ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತೆ ಈ ಮೀನು! – ಇದರ ವಿಶೇಷತೆ ಏನು ಗೊತ್ತಾ?

ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತೆ ಈ ಮೀನು! – ಇದರ ವಿಶೇಷತೆ ಏನು ಗೊತ್ತಾ?

ಪ್ರಕೃತಿ ವಿಸ್ಮಯಗಳ ಆಗರ.. ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಕೌತುಕಗಳು ನಡೆಯುತ್ತಿರುತ್ತವೆ. ಜೀವಿಗಳು ಅವುಗಳ ರಕ್ಷಣೆಗೆ ಒಂದೊಂದು ಮಾರ್ಗವನ್ನು ಕಂಡುಕೊಂಡಿರುತ್ತವೆ. ಚಿಪ್ಪು ಹಂದಿಗಳು ಅವುಗಳ ಚಿಪ್ಪಿನಿಂದ ರಕ್ಷಿಸಿಕೊಂಡರೆ, ಮುಳ್ಳುಹಂದಿಗಳು ಅವುಗಳ ಮುಳ್ಳಿನಿಂದ ತನ್ನ ರಕ್ಷಿಸಿಕೊಳ್ಳುತ್ತವೆ. ಇನ್ನು ಊಸರವಳ್ಳಿಗಳು ತಮ್ಮ ಮೈ ಬಣ್ಣ ಬದಲಾಯಿಸಿಕೊಂಡು ರಕ್ಷಣೆ ಮಾಡಿಕೊಳ್ಳುತ್ತವೆ. ಹೀಗೆ ಅವುಗಳ ವಿಶೇಷತೆಯ ಕಾರಣದಿಂದಲೇ ಗಮನ ಸೆಳೆಯುತ್ತವೆ. ಇಂತಹ ಜೀವಿಗಳ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಮೀನು ಊಸರವಳ್ಳಿಯಂತೆ ತನ್ನ ಮೈ ಬಣ್ಣ ಬದಲಾಯಿಸುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಕೊರೊನದಂತೆ ಜನರ ಜೀವ ಹಿಂಡುತ್ತಾ ಮಹಾಮಾರಿ?

ಆಗೊಮ್ಮೆ ಈಗೊಮ್ಮೆ ಈ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಇಂತಹ ಅದ್ಭುತಗಳು ನಮ್ಮೆಲ್ಲರನ್ನು ಬೆರಗುಗೊಳಿಸುತ್ತವೆ. ಅದರಲ್ಲೂ ಈ ಬೆರಗುಗೊಳಿಸುವ ಅಪರೂಪದ ಜೀವಸಂಕುಲಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಊಸರವಳ್ಳಿಯಂತೆ ತನ್ನ ಬಣ್ಣವನ್ನು ಬದಲಾಯಿಸುವ ಮೀನಿನ ವಿಡಿಯೋವೊಂದು ಭಾರಿ ವೈರಲ್‌ ಆಗುತ್ತಿದೆ.

ಹೌದು, ವೈರಲ್‌ ಆದ ವಿಡಿಯೋದಲ್ಲಿ  ಈ ವಿಶಿಷ್ಟ ಮೀನು ಕೂಡಾ ಕ್ಷಣಕ್ಕೊಂದು ಬಣ್ಣವನ್ನು ಬದಲಾಯಿಸುತ್ತಿದೆ. ಈ ಮೀನನ್ನು ʼಟೈಲ್ಫಿಶ್ʼ ಅಂತ ಕರಿತಾರೆ. ಕೇವಲ ಗೋಸುಂಬೆ ಮಾತ್ರವಲ್ಲ ಈ ಟೈಲ್ಫಿಶ್ ಕೂಡಾ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಡಿಯೋವನ್ನು @ThebestFigen ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬಣ್ಣವನ್ನು ವೇಗವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಟೈಲ್ ಫಿಶ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಏನಿದೆ?

ವೈರಲ್ ವಿಡಿಯೋದಲ್ಲಿ ನೀರು ತುಂಬಿದ ಬಾಕ್ಸ್ ಒಂದರಲ್ಲಿ ಟೈಲ್ಫಿಶ್ ಮೀನು ಹಾಯಾಗಿ ಈಜಾಡುತ್ತಿರುವ ದೃಶ್ಯವನ್ನು ಕಾಣಬಹುದು. ಇದ್ರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಅತ್ತಿಂದ ಇತ್ತ ಈಜಾಡುತ್ತ ಹೋಗುವ ಸಂದರ್ಭದಲ್ಲಿ ಈ ಮೀನು ತನ್ನ ಬಣ್ಣವನ್ನು ಸಹ ಬದಲಾಯಿಸುತ್ತದೆ. ಮೊದಲಿಗೆ ಆಕಾಶನೀಲಿ ಬಣ್ಣದಲ್ಲಿದ್ದ ಮೀನು ಒಂದೇ ಕ್ಷಣಕ್ಕೆ ಹಳದಿ ಬಣ್ಣಕ್ಕೆ ತಿರುಗುತ್ತದೆ, ಮತ್ತೊಂದು ಕ್ಷಣ ನೋಡಿದಾಗ ಈ ಮೀನು ಹಸಿರು ಬಣ್ಣಕ್ಕೆ ತಿರುಗಿರುತ್ತದೆ. ಗೋಸುಂಬೆಯಂತೆ ಕ್ಷಣ ಕ್ಷಣಕ್ಕೆ ಬಣ್ಣವನ್ನು ಬದಲಾಯಿಸುವ ಈ ಮೀನನ್ನು ಕಂಡು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

Shwetha M