ಚಳಿ ಅಲ್ವಾ… ನಂಗೂ ಶೀತ ಆಗಿದೆ… – ಘರ್ಜಿಸೋ “ಹುಲಿ”ರಾಯನ ನಾನ್ ಸ್ಟಾಪ್ ಸೀನು!

ಚಳಿ ಅಲ್ವಾ… ನಂಗೂ ಶೀತ ಆಗಿದೆ… – ಘರ್ಜಿಸೋ “ಹುಲಿ”ರಾಯನ ನಾನ್ ಸ್ಟಾಪ್ ಸೀನು!

ಹುಲಿ ಕಂಡರೆ ಸಾಕು ಎಲ್ಲರೂ ಎದ್ದು, ಬಿದ್ದು ಓಡುತ್ತಾರೆ. ಇನ್ನೂ ಇದರ ಘರ್ಜನೆ ಕೇಳಿದ್ರೆ ಎದೆಯಲ್ಲಿ ಒಂದು ರೀತಿಯ ನಡುಕ ಬರುತ್ತದೆ. ಇನ್ನೂ ಝೂಗೆ ತೆರಳಿದಾಗಲೂ ಹುಲಿ ಘರ್ಜನೆಯನ್ನು ದೂರದಿಂದ ನೋಡಿ ವಾಪಸಾಗುತ್ತೇವೆ. ಆದರೆ ಎಂದಾದರೂ ಹುಲಿ ಸೀನುವುದನ್ನು ನೋಡಿದ್ದೀರಾ? ನೋಡಿಲ್ಲವೆಂದಾದರೆ ವೈರಲ್ ಆದ ಈ ವಿಡಿಯೋದಲ್ಲಿದೆ ನೋಡಿ.

ಇದನ್ನೂ ಓದಿ: ಚೀತಾ, ಹೈನಾವನ್ನು ಹೀಗೂ ಮಂಗ ಮಾಡಬಹುದು! – ಜಿಂಕೆ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?

ಈಗೀಗ ಚಳಿ ಹೆಚ್ಚಾಗುತ್ತಿದೆ. ಇದರಿಂದಾಗಿ ಕಾಡಲ್ಲಿ ಘರ್ಜಿಸಿ ಪಾಪದ ಪ್ರಾಣಿಗಳನ್ನು ಹೆದರಿಸುತ್ತಿದ್ದ ಹುಲಿರಾಯನಿಗೂ ಶೀತ ಜೋರಾದಂತೆ ಕಾಣುತ್ತಿದೆ. ಹಾಗಾಗಿ ಹುಲಿರಾಯ ಪೆಚ್ಚು ಮೋರೆ ಹಾಕಿ ಯಾವ ಪ್ರಾಣಿಗಳ ಗೋಜಿಗೂ ಹೋಗದೆ ಸುಮ್ಮನೆ ಸೀನುತ್ತಾ ಕೂತಿದ್ದಾನೆ. ಕಾಡಿನ ರಾಜನಾಗಿರೋ ಹುಲಿ ಸೀನುವುದ್ರಲ್ಲೂ ಒಂದು ರೀತಿಯಾದ ಖಡಕ್​, ಸ್ಟೈಲ್​ ಇದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಜನವರಿ 16, 2023 ರಂದು ರೆಡ್ಡಿಟ್‌ನಲ್ಲಿ helenarycroft23 ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ 23 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. “ನೀವು ಹುಲಿ ಸೀನುವುದನ್ನು ನೋಡಿದ್ದೀರಾ? ಅದು ತುಂಬಾ ಸುಂದರವಾಗಿ ಸೀನುತ್ತದೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರನು “ಅದು ಸೀನಿದಾಗ ಅದರ ಮುಖವು ಬದಲಾಗುತ್ತದೆ” ಎಂದು ಹೇಳಿದರೆ, ಇನ್ನೊಬ್ಬರು “ನಾನು ಸೀನುವಂತೆಯೇ ಸೀನುತ್ತದೆ. ನನಗೆ ಸೀನಲು ಇಷ್ಟ. ಸೀನುವ ನಂತರ ನಾನು ಶಾಂತವಾಗಿರುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.

suddiyaana