ಥಳೀಯ ತಜ್ಞ ವೈದ್ಯರು ಸೇರಿದಂತೆ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರ ಆರೋಗ್ಯ ತಪಾಸಣೆಗೆ ಒಟ್ಟು 50ರಿಂದ 60 ವೈದ್ಯರಿಂದ ಸೇವೆ ಲಭ್ಯ ಇರಲಿದೆ.

ಇನ್ನು ಸಾಹಿತ್ಯಾಸಕ್ತರು ಕೂಡಾ ಸ್ವಯಂ ಮುಂಜಾಗ್ರತಾ ಕ್ರಮ ಕೈಗೊಂಡು ಸಮ್ಮೇಳನಕ್ಕೆ ಬರುವುದು ಅತ್ಯಾವಶ್ಯಕವಾಗಿದೆ. ಹಾವೇರಿ ಸಮಶೀತೋಷ್ಣ ಪ್ರದೇಶವಾಗಿದೆ. ಹೀಗಾಗಿ ಬೆಚ್ಚಗಿರುವ ಉಡುಪುಗಳನ್ನು ತೊಟ್ಟು ಬರುವುದು ಆರೋಗ್ಯ ದೃಷ್ಟಿಯಿಂದ ಉತ್ತಮ ಅನ್ನೋದು ಆರೋಗ್ಯ ವಲಯದ ತಜ್ಞರ ಅಭಿಪ್ರಾಯ.

suddiyaana