ಪಾಪ ಈ ಹಾವು ಅದೆಷ್ಟು ರಾತ್ರಿ ನಿದ್ದೆಗೆಟ್ಟಿತ್ತೋ ಏನೋ.. ಆಕಳಿಸಿದ್ದೇ ಆಕಳಿಸಿದ್ದು..
ಆಕಳಿಕೆ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಕಾಡಿನ ರಾಜ ಸಿಂಹ, ಹುಲಿ, ಚಿರತೆಗಳು, ನಾಯಿ, ಬೆಕ್ಕು ಸೇರಿದಂತೆ ಎಲ್ಲಾ ಪ್ರಾಣಿಗಳು ಆಕಳಿಸುತ್ತವೆ. ಇತ್ತೀಚೆಗಷ್ಟೇ ಚಿರತೆಯೊಂದು ಕಾಡಿನ ಮಧ್ಯೆ ನಿಂತು ಆಕಳಿಸಿ ಮೈ ಮುರಿಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಹಾವೊಂದು ಆಕಳಿಸುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಹಾವು ಇದೆ ಎಂದು ಗೊತ್ತಾದಾಗ ಭಯದಿಂದ ಹಾವಿರುವ ಕಡೆ ಹೋಗುವುದಿಲ್ಲ. ಏಕೆಂದರೆ ಅದು ಕಚ್ಚುತ್ತದೆ. ಅದರ ವಿಷ ನಮ್ಮ ದೇಹದೊಳಗೆ ಸೇರಿದರೆ ಸಾವು ಸಂಭವಿಸುತ್ತದೆ ಅಂತಾ ಭಯದಿಂದ ಅದರ ಬಳಿ ಹೋಗುವುದಿಲ್ಲ. ಅದರ ಚಲನವಲನಗಳನ್ನು ವಿಕ್ಷೀಸುವುದಿಲ್ಲ. ಇಲ್ಲೊಂದು ಹಾವು ಆಕಳಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದ್ದು, ಟೆರಿಫೈಯಿಂಗ್ ನೇಚರ್ ಎಂಬ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಆನೆಯೊಂದಿಗೆ ಯುವತಿಯ ಚೆಲ್ಲಾಟ – ಚೆಂಡಿನಂತೆ ಎತ್ತಿ ಬಿಸಾಡಿದ ಗಜರಾಜ
ಈ ವಿಡಿಯೋಕ್ಕೆ, ನೀವು ಎಂದಾದರು ಹಾವು ಆಕಳಿಸುವುದನ್ನು ಕಂಡಿದ್ದೀರಾ? ಎಂಬ ಕ್ಯಾಪ್ಶನ್ ನೀಡಲಾಗಿದೆ. ಜಗತ್ತಿನಲ್ಲಿ ಸುಮಾರು 3,000 ಸಾವಿರ ವಿವಿಧ ಜಾತಿಯ ಹಾವುಗಳಿವೆ. ಅವುಗಳಲ್ಲಿ ಅಂದಾಜು 600 ವಿಷಕಾರಿ ಹಾವುಗಳಿದ್ದು, ಕೆಲವು ವ್ಯಕ್ತಿಯನ್ನು ಕೊಲ್ಲುವ ಕಾರ್ಕೋಟಕ ವಿಷವನ್ನು ಹೊಂದಿರುತ್ತವೆ ಎಂದು ಬರೆಯಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ಕಮೆಂಟ್ ಮಾಡಿದ್ದಾರೆ. ಇಷ್ಟೊಂದು ದೊಡ್ಡದಾಗಿ ಆಕಳಿಸಲು ಅದೆಷ್ಟು ರಾತ್ರಿ ನಿದ್ದೆಗೆಟ್ಟಿತ್ತೋ ಏನೋ. ಯಾವೂರಿಗೆ ಪ್ರವಾಸಕ್ಕೆ ಹೋಗಿತ್ತೋ ಏನೋ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಬೆಳಗಿನ ಹೊತ್ತು ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಮುದ್ದು ಮಗುವಿನಂತೆ ಇದು ಎಷ್ಟು ನಿರಾಯಾಸವಾಗಿ ಆಕಳಿಸಿದೆಯಲ್ಲ. ಆಹಾ ಇದನ್ನು ಈಗಲೇ ಎತ್ತಿಕೊಂಡು ಮಲಗಿಸಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ.
Have you ever seen a snake yawn? pic.twitter.com/zgbYJhtYVs
— Terrifying Nature (@TerrifyingNatur) May 2, 2023